
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನು ಎರಡು ದಿನಗಳಷ್ಟೆ ಬಾಕಿ ಇದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬಲು ಜೋರಾಗಿ ಚಾಲ್ತಿಯಲ್ಲಿದೆ. ಸಿನಿಮಾದ ಕಲೆಕ್ಷನ್ ಬಗ್ಗೆ ಈಗಲೇ ಲೆಕ್ಕಾಚಾರ ಶುರುವಾಗಿದೆ. ಈಗಾಗಲೇ ಮುಂಗಡ ಬುಕಿಂಗ್ನಿಂದಲೇ ಸಿನಿಮಾ 30 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದಾಗಿದೆ. ಈ ಮೊತ್ತ ಇನ್ನೂ ಹೆಚ್ಚಾಗುತ್ತಲೇ ಇದೆ. ನಿನ್ನೆಯಷ್ಟೆ (ಆಗಸ್ಟ್ 22) ‘ಟಾಕ್ಸಿಕ್’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ಹೈದರಾಬಾದ್ನಲ್ಲಿ ನಡೆದಿದ್ದು, ನಿನ್ನೆಯ ಕಾರ್ಯಕ್ರಮದಲ್ಲಿ ತೆಲಂಗಾಣ ಸಚಿವ ಮಲ್ಲಾ ರೆಡ್ಡಿ, ‘ಟಾಕ್ಸಿಕ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮಲ್ಲಾ ರೆಡ್ಡಿ ಈ ಹಿಂದಿನ ಸಿನಿಮಾ ಒಂದಕ್ಕೆ ನುಡಿದಿದ್ದ ಭವಿಷ್ಯ ನಿಜವಾಗಿರುವ ಕಾರಣ, ಮಲ್ಲಾ ರೆಡ್ಡಿಯ ‘ಟಾಕ್ಸಿಕ್’ ಕಲೆಕ್ಷನ್ ಭವಿಷ್ಯ ಗಮನ ಸೆಳೆಯುತ್ತಿದೆ.
ಮಲ್ಲಾ ರೆಡ್ಡಿ ಅವರ ‘ಮಲ್ಲಾ ರೆಡ್ಡಿ ಯೂನಿವರ್ಸಿಟಿ’ಯ ಮೈದಾನದಲ್ಲಿಯೇ ನಿನ್ನೆಯ ಅದ್ಧೂರಿ ‘ಟಾಕ್ಸಿಕ್’ ಇವೆಂಟ್ ನಡೆದಿದೆ. ತೆಲಂಗಾಣದ ಕಾರ್ಮಿಕ ಸಚಿವರಾಗಿರುವ ಮಲ್ಲಾ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಲ್ಲಾ ರೆಡ್ಡಿ ತಮ್ಮ ಅತಿರಂಜಿತ ಭಾಷಣಗಳಿಂದಲೇ ಜನಪ್ರಿಯರು. ಅಪ್ಪಟ ತೆಲಂಗಾಣ ಹಳ್ಳಿ ಭಾಷೆಯಲ್ಲಿ ಚಿತ್ರ-ವಿಚಿತ್ರ ಹಾವ ಭಾವಗಳನ್ನು ಪ್ರದರ್ಶಿಸುತ್ತಾ ಮಾತನಾಡುವ ಮಲ್ಲಾ ರೆಡ್ಡಿ ಅವರ ಭಾಷಣಗಳು ಬಲು ವೈರಲ್ ಆಗುತ್ತವೆ. ನಿನ್ನೆಯ ‘ಟಾಕ್ಸಿಕ್’ ಇವೆಂಟಿನಲ್ಲೂ ಸಹ ಮಲ್ಲಾ ರೆಡ್ಡಿ ಅವರು ಹಾಗೆಯೇ ಮಾತನಾಡಿದರು. ಈ ವೇಳೆ ‘ಟಾಕ್ಸಿಕ್’ ಸಿನಿಮಾದ ಬಾಕ್ಸ್ ಆಫೀಸ್ ಭವಿಷ್ಯವನ್ನೂ ನುಡಿದಿದರು.
ಇದನ್ನೂ ಓದಿ:‘ಟಾಕ್ಸಿಕ್’ ಇವೆಂಟ್ನಲ್ಲಿ ಅವಘಡ, ಎಫ್ಐಆರ್ ದಾಖಲಿಸಿದ ಪೊಲೀಸರು
ಈ ಹಿಂದೆ ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಅದೇ ಮಲ್ಲಾ ರೆಡ್ಡಿ ಯೂನಿವರ್ಸಿಟಿ ಗ್ರೌಂಡ್ನಲ್ಲಿಯೇ ನಡೆದಿತ್ತು. ಆಗಲೂ ಮಲ್ಲಾ ರೆಡ್ಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಂದು ‘ಅನಿಮಲ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಭವಿಷ್ಯ ನುಡಿದಿದ್ದ ಮಲ್ಲಾ ರೆಡ್ಡಿ ಈ ಸಿನಿಮಾ 900 ಕೋಟಿ ಕಲೆಕ್ಷನ್ ದಾಟುತ್ತದೆ ಎಂದಿದ್ದರು. ಹಾಗೆಯೇ ಆ ಸಿನಿಮಾ 900 ಕೋಟಿ ಕಲೆಕ್ಷನ್ ದಾಟಿತು.
ನಿನ್ನೆ ‘ಟಾಕ್ಸಿಕ್’ ಇವೆಂಟ್ನಲ್ಲಿ ಬಲು ಜೋಶ್ನಿಂದ ಮಾತನಾಡಿದ ಮಲ್ಲಾ ರೆಡ್ಡಿ, ‘ಟಾಕ್ಸಿಕ್’ ಸಿನಿಮಾ 2100 ಕೋಟಿ ಗಳಿಕೆ ಮಾಡುತ್ತದೆ ಎಂದು ಭವಿಷ್ಯ ನುಡಿದರು. ನಿರ್ಮಾಪಕ ವೆಂಕಟ್ ಅವರಿಗೆ ದುಡ್ಡೋ ದುಡ್ಡು ಬರುತ್ತದೆ. ಈ ನೆಲದಲ್ಲಿ (ಯೂನಿವರ್ಸಿಟಿ ಮೈದಾನ) ನಾನು ಅಶ್ವಮೇಧ ಯಾಗ ಮಾಡಿಸಿದ್ದೀನಿ, ಇದು ಸಾಮಾನ್ಯವಾದ ಜಾಗವಲ್ಲ. ಆಗ ಶ್ರೀರಾಮರು ಮಾಡಿಸಿದ್ದರು. ಈಗ ನಾನು ಮಾಡಿಸಿದ್ದೀನಿ, ಇಲ್ಲಿ ಮಾಡಿದ್ದೆಲ್ಲವೂ ಯಶಸ್ವಿ ಆಗುತ್ತದೆ’ ಎಂದು ಆವೇಶಭರಿತರಾಗಿ ಹೇಳಿದರು ಮಲ್ಲಾ ರೆಡ್ಡಿ.
ಯಶ್ ಅವರ ಈ ಹಿಂದಿನ ಸಿನಿಮಾ ‘ಕೆಜಿಎಫ್ 2’ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1500 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಆದರೆ 2000 ಕೋಟಿ ಗಳಿಕೆ ಮಾಡಿರಲಿಲ್ಲ. ಈಗ ‘ಟಾಕ್ಸಿಕ್’ ಸಿನಿಮಾ ಮೂಲಕ 2000 ಕೋಟಿಯ ಮೇಲೆ ಯಶ್ ಕಣ್ಣಿಟ್ಟಿದ್ದಾರೆ. ಮಲ್ಲಾ ರೆಡ್ಡಿ ಸಹ ಭವಿಷ್ಯ ನುಡಿದಾಗಿದೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದ್ದು, ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಸಿನಿಮಾ 2000 ಕೋಟಿ ಗಳಿಕೆ ಮಾಡುವುದು ಖಾತ್ರಿ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ