AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amala Paul: ಖಾಸಗಿ ಅಂಗದ ಬಗ್ಗೆ ಅಶ್ಲೀಲ ಕಮೆಂಟ್​ ಹಾಕಿದವರಿಗೆ ಚಳಿ ಬಿಡಿಸಿದ ಅಮಲಾ ಪೌಲ್

ಅಮಲಾ ಪೌಲ್​ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಗ್ಲ್ಯಾಮ್​ ಲುಕ್​ ಸಾಕಷ್ಟು ಮಂದಿಗೆ ಇಷ್ಟವಾಗಿದೆ. ಈ ಕಾರಣಕ್ಕೆ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಲಕ್ಷಾಂತರ ಹಿಂಬಾಲಕರಿದ್ದಾರೆ.

Amala Paul: ಖಾಸಗಿ ಅಂಗದ ಬಗ್ಗೆ ಅಶ್ಲೀಲ ಕಮೆಂಟ್​ ಹಾಕಿದವರಿಗೆ ಚಳಿ ಬಿಡಿಸಿದ ಅಮಲಾ ಪೌಲ್
ಖಾಸಗಿ ಭಾಗದ ಬಗ್ಗೆ ಅಶ್ಲೀಲ ಕಮೆಂಟ್​ ಹಾಕಿದವರಿಗೆ ಚಳಿ ಬಿಡಿಸಿದ ಅಮಲಾ ಪೌಲ್
TV9 Web
| Edited By: |

Updated on:Sep 22, 2021 | 2:21 PM

Share

ಸೆಲೆಬ್ರಿಟಿಗಳು ಅಭಿಮಾನಿಗಳ ಜತೆ ಸಂಪರ್ಕದಲ್ಲಿರೋಕೆ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ಗೆಳೆಯರ ಜತೆ, ಕುಟುಂಬದ ಜತೆ ಕಳೆದ ಸಮಯವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈ ವೇಳೆ ಕೆಲವರು ತಮ್ಮ ಮನಸ್ಸಿಗೆ ಬಂದ ಕಮೆಂಟ್​ ಮಾಡುತ್ತಾರೆ. ಹಾಟ್​ ಫೋಟೋಗಳನ್ನು ಹಂಚಿಕೊಂಡರಂತೂ ಮುಗಿಯಿತು. ಅದಕ್ಕೆ ಬರುವ ಕಮೆಂಟ್​ಗಳಿಗೆ ನೈತಿಕತೆಯ ಮಿತಿ ಇರುವುದಿಲ್ಲ. ಸಾಕಷ್ಟು ಮಂದಿ ಅಶ್ಲೀಲವಾಗಿ ಕಮೆಂಟ್​ ಹಾಕುತ್ತಾರೆ. ಇದಕ್ಕೆ ಹೀರೋಯಿನ್​ಗಳು ಬಹುತೇಕವಾಗಿ ಮೌನ ತಾಳುತ್ತಾರೆ. ಆದರೆ, ನಟಿ ಅಮಲಾ ಪೌಲ್​ ಹಾಗಲ್ಲ. ಅಶ್ಲೀಲ ಕಮೆಂಟ್​ ಹಾಕಿದವರಿಗೆ ಅವರು ಖಡಕ್​ ಉತ್ತರ ನೀಡಿದ್ದಾರೆ.

ಅಮಲಾ ಪೌಲ್​ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಗ್ಲ್ಯಾಮ್​ ಲುಕ್​ ಸಾಕಷ್ಟು ಮಂದಿಗೆ ಇಷ್ಟವಾಗಿದೆ. ಈ ಕಾರಣಕ್ಕೆ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಲಕ್ಷಾಂತರ ಹಿಂಬಾಲಕರಿದ್ದಾರೆ. ನಟನೆ ಜತೆಗೆ ಅವರು ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಸುದ್ದಿಯಾಗುತ್ತಾರೆ.

ಅಮಲಾ ಸಹೋದರ ಅಭಿಜಿತ್ ಮದುವೆ ಆಗುತ್ತಿದ್ದಾರೆ. ಮದುವೆಗೂ ಮೊದಲು ಅಭಿಜಿತ್​ ಬ್ಯಾಚುಲರ್ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಗೆ ಅಮಲಾ ಸರ್​ಪ್ರೈಸ್​ ಎಂಟ್ರಿ ಕೊಟ್ಟಿದ್ದಾರೆ. ಚಿಕ್ಕ ಡ್ರೆಸ್​ ಹಾಕಿ, ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಇಂಗ್ಲಿಷ್​ ಹಾಡಿಗೆ ಡಾನ್ಸ್​ ಮಾಡಿದ್ದಾರೆ. ಇದು ಸಂಪೂರ್ಣವಾಗಿ ಅವರು ಕುಟುಂಬದ ಜತೆ ಕಳೆದ ಸಮಯ. ಆದರೆ, ಅವರು ಹಾಕಿದ್ದ ಬಟ್ಟೆ ಅನೇಕರ ಕಣ್ಣನ್ನು ಕುಕ್ಕಿದೆ.

View this post on Instagram

A post shared by Amala Paul (@amalapaul)

ಈ ವಿಡಿಯೋ ನೋಡಿದ ವ್ಯಕ್ತಿಯೋರ್ವ ‘ಅವರ ಖಾಸಗಿ ಅಂಗಾಗಳು ಹೇಗೆ ಕುಣಿಯುತ್ತಿವೆ ನೋಡಿ. ಅದನ್ನು ನೋಡಿದರೆ ಅವರು ಇಂದು ಏನು ಬಯಸುತ್ತಾರೆ ಎಂಬುದು ಗೊತ್ತಾಗುತ್ತದೆ’ ಎಂದು ಕಮೆಂಟ್​ ಮಾಡಿದ್ದ. ಇದಕ್ಕೆ ಅಮಲಾ ವ್ಯಂಗ್ಯವಾಗಿ ‘ನಿನಗೆ ಗೊತ್ತಾಯಿತಲ್ಲ’ ಎಂದು ಉತ್ತರಿಸಿದ್ದಾರೆ. ಇನ್ನೋರ್ವ ‘ಲೆಜೆಂಡ್​ಗಳಿಗೆ ಮಾತ್ರ ಅದು ಕಾಣುತ್ತದೆ’ ಎಂದು ಖಾಸಗಿ ಅಂಗ ಕಾಣುತ್ತಿದೆ ಎಂದು ಪರೋಕ್ಷವಾಗಿ ಬರೆದುಕೊಂಡಿದ್ದ. ಇದಕ್ಕೆ ಅವರು ಖಾರವಾಗಿ ಉತ್ತರಿಸಿದ್ದಾರೆ.

ಸದ್ಯ, ಈ ಕಮೆಂಟ್​ ಸ್ಕ್ರೀನ್​ಶಾಟ್​ಗಳು ಸಾಕಷ್ಟು ವೈಲರ್​ ಆಗುತ್ತಿವೆ. ಅನೇಕರು ಅಮಲಾ ಪೌಲ್​ ಈ ರೀತಿ ಖಡಕ್​ ಆಗಿ ಉತ್ತರಿಸಿದ್ದಕ್ಕೆ ಭೇಷ್​ ಎಂದಿದ್ದಾರೆ. ಅವರ ಈ ಉತ್ತರದಿಂದ ನಾಲ್ಕು ಜನರಿಗೆ ಭಯ ಹುಟ್ಟಿದೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ‘ಆ್ಯಸಿಡ್​ ಹಾಕಲು ಮಾಜಿ ಪ್ರಿಯಕರ ನನ್ನನ್ನು ದಾರಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿದ್ದ; ಕರಾಳ ಸತ್ಯ ಬಿಚ್ಚಿಟ್ಟ ಬಿಗ್​ ಬಾಸ್​ ಸ್ಪರ್ಧಿ

Rishab Shetty: ತೆಲುಗಿನಲ್ಲೂ ಮಿಂಚಲು ತಯಾರಾಗಿದ್ದಾನೆ ಕನ್ನಡದ ‘ಹೀರೋ’!

Published On - 1:54 pm, Wed, 22 September 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್