Payal Ghosh: ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ್ದ ನಟಿ ಪಾಯಲ್ ಘೋಷ್ ಮೇಲೆ ಹಲ್ಲೆ ಮತ್ತು ಆಸಿಡ್ ದಾಳಿಗೆ ಯತ್ನ

ಕನ್ನಡದಲ್ಲೂ ನಟಿಸಿದ್ದ ಮುಂಬೈ ಬೆಡಗಿ ಪಾಯಲ್ ಘೋಷ್ ಮೇಲೆ ಮುಂಬೈನಲ್ಲಿ ಹಲ್ಲೆಗೆ ಯತ್ನಿಸಲಾಗಿದೆ. ಈ ಕುರಿತು ಪಾಯಲ್ ವಿಡಿಯೊ ಮುಖಾಂತರ ಮಾಹಿತಿ ಹಂಚಿಕೊಂಡಿದ್ದಾರೆ.

Payal Ghosh: ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ್ದ ನಟಿ ಪಾಯಲ್ ಘೋಷ್ ಮೇಲೆ ಹಲ್ಲೆ ಮತ್ತು ಆಸಿಡ್ ದಾಳಿಗೆ ಯತ್ನ
ಪಾಯಲ್ ಘೋಷ್
Follow us
TV9 Web
| Updated By: shivaprasad.hs

Updated on:Sep 22, 2021 | 9:18 AM

ಮುಂಬೈ: ಇತ್ತೀಚೆಗೆ ಚಿತ್ರರಂಗದ ಹಲವು ನಟಿಯರು ಮೀಟೂ ಅಭಿಯಾನದಲ್ಲಿ ಪಾಲ್ಗೊಂಡು, ತಮಗಾದ ಕಿರುಕುಳಗಳನ್ನು ಹೇಳಿಕೊಂಡಿದ್ದರು. ಜೊತೆಗೆ ಚಿತ್ರರಂಗದಲ್ಲಿ ಇರುವ ಕಾಸ್ಟಿಂಗ್ ಕೌಚ್ ಪಿಡುಗಿನ ಕುರಿತೂ ಮನಬಿಚ್ಚಿ ಮಾತನಾಡಿದ್ದರು. ಮೀಟೂ ಅಭಿಯಾನದಲ್ಲಿ ಈ ಹಿಂದೆ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್ ಇತ್ತೀಚೆಗೆ ದಾಳಿಗೊಳಗಾಗಿದ್ದಾರೆ. ಕೆಲವು ಮುಖವಾಡ ಧರಿಸಿದ ವ್ಯಕ್ತಿಗಳು ತನ್ನ ಮೇಲೆ ಆಸಿಡ್ ಎರಚಲು ಪ್ರಯತ್ನಿಸಿದ್ದಾರೆ. ಅವರ ಕೈಯಲ್ಲಿದ್ದ ಕಬ್ಬಿಣದ ರಾಡ್​ಗಳಿಂದ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಪಾಯಲ್ ಆರೋಪಿಸಿದ್ದಾರೆ.

ಮುಂಬೈನ ಮೆಡಿಕಲ್ ಶಾಪ್ ಒಂದರಲ್ಲಿ ಔಷಧಿಗಳನ್ನು ಖರೀದಿಸಿ ಕಾರಿನಲ್ಲಿ ಕುಳಿತಿದ್ದಾಗ ತನ್ನ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಯಲ್ ಹೇಳಿದ್ದಾರೆ. ಇದರ ವಿವರಗಳನ್ನು ಅವರು ಇನ್ಸ್ಟಾದಲ್ಲಿ ವಿಡಿಯೊ ಮುಖಾಂತರ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ‘‘ನಾನು ನಿನ್ನೆ ಔಷಧಿಗಳನ್ನು ಪಡೆಯಲು ಹೊರಗೆ ಹೋಗಿದ್ದೆ. ಅದನ್ನು ಖರೀದಿಸಿ ನಾನು ನನ್ನ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದಾಗ, ಕೆಲವರು ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಅವರ ಕೈಯಲ್ಲಿ ಗಾಜಿನ ಬಾಟಲಿಯೂ ಇತ್ತು. ಅದು ಏನೆಂದು ನನಗೆ ಗೊತ್ತಿಲ್ಲ. ಆದರೆ ಅದರಲ್ಲಿ ಆಸಿಡ್ ಇರುವಂತೆ ಕಾಣುತ್ತಿತ್ತು. ಅಲ್ಲದೆ ಅವರು ಕಬ್ಬಿಣದ ರಾಡ್‌ಗಳಿಂದ ನನ್ನನ್ನು ಹೊಡೆಯಲು ಪ್ರಯತ್ನಿಸಿದರು. ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಜೋರಾಗಿ ಕೂಗಿಕೊಂಡೆ. ಆಗ ಅವರು ಪರಾರಿಯಾದರು. ಆ ಕ್ಷಣದಲ್ಲಿ ಅವರು ತಂದಿದ್ದ ಕಬ್ಬಿಣದ ರಾಡ್ ನನ್ನ ಎಡಗೈಗೆ ತಾಗಿ ಬಿತ್ತು’’ ಎಂದಿದ್ದಾರೆ.

ಪಾಯಲ್ ಹಂಚಿಕೊಂಡ ವಿಡಿಯೊ:

ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು,ತನ್ನ ಜೀವನದಲ್ಲಿ ಇಂತಹ ಘಟನೆ ಇದುವರೆಗೆ ನಡೆದಿರಲಿಲ್ಲ. ಈ ಘಟನೆಯಿಂದ ಆಘಾತವಾಗಿದ್ದು, ನೋವಿನಿಂದ ನಿದ್ದೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬೆಳವಣಿಗೆಗಳ ಮಾಹಿತಿಯಂತೆ, ರಾಜ್ಯಸಭಾ ಸದಸ್ಯ ರಾಮದಾಸ ಅಠಾವಳೆ ಪಾಯಲ್ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಪಾಯಲ್ ಅಠಾವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಅಠಾವಳೆ) ಮಹಿಳಾ ಘಟಕದ ಉಪಾಧ್ಯಕ್ಷೆಯೂ ಹೌದು. ಈ ಕುರಿತು ಪಾಯಲ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

View this post on Instagram

A post shared by Payal Ghosh (@iampayalghosh)

ಪಾಯಲ್ ಅವರು ಈ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ಅನುರಾಗ್ ಅವರು ಪಾಯಲ್ ಆರೋಪಿಸಿದ ಸಮಯದಲ್ಲಿ ತಾನು ಶ್ರೀಲಂಕಾದಲ್ಲಿದ್ದೆ ಎಂದು ಪೂರಕ ದಾಖಲೆಗಳನ್ನು ಒದಗಿಸಿದ್ದರು. ಜೊತೆಗೆ ಪ್ರಕರಣದಲ್ಲಿ ಪಾಯಲ್ ನಟಿ ರೀಚಾ ಛಡ್ಡ ಅವರ ಹೆಸರನ್ನೂ ಎಳೆದು ತಂದಿದ್ದರು. ಇದರ ವಿರುದ್ಧ ರೀಚಾ ಛಡ್ಡ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಂತಿಮವಾಗಿ ಪಾಯಲ್ ನ್ಯಾಯಾಲಯದ ಸಮ್ಮುಖದಲ್ಲಿ ರೀಚಾ ಅವರಲ್ಲಿ ಕ್ಷಮೆ ಕೇಳಿದ್ದರು. ಅಲ್ಲಿಗೆ ಪ್ರಕರಣ ಅಂತ್ಯವಾಗಿತ್ತು.

ಪಾಯಲ್ ಘೋಷ್ ಕನ್ನಡದ ಚಿತ್ರವೊಂದರಲ್ಲಿ ನಟಿಸಿದ್ದು, ‘ವರ್ಷಧಾರೆ’ ಚಿತ್ರದಲ್ಲಿ ಮೈಥಿಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2010ರಲ್ಲಿ ತೆರೆಕಂಡ ಈ ಚಿತ್ರವನ್ನು ವೇಮಗಲ್ ಜಗನ್ನಾಥ ರಾವ್ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಪಾಯಲ್ ತಮ್ಮ ಅಭಿನಯದಿಂದ ಗುರುತಿಸಿಕೊಂಡಿದ್ದರು. ನಂತರ ಅವರು ಟಾಲಿವುಡ್​ನಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ:

TSAFF2021: ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆಯಾದ ಕನ್ನಡದ ‘ನಾನು ಲೇಡೀಸ್’

ಇದೆಲ್ಲಾ ಒಂದು ಸ್ಕೋರಾ? 11 ವರ್ಷಗಳ ಹಿಂದೆ RCB ಪರ ದೀಪಿಕಾ ಪಡುಕೋಣೆ ಮಾಡಿದ ಟ್ವೀಟ್ ವೈರಲ್

(Actress Payal Ghosh attacked by Masked people and Politician Ramdas Athavale visits her house)

Published On - 7:36 pm, Tue, 21 September 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ