‘ಮಗನಿಗೆ ಒಳ್ಳೆಯ ಅಪ್ಪ ಇದ್ದಾನೆ’; ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮೌನ ಮುರಿದ ಮಯೂರಿ

ನಟಿ ಮಯೂರಿ ತಮ್ಮ ವಿಚ್ಛೇದನ ವದಂತಿಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳಿದ್ದರೂ, ಮಯೂರಿ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ, ಅದರಲ್ಲೂ ವಿಚ್ಛೇದನ ಕುರಿತು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಗ ಆರವ್‌ನ ಉತ್ತಮ ಪೋಷಣೆ ಮತ್ತು ಸಂತೋಷವೇ ತಮ್ಮ ಆದ್ಯತೆ ಎಂದು ಹೇಳಿದ್ದಾರೆ.

‘ಮಗನಿಗೆ ಒಳ್ಳೆಯ ಅಪ್ಪ ಇದ್ದಾನೆ’; ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮೌನ ಮುರಿದ ಮಯೂರಿ
ಮಯೂರಿ

Updated on: Feb 11, 2026 | 4:59 PM

ಮಯೂರಿ (Mayuri) ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತುಂಬಾನೇ ಫೇಮಸ್ ಆದವರು. ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮಾಡಿದ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ನಂತರ ಹಿರಿತೆರೆಗೆ ಕಾಲಿಟ್ಟರು. ಅಲ್ಲಿಯೂ ಜನಪ್ರಿಯತೆ ಸಿಕ್ಕಿತು. 2020ರಲ್ಲಿ ಅವರು ಮದುವೆ ಆದರು. ಆದರೆ, ಅವರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವರದಿ ಇದೆ. ಆದರೆ, ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದ್ದಾರೆ.

ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ ಮಯೂರಿ. ‘ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ. ಏನೇ ನಡೆದರೂ ಹೀಲ್ ಮಾಡಿಕೊಂಡು ಮುಂದೆ ಸಾಗುತ್ತೇನೆ. ನನಗೆ ಕಣ್ಣೀರು ಇತ್ತೀಚೆಗೆ ಬರುತ್ತಿಲ್ಲ. ನನಗೆ ಯಾವುದರ ಮೇಲೂ ಅಟ್ಯಾಚ್​​ಮೆಂಟ್ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ನನ್ನ ಸುತ್ತಲೂ ಒಂದು ಜೀವನ ಕಟ್ಟಿಕೊಂಡಿದ್ದೇನೆ. ನಾನು ಮಟೀರಿಯಲ್ ಲೈಫ್ ಜೊತೆ ಅಟ್ಯಾಚ್ ಆಗಿದ್ದೇನೆ. ಮಗ ಇದ್ದಾನೆ. ಅವನ ನೋಡಿಕೊಳ್ಳಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಮತ್ತೆ ಚಿತ್ರರಂಗಕ್ಕೆ ಹೆಜ್ಜೆ ಇಡಲು ರೆಡಿಯಾಗಿರುವ ಮಯೂರಿ ತೂಕ ಇಳಿಸಿಕೊಂಡ ಜರ್ನಿ ಬಗ್ಗೆ ಮಾತನಾಡಿದ್ದಾರೆ

ಡಿವೋರ್ಸ್ ವಿಷಯದ ಬಗ್ಗೆ ಕೇಳಿದ್ದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಡಿವೋರ್ಸ್ ಬಗ್ಗೆ ಮಾತನಾಡಲ್ಲ. ನನಗೆ ಐದು ವರ್ಷದ ಮಗ ಇದ್ದಾನೆ. ಆರವ್​​ಗೆ (ಮಗ) ಒಳ್ಳೆ ತಾಯಿ ಇದಾಳೆ, ಅದು ನಾನು. ಒಳ್ಳೆಯ ಅಪ್ಪ ಇದ್ದಾನೆ. ಆರವ್​ ಹಾಗೂ ಅವನ ತಂದೆ ಜೊತೆ ಒಳ್ಳೆಯ ಸಂಬಂಧ ಇದೆ. ಅದ್ಭುತ ಕುಟುಂಬ ಇದೆ’ ಎಂದು ಮಯೂರಿ ಹೇಳಿದ್ದಾರೆ.

YouTube video player

‘ನನಗೆ ಡಿವೋರ್ಸ್ ಬಗ್ಗೆ ಮಾತನಾಡೋಕೆ ಇಷ್ಟ ಇಲ್ಲ. ನಾನು ಸ್ಟೇಟ್​​ಮೆಂಟ್ ಕೊಟ್ಟಿಲ್ಲ, ಕೊಡೋದೂ ಇಲ್ಲ. ಅದನ್ನು ನನ್ನ ಪರ್ಸ್​​​ನಲ್​. ನನಗೆ ಈ ಬಗ್ಗೆ ದಿನವೂ ಪ್ರಶ್ನೆ ಬರುತ್ತದೆ. ನಾನು ಮನುಷ್ಯ. ಸೋಶಿಯಲ್ ರೆಸ್ಪಾನ್ಸ್ ಇರುತ್ತದೆ. ಈಗ ಮಾತನಾಡಿಲ್ಲ, ಮುಂದೆಯೂ ಮಾತನಾಡುವುದಿಲ್ಲ. ನನ್ನ ಮಗನ ಬೆಳವಣಿಗೆ ಚೆನ್ನಾಗಿದೆ. ಆತ ಖುಷಿಯಿಂದ ಬೆಳೆಯಬೇಕು, ಬೆಳೆಯುತ್ತಿದ್ದಾನೆ’ ಎಂದು ಅವರು ಹೇಳಿದ್ದಾರೆ.

‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಬಳಿಕ ಮಯೂರಿ ಅವರು ಫೇಮಸ್ ಆದರು. ಈ ಧಾರಾವಾಹಿ 2015ರಲ್ಲಿ ಇದು ಪ್ರಸಾರ ಕಂಡಿತು. ‘ಕೃಷ್ಣ ಲೀಲಾ’ ಸಿನಿಮಾ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟರು. ಈ ಚಿತ್ರ ಕೂಡ ಗಮನ ಸೆಳೆಯಿತು. ಆ ಬಳಿಕ ಹಲವು ಚಿತ್ರಗಳಲ್ಲಿ ಮಯೂರಿ ನಟಿಸಿದರು.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:07 pm, Wed, 11 February 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us