ಚಿರಂಜೀವಿ ಕ್ಯಾರವಾನ್ ಚಾಲಕ ಕೊರೊನಾದಿಂದ ನಿಧನ; ಮೆಗಾಸ್ಟಾರ್ ಅಭಿಮಾನಿಗಳಲ್ಲಿ ಆತಂಕ
ಕ್ಯಾರವಾನ್ ಚಾಲಕನ ಸಾವಿನ ಸುದ್ದಿಯಿಂದ ಚಿರಂಜೀವಿ ಮತ್ತು ರಾಮ್ ಚರಣ್ ತೀವ್ರವಾಗಿ ನೊಂದಿದ್ದಾರೆ. ಅದೇ ಕಾರಣದಿಂದ ಅವರು ಆಚಾರ್ಯ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸೆಲೆಬ್ರಿಟಿಗಳ ವಲಯದಲ್ಲಿ ಕೊವಿಡ್ 19 ಭಯ ಹೆಚ್ಚಾಗಿದೆ. ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಅನೇಕರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗುತ್ತಿದೆ. ಅನೇಕರು ಈ ಮಹಾಮಾರಿಗೆ ಬಲಿ ಆಗುತ್ತಿದ್ದಾರೆ. ನಟರಾದ ಸೋನು ಸೂದ್, ಪವನ್ ಕಲ್ಯಾಣ್ ಮುಂತಾದವರಿಗೆ ಕೊರೊನಾ ಬಂದ ಬಳಿಕ ಟಾಲಿವುಡ್ನಲ್ಲಿ ಆತಂಕ ಹೆಚ್ಚುತ್ತಿದೆ. ಈಗ ಮೆಗಾಸ್ಟಾರ್ ಚಿರಂಜೀವಿ ಅವರ ಕ್ಯಾರವಾನ್ ಚಾಲಕ ಕೊವಿಡ್-19ಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಬಹುನಿರೀಕ್ಷಿತ ಆಚಾರ್ಯ ಸಿನಿಮಾದ ಕೆಲಸಗಳಲ್ಲಿ ಚಿರಂಜೀವಿ ತೊಡಗಿಕೊಂಡಿದ್ದರು. ಅದಕ್ಕೆ ಅವರ ಪುತ್ರ ರಾಮ್ ಚರಣ್ ನಿರ್ಮಾಪಕ. ಕೆಲವು ದಿನಗಳಿಂದ ಈ ಸಿನಿಮಾದ ಕೆಲಸಗಳಿಗೆ ಬ್ರೇಕ್ ನೀಡಲಾಗಿದೆ. ಅದಕ್ಕೆ ಕಾರಣವೇ ಕೊರೊನಾ ವೈರಸ್. ಆಚಾರ್ಯದಲ್ಲಿ ನಟಿಸುತ್ತಿದ್ದ ಸೋನು ಸೂದ್ ಅವರಿಗೆ ಕೊವಿಡ್19 ಪಾಸಿಟಿವ್ ವರದಿ ಬಂದಿದೆ. ಈಗ ಚಿರಂಜೀವಿ ಅವರ ಕ್ಯಾರವಾನ್ ಚಾಲಕ ಮೃತಪಟ್ಟಿರುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ಈ ಬಗ್ಗೆ ಚಿರಂಜೀವಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಕ್ಯಾರವಾನ್ ಚಾಲಕನ ಸಾವಿನ ಸುದ್ದಿಯಿಂದ ಚಿರಂಜೀವಿ ಮತ್ತು ರಾಮ್ ಚರಣ್ ತೀವ್ರವಾಗಿ ನೊಂದಿದ್ದಾರೆ. ಅದೇ ಕಾರಣದಿಂದ ಅವರು ಆಚಾರ್ಯ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದ ಇನ್ನುಳಿದ ಕಲಾವಿದರು ಮತ್ತು ತಂತ್ರಜ್ಞರ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ಚಿತ್ರಕ್ಕೆ ಬಹುತೇಕ ಶೂಟಿಂಗ್ ಮುಗಿದಿದೆ. ಇನ್ನು 10 ಅಥವಾ 12 ದಿನ ಚಿತ್ರೀಕರಣ ಮಾಡುವುದು ಮಾತ್ರ ಬಾಕಿ ಇದೆ. ಆದರೆ ಈ ಸಂದರ್ಭದಲ್ಲಿ ಶೂಟಿಂಗ್ಗಿಂತಲೂ ಆರೋಗ್ಯವೇ ಮುಖ್ಯ ಎಂಬ ನಿರ್ಧಾರವನ್ನು ರಾಮ್ ಚರಣ್ ತೆಗೆದುಕೊಂಡಿದ್ದಾರೆ.
ಪರಿಸ್ಥಿತಿ ಕೈ ಮೀರುತ್ತಿರುವ ಈ ಸಂದರ್ಭದಲ್ಲಿ ತೆಲುಗು ಸಿನಿಮಾ ಕೆಲಸಗಾರರು ಮತ್ತು ಸಿನಿಮಾ ಪತ್ರಕರ್ತರಿಗೆ ಉಚಿತ ಕೊವಿಡ್ ಲಸಿಕೆ ನೀಡಲು ಚಿರಂಜೀವಿ ಮುಂದಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಳ್ಳವ ಮೂಲಕ ಅವರು ಈ ವಿಷಯ ತಿಳಿಸಿದ್ದಾರೆ.
తెలుగు చిత్ర పరిశ్రమలోని సినీ కార్మికులని,సినీ జర్నలిస్టులని కరోనా బారి నుంచి రక్షించుకునేందుకు కరోనా క్రైసిస్ ఛారిటీ #CCC తరుపున ఉచితంగా అందరికి వాక్సినేషన్ వేయించే సదుపాయం అపోలో 247 సౌజన్యంతో చేపడుతున్నాం. Lets ensure safety of everyone.#GetVaccinated#WearMask #StaySafe pic.twitter.com/NpIhuYWlLd
— Chiranjeevi Konidela (@KChiruTweets) April 20, 2021
ಏ.22ರಿಂದ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುವುದು. 45 ವರ್ಷ ಮೇಲ್ಪಟ್ಟವರು ಇದಕ್ಕೆ ಅರ್ಹರಾಗಿರುತ್ತಾರೆ. ತಮ್ಮ ಸಂಗಾತಿಯನ್ನೂ ಕರೆದುಕೊಂಡು ಬರಬಹುದು ಎಂದು ಚಿರಂಜೀವಿ ಮಾಹಿತಿ ನೀಡಿದ್ದಾರೆ.