AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: ಓಟಿಟಿಯಲ್ಲಿ ರಿಲೀಸ್ ಆಯ್ತು ‘ಕೆಜಿಎಫ್ ಚಾಪ್ಟರ್ 2’; ರಾಕಿ ಭಾಯ್ ಬಾಕ್ಸಾಫೀಸ್​ನಲ್ಲಿ ಇದುವರೆಗೆ ಮಾಡಿದ ಕಲೆಕ್ಷನ್ ಎಷ್ಟು?

KGF Chapter 2 BO Collection | KGF 2 on Prime: ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಬಾಕ್ಸಾಫೀಸ್​ನಲ್ಲಿ ಹಲವು ದಾಖಲೆ ಸೃಷ್ಟಿಸಿದ ನಂತರ ಇದೀಗ ಓಟಿಟಿಗೆ ಲಗ್ಗೆ ಇಟ್ಟಿದೆ. ಅಮೆಜಾನ್ ಪ್ರೈಮ್ ಸದಸ್ಯರು ಇಂದಿನಿಂದ ಚಿತ್ರವನ್ನು 5 ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ.

KGF Chapter 2: ಓಟಿಟಿಯಲ್ಲಿ ರಿಲೀಸ್ ಆಯ್ತು ‘ಕೆಜಿಎಫ್ ಚಾಪ್ಟರ್ 2’; ರಾಕಿ ಭಾಯ್ ಬಾಕ್ಸಾಫೀಸ್​ನಲ್ಲಿ ಇದುವರೆಗೆ ಮಾಡಿದ ಕಲೆಕ್ಷನ್ ಎಷ್ಟು?
ಯಶ್​
Follow us
TV9 Web
| Updated By: shivaprasad.hs

Updated on:Jun 03, 2022 | 8:29 AM

ಯಶ್ (Yash) ನಟನೆಯ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಬಾಕ್ಸಾಫೀಸ್​ನಲ್ಲಿ ದಾಖಲೆ ಬರೆದಿರುವುದಲ್ಲದೇ 50 ದಿನಗಳನ್ನು ಪೂರೈಸಿದೆ. ಜನರು ಈಗಲೂ ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಹೀಗಾಗಿಯೇ 390 ಚಿತ್ರಮಂದಿರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿದೇಶದಲ್ಲೂ ಚಿತ್ರದ ಕ್ರೇಜ್​ ಕಡಿಮೆಯಾಗಿಲ್ಲ. ಬೇರೆ ದೇಶಗಳ ಸುಮಾರು 10ಕ್ಕೂ ಚಿತ್ರಮಂದಿರಗಳಲ್ಲಿ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರ ಓಟಿಟಿಗೆ ಲಗ್ಗೆ ಇಟ್ಟಿದೆ. ಇಂದಿನಿಂದ ಅಂದರೆ ಜೂನ್ 3ರಿಂದ ಅಮೆಜಾನ್ ಪ್ರೈಮ್ (Amazon Prime) ಸದಸ್ಯರು ‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ವೀಕ್ಷಿಸಬಹುದಾಗಿದೆ. ಈ ಹಿಂದೆ ರೆಂಟ್ ಮಾದರಿಯಲ್ಲಿ ಓಟಿಟಿಯಲ್ಲಿ ರಿಲೀಸ್ ಮಾಡಲಾಗಿತ್ತು. ಚಿತ್ರ ವೀಕ್ಷಿಸಲು ಪ್ರೈಮ್ ಸದಸ್ಯರಾಗಿದ್ದರೂ ಕೂಡ ಹೆಚ್ಚುವರಿ ಹಣ ನೀಡಬೇಕಾಗಿತ್ತು. ಆದರೆ ಈಗ ಎಲ್ಲಾ ಪ್ರೈಮ್ ಸದಸ್ಯರು ತಾವು ಆಯ್ಕೆ ಮಾಡಿದ 5 ಭಾಷೆಗಳಲ್ಲಿ ಕೆಜಿಎಫ್ 2 ವೀಕ್ಷಿಸಬಹುದಾಗಿದೆ.

ಚಿತ್ರದ ಸಣ್ಣ ಟೀಸರ್​ ಒಂದನ್ನು ಹಂಚಿಕೊಂಡಿರುವ ಅಮೆಜಾನ್ ಪ್ರೈಮ್​, ಚಿತ್ರದ ಓಟಿಟಿ ಬಿಡುಗಡೆಯನ್ನು ಘೋಷಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಪ್ರೈಮ್​ನಲ್ಲಿ ಪ್ರಸಾರವಾಗುತ್ತಿದೆ. ಮಧ್ಯರಾತ್ರಿ 12 ಗಂಟೆಯಿಂದ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ.

ಇದನ್ನೂ ಓದಿ
Image
Vikram First Half Review: ಹೇಗಿದೆ ‘ವಿಕ್ರಮ್​’ ಸಿನಿಮಾ ಮೊದಲಾರ್ಧ? ಇಲ್ಲಿದೆ ಫಸ್ಟ್​ ಹಾಫ್ ರಿವ್ಯೂ
Image
Adipurush budget: ಪ್ರಭಾಸ್ ನಟನೆಯ ‘ಆದಿಪುರುಷ್’ಗೆ ಬಾಹುಬಲಿಗಿಂತಲೂ ಹೆಚ್ಚು ದುಡ್ಡು ಸುರಿದ ನಿರ್ಮಾಪಕರು; ಅಚ್ಚರಿಯ ವಿಚಾರ ಬಹಿರಂಗ
Image
50ನೇ ದಿನ ‘ಕೆಜಿಎಫ್ 2’ ಎಷ್ಟು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ; ಇಲ್ಲಿದೆ ಮಾಹಿತಿ
Image
ನನ್ನ ಜತೆ ಅಲ್ಲು ಅರ್ಜುನ್ ಆದಷ್ಟು ಬೇಗ ಕೆಲಸ ಮಾಡಬೇಕು ಎಂದ ಅಕ್ಷಯ್ ಕುಮಾರ್

ಅಮೆಜಾನ್ ಪ್ರೈಮ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

‘ಕೆಜಿಎಫ್ ಚಾಪ್ಟರ್ 2’ ಬಾಕ್ಸಾಫೀಸ್​​ ಕಲೆಕ್ಷನ್ ಎಷ್ಟು?

ಯಶ್, ಸಂಜಯ್ ದತ್, ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ ಮೊದಲಾದವರು ನಟಿಸಿರುವ ‘ಕೆಜಿಎಫ್ ಚಾಪ್ಟರ್​ 2’ ಬಾಕ್ಸಾಫೀಸ್​ನಲ್ಲಿ ಹೊಸ ಮೈಲಿಗಲ್ಲಿನ ಸನಿಹವಿದೆ. ಪ್ರಸ್ತುತ ವಿಶ್ವಾದ್ಯಂತ ಬಾಕ್ಸಾಫೀಸ್​ನಲ್ಲಿ ಸುಮಾರು 1240.9 ಕೋಟಿ ರೂ ಗಳಿಸಿರುವ ಚಿತ್ರವು 1,250 ಕೋಟಿ ರೂ ಮೈಲಿಗಲ್ಲಿಗೆ ಸಮೀಪದಲ್ಲಿದೆ. ಈ ವಾರಾಂತ್ಯದಲ್ಲಿ ಚಿತ್ರ ಎಷ್ಟು ಗಳಿಸಲಿದೆ ಎಂದು ಕಾದು ನೋಡಬೇಕಿದೆ. ‘ಕೆಜಿಎಫ್ 2’ ಹಿಂದಿ ಅವತರಣಿಕೆ ದಾಖಲೆ ಬರೆದಿದ್ದು, 430 ಕೋಟಿ ರೂಗೂ ಅಧಿಕ ಹಣವನ್ನು ಬಾಚಿಕೊಂಡಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 am, Fri, 3 June 22

ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್