
ನಟ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅವರಿಗೆ ಇಂದು (ಆಗಸ್ಟ್ 22) ಬರ್ತ್ಡೇ ಸಂಭ್ರಮ. ಅವರು ಈ ವರ್ಷ 70ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರು ಈ ವಯಸ್ಸಿನಲ್ಲೂ ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರಿಗೆ ಕಳೆದ ವರ್ಷ ತುಂಬಾನೇ ವಿಶೇಷ ಎನಿಸಿಕೊಂಡಿತ್ತು. ಆ ವರ್ಷ ಅವರಿಗೆ ಅನೇಕ ಪುರಸ್ಕಾರಗಳು ಸಿಕ್ಕವು. ಚಿರಂಜೀವಿ ಹೆಸರಲ್ಲಿ ಒಂದು ವಿಶೇಷ ಗಿನ್ನಿಸ್ ರೆಕಾರ್ಡ್ ಇದೆ ಎಂಬುದು ನಿಮಗೆ ಗೊತ್ತೇ? ಆ ಬಗ್ಗೆ ನಾವು ಇಲ್ಲಿ ಹೇಳುತ್ತಿದ್ದೇವೆ.
ಚಿರಂಜೀವಿ ಅವರಿಗೆ ಕಳೆದ ವರ್ಷ ‘ಪದ್ಮ ವಿಭೂಷಣ’ ಪ್ರಶಸ್ತಿ ಸಿಕ್ಕಿದೆ. ಕೇಂದ್ರ ಸರ್ಕಾರ ನೀಡುವ ಈ ವಿಶೇಷ ಗೌರವಕ್ಕೆ ಅವರು ಭಾಜನರಾಗಿದ್ದಾರೆ. ಇದಲ್ಲದೆ, ಅವರ ಹೆಸರು ಗಿನ್ನಿಸ್ ದಾಖಲೆಯಲ್ಲಿದೆ. ಅವರಿಗೆ ‘ಭಾರತೀಯ ಚಿತ್ರರಂಗದ ಮೋಸ್ಟ್ ಪ್ರೊಫೈಲಿಕ್ ಸ್ಟಾರ್’ ಎಂದು ಪ್ರಮಾಣಪತ್ರ ನೀಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈ ಗೌರವ ಸಿಕ್ಕಿದೆ.
ಚಿರಂಜೀವಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1978ರಲ್ಲಿ. ಅವರು ಚಿತ್ರರಂಗಕ್ಕೆ ಬಂದು 46 ವರ್ಷಗಳ ಮೇಲೆ ಆಗಿದೆ. ಈವರೆಗೂ 156 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ತಮ್ಮ ವೃತ್ತಿ ಜೀವನದಲ್ಲಿ ಈವರೆಗಿನ ಚಿರಂಜೀವಿ ಅವರು 537 ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅವರು ಮಾಡಿದ ಸ್ಟೆಪ್ಸ್ 24 ಸಾವಿರ. ಈ ಕಾರಣಕ್ಕೆ ಅವರು ಹೆಸರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ.
ಕಳೆದ ವರ್ಷ ಚಿರಂಜೀವಿ ಅವರಿಗೆ ಈ ವಿಶೇಷ ಪ್ರಮಾಣ ಪತ್ರ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಅಶ್ವಿನಿ ದತ್ತ, ಬಿ. ಗೋಪಾಲ್, ಸುರೇಶ್ ಬಾಬು, ಅಲ್ಲು ಅರವಿಂದ್, ರಾಘವೇಂದ್ರ ರಾವ್, ಬಾಬಿ, ಗುಣಶೇಖರ್, ವಸಿಷ್ಠ, ಸುಷ್ಮಿತಾ, ವೈಷ್ಣವ್ ತೇಜ್ ವರುಣ್ ತೇಜ್ ಮೊದಲಾದವರು ಆಗಮಿಸಿದ್ದರು. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದರು.
ಇದನ್ನೂ ಓದಿ: ನಟ ಚಿರಂಜೀವಿ ಅದೆಷ್ಟು ಶ್ರೀಮಂತ ನೋಡಿ; ರೋಲ್ಸ್ ರಾಯ್ಸ್ ಕಾರು, ಪ್ರೈವೆಟ್ ಜೆಟ್ ಒಡೆಯ
ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಕೂಡ ಇದ್ದರು. ಅವರು ಚಿರಂಜೀವಿಯನ್ನು ಹೊಗಳಿದರು. ಚಿರಂಜೀವಿ ದಾಖಲೆಯನ್ನು ಸದ್ಯಕ್ಕಂತೂ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಚಿರಂಜೀವಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸೆಪ್ಟೆಂಬರ್ 22ರಂದು. ಅದೇ ದಿನ ಅವರಿಗೆ ಈ ವಿಶೇಷ ಪ್ರಮಾಣಪತ್ರ ಸಿಕ್ಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.