AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಆಯುಕ್ತರ ಭೇಟಿಯಾಗಿ ಧನ್ಯವಾದ ಹೇಳಿದ ಚಿರಂಜೀವಿ-ನಾಗಾರ್ಜುನ: ಕಾರಣವೇನು?

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಮತ್ತು ನಟ ನಾಗಾರ್ಜುನ ಹಾಗೂ ಇನ್ನೂ ಕೆಲವರು ಸೈಬರಾದಾಬ್ ಪೊಲೀಸ್ ಆಯುಕ್ತ, ಕನ್ನಡಿಗ ಸಜ್ಜನರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಪೊಲೀಸ್ ಆಯುಕ್ತರಿಗೆ ಚಿರಂಜೀವಿ ಹಾಗೂ ನಾಗಾರ್ಜುನ ಹಾಗೂ ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸಲು ಕಾರಣವೇನು? ಇಲ್ಲಿದೆ ನೋಡಿ ಮಾಹಿತಿ...

ಪೊಲೀಸ್ ಆಯುಕ್ತರ ಭೇಟಿಯಾಗಿ ಧನ್ಯವಾದ ಹೇಳಿದ ಚಿರಂಜೀವಿ-ನಾಗಾರ್ಜುನ: ಕಾರಣವೇನು?
Chiranjeevi
ಮಂಜುನಾಥ ಸಿ.
|

Updated on: Nov 18, 2025 | 12:50 PM

Share

ಮೆಗಾಸ್ಟಾರ್ ಚಿರಂಜೀವಿ (Chiranjeevi) ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಸಂಘ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಹೊಂದಿಲ್ಲ. ಹಾಗಿದ್ದರೂ ಸಹ ಚಿತ್ರರಂಗದ ಪರವಾಗಿ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಲೇ ಇರುತ್ತಾರೆ. ಜಗನ್ ಸರ್ಕಾರದ ಅವಧಿಯಲ್ಲಿ ಜಗನ್ ತಂದ ಕೆಲವು ನಿಯಮಗಳಿಂದ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ನಟರು, ನಿರ್ಮಾಪಕರು ಬಹಿರಂಗವಾಗಿ ಸರ್ಕಾರದ ವಿರುದ್ಧ ನಿಂದನೆ, ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದರು. ಆದರೆ ಚಿರಂಜೀವಿ, ತಮ್ಮ ಸ್ಟಾರ್​​ಗಿರಿಯನ್ನು ಪಕ್ಕಕ್ಕಿಟ್ಟು ಜಗನ್ ಮನೆಗೆ ಹೋಗಿ ಅವರಲ್ಲಿ ಮನವಿ ಮಾಡಿಕೊಂಡು ಚಿತ್ರರಂಗಕ್ಕೆ ಅನುಕೂಲಕರವಾಗುವಂತೆ ನಿಯಮಗಳನ್ನು ತಿದ್ದಿಸುವಲ್ಲಿ ಯಶಸ್ವಿ ಆಗಿದ್ದರು. ಈಗಲೂ ಸಹ ಅವರು ಅಂಥಹುದೇ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಭಾಗವಾಗಿಯೇ ಇತ್ತೀಚೆಗೆ ಸೈದರಾಬಾದ್ ಪೊಲೀಸರನ್ನು ಭೇಟಿ ಆಗಿದ್ದರು.

ಅಸಲಿಗೆ ಕೆಲ ತಿಂಗಳ ಹಿಂದೆಯೇ ನಟ ಚಿರಂಜೀವಿ ಅವರು ಗೆಳೆಯ ನಾಗಾರ್ಜುನ ಸೇರಿದಂತೆ ಇನ್ನೂ ಕೆಲವು ನಿರ್ಮಾಪಕರುಗಳೊಟ್ಟಿಗೆ ಸೈಬರಾಬಾದ್ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಪೈರಸಿ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ಚಿರಂಜೀವಿ ಮನವಿಗೆ ಪ್ರತಿಕ್ರಿಯಿಸಿದ್ದ ಪೊಲೀಸರು ಕೆಲ ಪೈರಸಿಕೋರರನ್ನು ಬಂಧಿಸಿದ್ದರು. ಆದರೂ ಸಹ ಕೆಲ ಪ್ರಮುಖ ಪೈರಸಿಕೋರರನ್ನು ಬಂಧಿಸುವುದು ಬಾಕಿ ಇತ್ತು. ಇತ್ತೀಚೆಗಷ್ಟೆ ತೆಲುಗಿನ ಕುಖ್ಯಾತ ಪೈರಸಿ ವೆಬ್​​ಸೈಟ್ ಸ್ಥಾಪಕ ರವಿ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ತೆಲುಗು ಸಿನಿಮಾ ನಿರ್ಮಾಪಕರುಗಳನ್ನು ವರ್ಷಗಳಿಂದಲೂ ಕಾಡಿದ್ದ, ನೂರಾರು ಕೋಟಿ ಹಣ ನಷ್ಟಕ್ಕೆ ಕಾರಣವಾಗಿದ್ದ ಐಬೊಮ್ಮ ಪೈರಸಿ ವೆಬ್​​ಸೈಟ್​​ನ ಸ್ಥಾಪಕ ರವಿ ಅನ್ನು ಇತ್ತೀಚೆಗಷ್ಟೆ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ ಹಾಗೂ ಇತರರು ಸೈಬರಾಬಾದ್ ಪೊಲೀಸ್ ಆಯುಕ್ತ, ಕನ್ನಡಿಗರೂ ಆಗಿರುವ ಸಜ್ಜನರ್ ಅವರನ್ನು ಭೇಟಿಯಾಗಿ ಖುದ್ದಾಗಿ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ:ಸಂಕಷ್ಟದಲ್ಲಿ ರಿಷಬ್ ಶೆಟ್ಟಿಯ ತೆಲುಗು ಸಿನಿಮಾ, ನಿರ್ದೇಶಕನ ವಿರುದ್ಧ ದೂರು

ತನ್ನ ಲಾಭಕ್ಕಾಗಿ ಸಿನಿಮಾ ಉದ್ಯಮವನ್ನು ಕೊಲ್ಲುತ್ತಿರುವ ಅಪಾಯಕಾರಿ ವ್ಯಕ್ತಿಗಳ ಜಾಲವನ್ನು ಅಂತ್ಯಗೊಳಿಸಿದ್ದಾರೆ. ಈ ಕಾರ್ಯದಲ್ಲಿ ಪೊಲೀಸರ ಚಾಣಾಕ್ಷತನ ನೋಡಿ ಹೆಮ್ಮೆಯಾಗಿದೆ. ಎಂದು ಚಿರಂಜೀವಿ ಹೇಳಿದರು. ಇಂಥ ಕೆಲವು ದುರುಳರ ಕಾರಣದಿಂದಾಗಿ ಅನೇಕ ಜನರು ಪೈರಸಿಯಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಮತ್ತು ಇಂದಿನಿಂದ ಅದು ಕೊನೆಗೊಳ್ಳಬೇಕು ಎಂದು ಅವರು ಹೇಳಿದರು.

ನಟ ನಾಗಾರ್ಜುನ ಸಹ ಮಾತನಾಡಿ, ‘ಈ ವಿಷಯದಲ್ಲಿ ಪೊಲೀಸರು ಬಲು ಶೀಘ್ರವಾಗಿ ಸ್ಪಂದಿಸಿ ದುಷ್ಟರನ್ನು ಹೆಡೆಮುರಿ ಕಟ್ಟಿರುವುದು ಅಭಿನಂದನಾರ್ಹ. ಈ ಆಪರೇಷನ್​​ನಲ್ಲಿ ತೊಡಗಿಕೊಂಡಿದ್ದ ಎಲ್ಲ ಪೊಲೀಸರಿಗೆ ತೆಲುಗು ಸಿನಿಮಾ ರಂಗದ ಕಡೆಯಿಂದ ಧನ್ಯವಾದ ಹೇಳುತ್ತೇನೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ