
‘ಪುಷ್ಪ’ ಹಾಗೂ ‘ಪುಷ್ಪ 2’ ಸಿನಿಮಾ ಇಂದ ಪ್ಯಾನ್ ಇಂಡಿಯಾ ನಟನಾಗಿರುವ ಅಲ್ಲು ಅರ್ಜುನ್, ಇದೀಗ ತಮ್ಮ ಮುಂದಿನ ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ಮೇಲೆ ಕಣ್ಣಿಟ್ಟಿದ್ದಾರೆ. ಸೂಪರ್ ಹೀರೋ ಮಾದರಿಯ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದು, ಸಿನಿಮಾ ಅನ್ನು ತಮಿಳಿನ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ದೀಪಿಕಾ ಪಡುಕೋಣೆ ಈ ಸಿನಿಮಾದ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಹಾಲಿವುಡ್ನ ಖ್ಯಾತ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದೀಗ ಹಾಲಿವುಡ್ನ ‘ಗುರು’ ಎಂದೇ ಖ್ಯಾತರಾಗಿರುವ ಅಲೆಕ್ಸಾಂಡ್ರಾ ವಿಕ್ಸೋಂಟಿ ಅವರು ಅಲ್ಲು ಅರ್ಜುನ್-ಅಟ್ಲಿ ಸಿನಿಮಾ ಸೇರಿಕೊಂಡಿದ್ದಾರೆ. ಅಷ್ಟಕ್ಕೂ ಯಾರು ಈ ಅಲೆಕ್ಸಾಂಡ್ರಿಯಾ?
ಅಲ್ಲು ಅರ್ಜುನ್-ಅಟ್ಲಿ ಸಿನಿಮಾ ಕೇವಲ ಸಿನಿಮಾ ಮಾತ್ರವಲ್ಲದೆ ಅದೊಂದು ‘ಪ್ರಾಜೆಕ್ಟ್’ ಆಗಿದೆ. ಹಾಗಾಗಿ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವ ಮೊದಲೇ ಸಿನಿಮಾದ ಮಾರ್ಕೆಟಿಂಗ್ ಪ್ಲ್ಯಾನ್ ಮಾಡಲಾಗಿದೆ. ಸಿನಿಮಾ ಅನ್ನು ಮಾರ್ಕೆಟಿಂಗ್ನಿಂದಲೇ ಗೆಲ್ಲಿಸುವ ಉಮೇದಿನಲ್ಲಿ ಅಟ್ಲಿ ಇದ್ದು, ಇದೇ ಕಾರಣಕ್ಕೆ ಹಾಲಿವುಡ್ನ ಖ್ಯಾತ ಮಾರ್ಕೆಟಿಂಗ್ ಗುರು ಅಲೆಕ್ಸಾಂಡ್ರಾ ವಿಕ್ಸೋಂಟಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಅಲೆಕ್ಸಾಂಡ್ರಾ ವಿಕ್ಸೋಂಟಿ ಹಾಲಿವುಡ್ನ ಖ್ಯಾತ ಮಾರ್ಕೆಟಿಂಗ್ ಕ್ಯಾಂಪೇನರ್. ‘ಅವತಾರ್’, ‘ಫಾಸ್ಟ್ ಆಂಡ್ ಫ್ಯೂರಿಯಸ್’, ‘ಡ್ಯೂನ್’, ‘ಜುರಾಸಿಕ್ ವರ್ಲ್ಡ್’, ‘ಬಾರ್ಬಿ’ ಇನ್ನೂ ಹಲವು ದೊಡ್ಡ ಬಜೆಟ್ನ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಮಾರ್ಕೆಟಿಂಗ್ ಕ್ಯಾಂಪೇನ್ ಮಾಡಿದ್ದಾರೆ. ಹಾಲಿವುಡ್ನ ಬಲು ಬೇಡಿಕೆಯ ಮಾರ್ಕೆಟಿಂಗ್ ಕ್ಯಾಂಪೇನರ್ ಆಗಿ ಅಲೆಕ್ಸಾಂಡ್ರಿಯಾ ಗುರುತಿಸಿಕೊಂಡಿದ್ದಾರೆ. ಇದೀಗ ಅವರನ್ನು ಅಲ್ಲು ಅರ್ಜುನ್-ಅಟ್ಲಿ ಸಿನಿಮಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಅಲ್ಲು ಅರ್ಜುನ್-ಅಟ್ಲಿ ಸಿನಿಮಾಕ್ಕೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ
ಸಿನಿಮಾ ಅನ್ನು ಹಾಲಿವುಡ್ನಲ್ಲಿ ಮಾರ್ಕೆಟಿಂಗ್ ಮಾಡುವ ಜವಾಬ್ದಾರಿಯನ್ನು ಅಲೆಕ್ಸಾಂಡ್ರಾಗೆ ನೀಡಲಾಗಿದೆ. ಅಮೆರಿಕ, ಮೆಕ್ಸಿಕೊ, ಕೆನಡಾ ಇನ್ನಿತರೆ ಹಾಲಿವುಡ್ ಪ್ರಭಾವ ಇರುವ ದೇಶಗಳಲ್ಲಿ ಅಲ್ಲು ಅರ್ಜುನ್-ಅಟ್ಲಿ ಸಿನಿಮಾವನ್ನು ಪ್ರಮೋಟ್ ಮಾಡಲೆಂದು ಅಲೆಕ್ಸಾಂಡ್ರಾ ಅವರನ್ನು ನೇಮಿಸಿಕೊಳ್ಳಲಾಗಿದೆ. ಈ ಸಿನಿಮಾ ಮೂಲಕ ಹಾಲಿವುಡ್ನಲ್ಲಿ ಛಾಪು ಮೂಡಿಸುವ ಗುರಿಯನ್ನು ಅಲ್ಲು ಅರ್ಜುನ್ ಇರಿಸಿಕೊಂಡಿದ್ದು, ಅದೇ ಕಾರಣಕ್ಕೆ ಈಗ ಹಾಲಿವುಡ್ನ ಅತ್ಯುತ್ತಮ ಮಾರ್ಕೆಟಿಂಗ್ ತಜ್ಞೆಯ ನೆರವನ್ನು ಪಡೆಯಲಾಗುತ್ತಿದೆ.
ಅಟ್ಲಿ, ಹಾಲಿವುಡ್ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಕತೆಯೊಂದನ್ನು ತಯಾರು ಮಾಡಿಕೊಂಡಿದ್ದು, ಸಿನಿಮಾಕ್ಕಾಗಿ ಹಾಲಿವುಡ್ನ ಕೆಲ ಅತ್ಯುತ್ತಮ ಸ್ಟುಡಿಯೋಗಳ ಜೊತೆ ಹಾಗೂ ಪ್ರಾಮ್ಟ್ ಮೇಕರ್ಸ್ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈಗಾಗಲೇ ಅಲ್ಲು ಅರ್ಜುನ್ ಹಾಗೂ ಅಟ್ಲಿ ಹಾಲಿವುಡ್ ಸ್ಟುಡಿಯೋಗಳನ್ನು ಒಂದು ಸುತ್ತು ಹಾಕಿಕೊಂಡು ಬಂದಿದ್ದು, ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ