ನಿರ್ದೇಶಕನಾಗಿ ಗೆಲ್ಲುತ್ತಾರಾ ಸ್ಟಾರ್ ನಟ ಮೋಹನ್​ಲಾಲ್, ‘ಬರೋಜ್’ ಟ್ರೇಲರ್ ಹೇಗಿದೆ?

Mohan Lal: ದಕ್ಷಿಣ ಭಾರತದ ಸ್ಟಾರ್ ನಟರಲ್ಲಿ ಒಬ್ಬರಾದ ಮೋಹನ್ ಲಾಲ್ ತಮ್ಮ 40 ವರ್ಷದ ವೃತ್ತಿ ಜೀವನದಲ್ಲಿ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕರಾಗಿಯೂ ಯಶಸ್ಸು ಗಳಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದು, ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡುತ್ತಿದೆ.

ನಿರ್ದೇಶಕನಾಗಿ ಗೆಲ್ಲುತ್ತಾರಾ ಸ್ಟಾರ್ ನಟ ಮೋಹನ್​ಲಾಲ್, ‘ಬರೋಜ್’ ಟ್ರೇಲರ್ ಹೇಗಿದೆ?
ಬರೋಜ್
Follow us
ಮಂಜುನಾಥ ಸಿ.
|

Updated on: Dec 14, 2024 | 4:44 PM

ದಕ್ಷಿಣ ಭಾರತದ ಸೂಪರ್ ಸ್ಟಾರ್​ಗಳಲ್ಲಿ ಒಬ್ಬರು ಮೋಹನ್​ಲಾಲ್, ಅಭಿನಯದಲ್ಲಿ, ಕತೆಗಳನ್ನು ಆಯ್ದುಕೊಳ್ಳುವ ವಿಧಾನದಲ್ಲಿ ಮೋಹನ್ ಲಾಲ್ ಅವರನ್ನು ಮೀರಿಸುವ ಸೂಪರ್ ಸ್ಟಾರ್​ಗಳು ಕಡಿಮೆ. ನಟನಾಗಿ, ನಿರ್ಮಾಪಕನಾಗಿ ದೊಡ್ಡ ಗೆಲುವು ಕಂಡಿರುವ ಮೋಹನ್ ಲಾಲ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಅದೂ ‘ಬರೋಜ್’ ಹೆಸರಿನ ಬಹಳ ಭಿನ್ನವಾದ ಸಿನಿಮಾದ ಮೂಲಕ. ಮಾಯಾ ಲೋಕ ಮತ್ತು ವಾಸ್ತವದ ಕತೆಯನ್ನು ಒಳಗೊಂಡ ಭಿನ್ನವಾದ ಕತೆಯುಳ್ಳ ಸಿನಿಮಾ ಇದು.

40 ವರ್ಷಗಳ ವೃತ್ತಿಜೀವನಲ್ಲಿ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೋಹನ್‌ಲಾಲ್ ನಟಿಸಿದ್ದಾರೆ. ಹಲವು ರಾಜ್ಯ ಪ್ರಶಸ್ತಿ, ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ್ದಾರೆ. ನಟನೆ ಮೂಲಕ ದೇಶದ ಗಮನ ಸೆಳೆದಿರುವ ಮೋಹನ್ ಲಾಲ್ ಈಗ ‘ಬರೋಜ್‌’ ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್‌ ಧರಿಸಿದ್ದಾರೆ. ಸಿನಿಮಾದ ಟ್ರೈಲರ್ ಕೆಲ ದಿನದ ಹಿಂದಷ್ಟೆ ಬಿಡುಗಡೆ ಆಗಿದ್ದು, ಅಮಿತಾಬ್ ಬಚ್ಚನ್ ಆದಿಯಾಗಿ ಹಲವು ಭಾಷೆಗಳ ತಾರೆಯರು ಟ್ರೇಲರ್ ಅನ್ನು ಮೆಚ್ಚಿಕೊಂಡಿದ್ದಾರೆ.

‘ಬರೋಜ್’ ನಿರ್ದೇಶಕರಾಗಿ ಮೋಹನ್‌ಲಾಲ್‌ಗೆ ಮೊದಲ ಸಿನಿಮಾ. ನಿರ್ದೇಶನದ ಜೊತೆಗೆ ಸಿನಿಮಾದ ನಾಯಕನ ಪಾತ್ರದಲ್ಲಿಯೂ ಮೋಹನ್ ಲಾಲ್ ನಟಿಸಿದ್ದಾರೆ. ‘ಬರೋಜ್’ ಎಂಬುದು ನಿಧಿ ಕಾಯುವ ಭೂತದ ಹೆಸರು. ಶತಮಾನಗಳಿಂದಲೂ ವಾಸ್ಕೋಡಿಗಾಮನ ಅರಮನೆಯಲ್ಲಿ ನಿಧಿ ಕಾಯುವ ಭೂತಕ್ಕೂ ಒಂದು ಕತೆ ಇದೆ. ಈ ಭೂತದ ಕರ್ತವ್ಯ ನಿಷ್ಠೆಗೆ ಸವಾಲೊಂದು ಎದುರಾಗಿದೆ. ಸಿನಿಮಾದ ಟ್ರೈಲರ್ ನೋಡಿದರೆ ಇದೊಂದು ಬಹಳ ಥ್ರಿಲ್ಲರ್ ಅಂಶಗಳುಳ್ಳ ಜೊತೆಗೆ ಅದ್ಭುತ ವಿಎಫ್​ಎಕ್ಸ್​ ಸಹ ಇರುವ ಸಿನಿಮಾ ಎಂಬುದು ಖಾತ್ರಿ ಆಗುತ್ತಿದೆ.

ಇದನ್ನೂ ಓದಿ:ಮೋಹನ್ ಲಾಲ್, ಮಮ್ಮುಟಿಗಳ ದಾಖಲೆಗಳ ಮುರಿದ ಹುಡುಗರು ‘ಮಂಜ್ಞುಮಲ್ ಬಾಯ್ಸ್’

‘ಬರೋಜ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಸಿನಿಮಾ 3ಡಿ ಅವತರಣಿಕೆಯೂ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿನ ಭೂತಕಾಲ, ವರ್ತಮಾನದ ಕಾಲದ ಕತೆ ಪ್ರೇಕ್ಷಕನನ್ನು ಹಿಡಿದಿಡುತ್ತದೆ ಎಂಬ ನಂಬಿಕೆ ಮೋಹನ್ ಲಾಲ್​ ಅವರದ್ದು. ಅಕ್ಷಯ್ ಕುಮಾರ್ ಅವರು ಈ ಸಿನಿಮಾದ ಹಿಂದಿ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಕನ್ನಡದಲ್ಲಿಯೂ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿ ವೈರಲ್ ಆಗುತ್ತಿದೆ.

ಮೋಹನ್ ಲಾಲ್ ಅವರ ಆಪ್ತ, ಮಾಜಿ ಡ್ರೈವರ್ ಆಂಟೋನಿ ಪೆರುಂಬವೂರ್ ಅವರ ಆಶೀರ್ವಾದ್ ಸಿನಿಮಾಸ್‌ನ ಮೂಲಕ ‘ಬರೋಜ್‌’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪಿವಿಆರ್ ಪಿಕ್ಚರ್ಸ್ ಈ ಸಿನಿಮಾವನ್ನು ವಿತರಣೆ ಮಾಡಲಿದೆ. ಸಿನಿಮಾದಲ್ಲಿ ಮೋಹನ್ ಲಾಲ್ ಜೊತೆಗೆ ಪೃಥ್ವಿರಾಜ್ ಸುಕುಮಾರ್ ಸಹ ನಟಿಸಿದ್ದು, ಸಿನಿಮಾದಲ್ಲಿ ಹಲವು ವಿದೇಶಿ ನಟ-ನಟಿಯರು ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್
ಮೈಸೂರು ಜಿಲ್ಲೆಯಲ್ಲಿ 13 ವರ್ಷಗಳ ನಂತರ ತೆರೆದ ದೇಗುಲದ ಬಾಗಿಲು
ಮೈಸೂರು ಜಿಲ್ಲೆಯಲ್ಲಿ 13 ವರ್ಷಗಳ ನಂತರ ತೆರೆದ ದೇಗುಲದ ಬಾಗಿಲು