ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ್ನಾಧರಿಸಿದ ‘ಮೇಜರ್’ ಚಿತ್ರ (Major Movie) ಇಂದು (ಜೂ.3) ತೆರೆಕಂಡಿದೆ. ಟಾಲಿವುಡ್ ನಟ ಅಡಿವಿ ಶೇಷ್ (Adivi Sesh) ಉನ್ನಿಕೃಷ್ಣನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಶಿ ಕಿರಣ್ ಟಿಕ್ಕ ನಿರ್ದೇಶಿಸಿರುವ ಈ ಚಿತ್ರಕ್ಕೆ ಬಹಳ ಸಮಯದಿಂದ ಅಭಿಮಾನಿಗಳು ಕಾದಿದ್ದರು. ಕನ್ನಡದಲ್ಲಿ ಚಿತ್ರ ರಿಲೀಸ್ ಆಗುತ್ತಿಲ್ಲ ಎಂಬ ಬೇಸರವಿದ್ದರೂ ಕೂಡ ಜನರು ಚಿತ್ರಮಂದಿರಗಳಿಗೆ ಚಿತ್ರ ವೀಕ್ಷಿಸಿದ್ದಾರೆ. ತಮಿಳು ಹಾಗೂ ಮಲಯಾಳಂನಲ್ಲಿ ‘ಮೇಜರ್’ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರ ವೀಕ್ಷಿಸಿದವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ 26/11ಕ್ಕೆ ನಡೆದ ಉಗ್ರ ದಾಳಿಯಲ್ಲಿ ಹೋರಾಡುತ್ತಾ ಮರಣವನ್ನಪ್ಪಿದ ಉನ್ನಿಕೃಷ್ಣನ್ ಅವರ ಕತೆಯನ್ನಾಧರಿಸಿ ಚಿತ್ರ ತಯಾರಾಗಿದೆ. ಚಿತ್ರ ವೀಕ್ಷಿಸಿದ ನೆಟ್ಟಿಗರು ಟ್ವಿಟರ್ನಲ್ಲಿ ಹೇಳಿದ್ದೇನು? ಜನರ ಅಭಿಪ್ರಾಯಗಳು ಇಲ್ಲಿವೆ.
ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರಕ್ಕೆ ಬಾಕ್ಸಾಫೀಸ್ನಲ್ಲಿ ಪ್ರಬಲ ಪೈಪೋಟಿ ಎದುರಾಗಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್’ ತೆರೆಕಂಡಿದ್ದರೆ, ತಮಿಳಿನಲ್ಲಿ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ರಿಲೀಸ್ ಆಗಿದೆ. ಇವುಗಳ ನಡುವೆ ತೆರೆ ಕಂಡಿರುವ ‘ಮೇಜರ್’ಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಚಿತ್ರ ವೀಕ್ಷಿಸಿದ ಜನರು ಕೊನೆಯ 40 ನಿಮಿಷಗಳನ್ನು ವಿಶೇಷವಾಗಿ ಹೊಗಳಿದ್ದಾರೆ. ಎಲ್ಲರಿಗೂ ಕಣ್ಣೀರು ತರಿಸುವಂತಹ ದೃಶ್ಯಗಳಿವೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಜತೆಗೆ ನಿರ್ದೇಶನ ಹಾಗೂ ತಾಂತ್ರಿಕ ವಿಭಾಗಕ್ಕೆ ನೆಟ್ಟಿಗರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಹಾಗೆಯೇ ಅಡಿವಿ ಶೇಷ್ ಅವರ ನಟನೆಗೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ವೀಕ್ಷಿಸಿ ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಕೆಲವು ಅಭಿಪ್ರಾಯಗಳು ಇಲ್ಲಿವೆ.
Firstly Thank you Team #Major & @urstrulyMahesh Anna for choosing to bring out An unsung and untold story of our Brave soldier #SandeepUnnikrishnan Brother.@AdiviSesh You have already made us proud.
All the best @SashiTikka@saieemmanjrekar #sobhitaD @AplusSMovies @GMBents pic.twitter.com/ta2dd91bWk
— Sai Dharam Tej (@IamSaiDharamTej) June 2, 2022
#MajorTheFilm : A Well Made Tribute to #MajorSandeepUnnikrishnan. Highly Impactful Emotional Core with an Engrossing Narration makes #Major a Certainly Good Watch! pic.twitter.com/IXFv3R62ea
— Taran Adarsh (@taran_Adarsh96) June 3, 2022
#Major from USA#MajorTheFilm will remain in your hearts forever. Easily into a Classic list.
Dont forget to take napkins in Interval. I bet everyone will cry for last 30 Mins??. BGM??is heart for this film. @AdiviSesh @GMBents @AplusSMovies @WeekendCinemaUS @MajorTheFilm pic.twitter.com/2RhVTZU3MF— Pradyumna Reddy (@pradyumna257) June 3, 2022
Salute to #MajorSandeepUnnikrishnan. Kudos to @AdiviSesh for portraying his role and bringing life to the character. Great job by direction, editing and music departments. Climax dialogues by @prakashraaj ??#Major #MajorReview pic.twitter.com/isbqGVOluF
— BiggBossNonStopTelugu (@MovieTechy) June 3, 2022
Another Master Piece and an Atom about to blast from Telugu Film Industry..#MajorTheFilm #Major
Boy @AdiviSesh ???
Pure Goose Bumps .
A must watch with your family and Children. We have pass it on to future generation.???
— KRRISSH™ (@mukkaalakrish) June 3, 2022
#Major is a well made movie with an emotional climax. Terrific performances by the entire cast. Loved cinematography and bgm. Director Sashi Kiran Tikka is capable of handling all genres/emotions. Sesh’s best ever. Will be a box officer winner for sure! ?#MajorTheFilm
— idlebrain jeevi (@idlebrainjeevi) June 2, 2022
‘ಮೇಜರ್’ ಚಿತ್ರಕ್ಕೆ ನಟ ಅಡಿವಿ ಶೇಷ್ ಅವರೇ ಕತೆ ಬರೆದಿದ್ದಾರೆ. ಸಾಯಿ ಮಂಜ್ರೇಕರ್, ಪ್ರಕಾಶ್ ರಾಜ್, ರೇವತಿ, ಮುರಳಿ ಶರ್ಮಾ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಿ ಪಿಕ್ಚರ್ಸ್, ಜಿ ಮಹೇಶ್ ಬಾಬು ಪ್ರೊಡಕ್ಷನ್ಸ್ ಮತ್ತು ಎ+ಎಸ್ ಮೂವೀಸ್ ಬ್ಯಾನರ್ಗಳಲ್ಲಿ ಜಂಟಿಯಾಗಿ ಚಿತ್ರವನ್ನು ನಿರ್ಮಿಸಲಾಗಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ