Adipurush: 3ಡಿ ದೃಶ್ಯಗಳಲ್ಲಿ ರಾಮಾಯಣದ ವೈಭವ; ಹೇಗಿದೆ ‘ಆದಿಪುರುಷ್’ ಚಿತ್ರದ ಫಸ್ಟ್ ಹಾಫ್?
Adipurush First Half Review: ಮುಂಜಾನೆಯೇ ‘ಆದಿಪುರುಷ್’ ಶೋಗಳು ಆರಂಭ ಆಗಿವೆ. ಪ್ರಭಾಸ್ ಅಭಿಮಾನಿಗಳು ಈ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಸೆಟ್ಟೇರಿದ ದಿನದಿಂದಲೂ ‘ಆದಿಪುರುಷ್’ ಚಿತ್ರ (Adipurush Movie) ಸಖತ್ ಸುದ್ದಿ ಆಗುತ್ತಿತ್ತು. ಈಗ ಸಿನಿಮಾ ರಿಲೀಸ್ ಆಗಿದೆ. ಇಂದು (ಜೂನ್ 16) ಅದ್ದೂರಿಯಾಗಿ ‘ಆದಿಪುರುಷ್’ ತೆರೆಕಂಡಿದೆ. ಈ ಸಿನಿಮಾದಲ್ಲಿ ಪ್ರಭಾಸ್ (Prabhas), ಕೃತಿ ಸನೋನ್, ದೇವದತ್ತ ನಾಗೆ, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮುಂತಾದವರು ನಟಿಸಿದ್ದಾರೆ. ಓಂ ರಾವತ್ (Om Raut) ನಿರ್ದೇಶನದಲ್ಲಿ ‘ಆದಿಪುರುಷ್’ ಚಿತ್ರ ಮೂಡಿಬಂದಿದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ. ಮುಂಜಾನೆ 6 ಗಂಟೆಗೂ ಮುನ್ನವೇ ಶೋಗಳು ಆರಂಭ ಆಗಿವೆ. ರಾಮಾಯಣವನ್ನು ಆಧರಿಸಿದ ‘ಆದಿಪುರುಷ್’ ಚಿತ್ರ 3ಡಿಯಲ್ಲಿ ಮೂಡಿಬಂದಿದೆ. ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಟೀಸರ್ ಬಿಡುಗಡೆ ಆದಾಗ ಈ ಸಿನಿಮಾ ಸಖತ್ ಟ್ರೋಲ್ ಆಗಿತ್ತು. ಆದರೆ ಈಗ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ‘ಆದಿಪುರುಷ್’ ಸಿನಿಮಾದ ಫಸ್ಟ್ ಹಾಫ್ ಹೇಗಿದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.
- ರಾಮ ವನವಾಸ ಸ್ವೀಕರಿಸುವ ಮೂಲಕ ಆರಂಭ ಆಗುವ ಆದಿಪುರುಷ್ ಸಿನಿಮಾ. ‘ರಾಮ್ ಸೀತಾ ರಾಮ್..’ ಹಾಡಿನ ಮೂಲಕ ಶ್ರೀರಾಮನ ದರ್ಶನ.
- ಆರಂಭದಲ್ಲೇ ಸೈಫ್ ಅಲಿ ಖಾನ್ ಎಂಟ್ರಿ. ರಾವಣನ ಪಾತ್ರದಲ್ಲಿ ಗಹಗಹಿಸಿ ಅಬ್ಬರಿಸುವ ಸೈಫ್.
- ಅಂಡರ್ ವಾಟರ್ ದೃಶ್ಯದ ಮೂಲಕ ಪ್ರಭಾಸ್ ಎಂಟ್ರಿ. ಶುರುವಿನಲ್ಲೇ ಆ್ಯಕ್ಷನ್ ಮೂಲಕ ಅಬ್ಬರಿಸುವ ರಾಘವ.
- ಅದ್ದೂರಿ ಸೆಟ್‌ಗಳ ಮೂಲಕ ಲಂಕಾಸುರ ರಾವಣನ ಆಸ್ಥಾನ ಮತ್ತು ಆಶೋಕವನದ ಅನಾವರಣ.
- ಸೀತಾಪಹರಣ ದೃಶ್ಯದಲ್ಲಿ ಆರ್ಭಟಿಸುವ ಸೈಫ್ ಅಲಿ ಖಾನ್. ಬಹಳ ರೋಚಕವಾಗಿ ಮೂಡಿಬಂದಿದೆ ಜಠಾಯು ಮತ್ತು ರಾವಣನ ನಡುವಿನ ಕಾಳಗ.
- ಶಬರಿ, ಮಂಡೋದರಿ, ವಾಲಿ-ಸುಗ್ರೀವರ ಕಥೆಗೂ ‘ಆದಿಪುರುಷ್’ ಫಸ್ಟ್ ಹಾಫ್‌ನಲ್ಲಿ ಸಿಕ್ಕಿದೆ ಜಾಗ.
- ರಾಮ-ಆಂಜನೇಯನ ಮೊದಲ ಭೇಟಿಯ ದೃಶ್ಯಕ್ಕೆ ರೋಮಾಂಚನಗೊಳ್ಳುವ ಪ್ರೇಕ್ಷಕ. ಹನುಮಂತನ ಪಾತ್ರದಲ್ಲಿ ಮಿಂಚಿದ ನಟ ದೇವದತ್ತ ನಾಗೆ.
- ಮೈನವಿರೇಳಿಸುವಂತೆ ಮೂಡಿಬಂದಿದೆ ವಾಲಿ-ಸುಗ್ರೀವರ ಮಲ್ಲಯುದ್ಧ. ನೋಡುಗರ ಚಪ್ಪಾಳೆ ಗಿಟ್ಟಿಸುತ್ತದೆ ಈ ದೃಶ್ಯ.
- ಲಂಕಾದಹನದ ಸನ್ನಿವೇಶ ಸೇರಿದಂತೆ ಹಲವು ದೃಶ್ಯಗಳಲ್ಲಿ ಬಜರಂಗಿಗೆ ಶಿಳ್ಳೆ, ಚಪ್ಪಾಳೆ.
- ರಾವಣ ಸಂಹಾರದ ಪ್ರತೀಜ್ಞೆ ಮಾಡಿದ ರಾಘವ. ರಾಮಸೇತು ನಿರ್ಮಾಣದ ದೃಶ್ಯದೊಂದಿಗೆ ಇಂಟರ್‌ವಲ್.
- ಸನ್ನಿ ಸಿಂಗ್ ನಿಭಾಯಿಸಿದ ಲಕ್ಷ್ಮಣನ ಪಾತ್ರಕ್ಕೆ ಮೊದಲಾರ್ಧದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 am, Fri, 16 June 23