Vikram Movie Review: ಹಳೆಯ ಕನೆಕ್ಷನ್ ಜೊತೆ ಕಮಲ್ ಹಾಸನ್ ಭರ್ಜರಿ ಕಮ್‌ಬ್ಯಾಕ್

‘ವಿಶ್ವರೂಪಂ 2’ ತೆರೆಕಂಡ ನಾಲ್ಕು ವರ್ಷಗಳ ಬಳಿಕ ‘ವಿಕ್ರಮ್’ ಸಿನಿಮಾ ರಿಲೀಸ್ ಆಗಿದೆ. ಈ ದಿನವನ್ನು ಅವರ ಫ್ಯಾನ್ಸ್ ಹಬ್ಬದಂತೆ ಆಚರಿಸುತ್ತಿದ್ದಾರೆ. ಫಹಾದ್ ಫಾಸಿಲ್, ವಿಜಯ್ ಸೇತುಪತಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ವಿಮರ್ಶೆ ಟಿವಿ9 ಕನ್ನಡ ಡಿಜಿಟಲ್​ನಲ್ಲಿ.

Vikram Movie Review: ಹಳೆಯ ಕನೆಕ್ಷನ್ ಜೊತೆ ಕಮಲ್ ಹಾಸನ್ ಭರ್ಜರಿ ಕಮ್‌ಬ್ಯಾಕ್
ಕಮಲ್ ಹಾಸನ್
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on:Jun 03, 2022 | 11:56 AM

ಸಿನಿಮಾ: ವಿಕ್ರಮ್

ಪಾತ್ರವರ್ಗ: ಕಮಲ್ ಹಾಸನ್, ಫಹಾದ್ ಫಾಸಿಲ್, ವಿಜಯ್ ಸೇತುಪತಿ ಮೊದಲಾದವರು

ನಿರ್ದೇಶನ: ಲೋಕೇಶ್ ಕನಗರಾಜ್​

ಇದನ್ನೂ ಓದಿ
Image
ಬೆಂಗಳೂರಲ್ಲಿ ಹೇಗಿತ್ತು ನೋಡಿ ಕಮಲ್ ಹಾಸನ್ ‘ವಿಕ್ರಮ್​’ ಸಿನಿಮಾ ಪ್ರಮೋಷನ್
Image
‘ಕರ್ನಾಟಕ ನನಗೆ ಸಾಕಷ್ಟು ಗುರುಗಳನ್ನು ಕೊಟ್ಟಿದೆ’; ‘ವಿಕ್ರಮ್’ ಸಿನಿಮಾ ಪ್ರಚಾರದ ವೇಳೆ ಅಣ್ಣಾವ್ರ ನೆನೆದ ಕಮಲ್ ಹಾಸನ್
Image
‘ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ’ ಎಂದ ಕಮಲ್​ ಹಾಸನ್​; ಏನದು?
Image
ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್​ 2’ ವೀಕ್ಷಿಸಿದ ಕಮಲ್ ಹಾಸನ್, ಇಳಯರಾಜ​ ಹೇಳಿದ್ದೇನು?

ನಿರ್ಮಾಣ: ರಾಜ್​ಕಮಲ್ ಫಿಲ್ಮ್ಸ್​ ಇಂಟರ್​ನ್ಯಾಷನಲ್

ಸ್ಟಾರ್​: 3/5

ಕಮಲ್ ಹಾಸನ್ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಲೋಕೇಶ್ ಕನಗರಾಜ್​ ಅವರ ‘ವಿಕ್ರಮ್’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಇದೊಂದು ಪಕ್ಕಾ ಮಾಸ್​ ಆ್ಯಕ್ಷನ್ ಸಿನಿಮಾ ಅನ್ನೋದು ಟ್ರೇಲರ್​ನಲ್ಲೇ ಗೊತ್ತಾಗಿತ್ತು. ಟ್ರೇಲರ್​ನಲ್ಲಿ ತೋರಿಸಿದ ಎಲ್ಲಾ ಅಂಶಗಳು ಸಿನಿಮಾದಲ್ಲಿ ಕೊಂಚ ಹೆಚ್ಚೇ ಇದೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದನ್ನು ಮುಂದೆ ಓದಿ.

ಆರಂಭದಲ್ಲಿ ನೋಡ ನೋಡುತ್ತಿದ್ದಂತೆ ಮೂರ್ನಾಲ್ಕು ಕೊಲೆಗಳು ನಡೆದು ಹೋಗುತ್ತವೆ. ಎಲ್ಲಾ ದೊಡ್ಡ ತಲೆಗಳೇ. ಕೊಲೆ ಎಂದರೆ ಯಾರಿಗೂ ಗೊತ್ತಿಲ್ಲದೆ ಮಾಡಿ ಹೋಗಿ ತಲೆಮರೆಸಿಕೊಳ್ಳುವ ಕೊಲೆಯಲ್ಲ. ಈ ಕೊಲೆಯನ್ನು ಮಾಸ್ಕ್​ ಹಾಕಿದ ನಾಲ್ಕೈದು ವ್ಯಕ್ತಿಗಳು ವಿಡಿಯೋ ರೆಕಾರ್ಡ್ ಮಾಡುತ್ತಾರೆ. ಕತ್ತಿಗೆ ಚಾಕು ಹಾಕುವುದನ್ನು ಶೂಟ್ ಮಾಡುತ್ತಾರೆ. ಇದು ವ್ಯವಸ್ಥೆ ವಿರುದ್ಧ ನಾವು ಸಾರುತ್ತಿರುವ ಯುದ್ಧ ಎನ್ನುವ ಎಚ್ಚರಿಕೆಯನ್ನೂ ನೀಡುತ್ತಾರೆ. ಈ ಮಾಸ್ಕ್​ನ ಹಿಂದೆ ಇರುವ ಮುಖ ಯಾರದ್ದು ಎಂಬುದನ್ನು ಪತ್ತೆ ಹಚ್ಚೋಕೆ ಬರುವವನೇ ಅಮರ್ (ಫಹಾದ್ ಫಾಸಿಲ್). ಈ ಕೊಲೆಗಳನ್ನು ಮಾಡುತ್ತಿರುವವರು ಯಾರು ಎಂಬುದು ಗೊತ್ತಾದಾಗ ಅಸಲಿ ಕಥೆ ಶುರು.

ಕನೆಕ್ಷನ್

1986ರಲ್ಲಿ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ತೆರೆಗೆ ಬಂದಿತ್ತು. ನಿರ್ದೇಶಕ ಲೋಕೇಶ್​ ಕನಗರಾಜ್​ ಈ ಚಿತ್ರದ ಟೈಟಲ್ ಮಾತ್ರವಲ್ಲ, ಪಾತ್ರಗಳನ್ನೂ ಬಳಕೆ ಮಾಡಿಕೊಂಡಿದ್ದಾರೆ! 1986ರ ‘ವಿಕ್ರಮ್’ ಚಿತ್ರ, 2019ರಲ್ಲಿ ಬಂದ ಕಾರ್ತಿ ನಟನೆಯ ‘ಕೈದಿ’, ಈಗ ರಿಲೀಸ್ ಆಗಿರುವ ‘ವಿಕ್ರಮ್​’ ಚಿತ್ರಕ್ಕೆ ಒಂದು ಕನೆಕ್ಷನ್ ಇಡಲಾಗಿದೆ. ಈ ಕನೆಕ್ಷನ್​ ಸೃಷ್ಟಿ ಮಾಡಲು ಅವರು ಉಪಯೋಗಿಸಿದ ಚಾಣಾಕ್ಷತೆ ಮೆಚ್ಚುವಂತಹದ್ದು. ಇದು ಫ್ಯಾನ್ಸ್​ಗೆ ಥ್ರಿಲ್ ಕೊಡುತ್ತದೆ.

ಮಾಸ್ ಕಂಬ್ಯಾಕ್

ಕಮಲ್ ಹಾಸನ್ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಈಗ ‘ವಿಕ್ರಮ್​’ ಚಿತ್ರದ ಮೂಲಕ ಮಾಸ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅವರ ಮ್ಯಾನರಿಸಂ ಸಖತ್​ ಇಷ್ಟವಾಗುತ್ತದೆ. ಮೊದಲಾರ್ಧದಲ್ಲಿ ಅವರ ಪ್ರೆಸೆನ್ಸ್​ನ ಕೊರತೆ ಕಂಡರೂ, ಎರಡನೇ ಭಾಗದುದ್ದಕ್ಕೂ ಅವರು ಕಾಣಿಸಿಕೊಳ್ಳುತ್ತಾರೆ. ಸಮಾಜದಲ್ಲಿರುವ ಡ್ರಗ್ಸ್​ ಪಿಡುಗನ್ನು ನಿರ್ಮೂಲನೆ ಮಾಡಬೇಕು ಎನ್ನುವ ವ್ಯಕ್ತಿಯಾಗಿ, ಮೊಮ್ಮಗನನ್ನು ಉಳಿಸಿಕೊಳ್ಳಲೇಬೇಕು ಎಂದು ಒದ್ದಾಡುವ ತಾತನಾಗಿ ಕಮಲ್ ಇಷ್ಟವಾಗುತ್ತಾರೆ. ಅವರ ವಯಸ್ಸಿಗೆ ತಕ್ಕಂತೇ ಪಾತ್ರ ಸೃಷ್ಟಿ ಮಾಡಲಾಗಿದೆ. ಅವರಿಗೆ ಈ ಪಾತ್ರ ಚೆನ್ನಾಗಿ ಒಪ್ಪಿದೆ. ಮಾಸ್​ ಮತ್ತು ಎಮೋಷನ್ಸ್​ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಸಾಗಿದ್ದಾರೆ.

ಕೆಲವರು ಹೈಲೈಟ್​, ಕೆಲವರು ಲೆಕ್ಕಕ್ಕಿಲ್ಲ:

ಮಲಯಾಳಂನ ಸ್ಟಾರ್ ನಟ ಫಹಾದ್​ ಫಾಸಿಲ್​ ಮಾಡಿರುವ ಪಾತ್ರ ಸಖತ್ ಹೈಲೈಟ್ ಆಗಿದೆ. ಅವರು ಮಾಡಿದ ಅಮರ್ ಪಾತ್ರ ಮೊದಲಾರ್ಧದುದ್ದಕ್ಕೂ ಸಾಗುತ್ತದೆ. ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರ ಪಾತ್ರಕ್ಕೆ ಮತ್ತಷ್ಟು ತೂಕಬೇಕಿತ್ತು. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂರ್ಯ ಅವರು ಗಮನ ಸೆಳೆಯುತ್ತಾರೆ. ಹೊಸ ಆರಂಭಕ್ಕೆ ಅವರು ನಾಂದಿ ಹಾಡಿದಂತೆ ಭಾಸವಾಗುತ್ತದೆ. ಉಳಿದಂತೆ ಬಹುತೇಕ ಪಾತ್ರಗಳು ಹೀಗೆ ಬಂದು ಹಾಗೆ ಹೋಗುತ್ತವೆ.

ಹೈಲೈಟ್ ಆದ ಇತರೆ ಅಂಶಗಳು:

ಚಿತ್ರದಲ್ಲಿ ಅನಿರುದ್ಧ್​ ರವಿಚಂದರ್ ನೀಡುವ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಗಿರೀಶ್ ಗಂಗಾಧರನ್​ ಅವರ ಛಾಯಾಗ್ರಹಣ ಸಿನಿಮಾ ಅಂದವನ್ನು ಹೆಚ್ಚಿಸಿದೆ. ಆ್ಯಕ್ಷನ್ ದೃಶ್ಯಗಳನ್ನು ಅವರು ಪ್ರೇಕ್ಷಕರಿಗೆ ಹೆಚ್ಚು ರುಚಿಸುವ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ. ಚಿತ್ರದ ಪಂಚಿಂಗ್ ಡೈಲಾಗ್ ಕೂಡ ಇಷ್ಟವಾಗುತ್ತದೆ. ಸೆಂಟಿಮೆಂಟ್​ ಅಂಶಗಳು ಪ್ರೇಕ್ಷಕರನ್ನು ಭಾವುಕರಾಗಿಸುತ್ತದೆ.

ಇದು ಪರ್ಫೆಕ್ಟ್​ ಸಿನಿಮಾ ಅಲ್ಲ

ಈ ಚಿತ್ರದಲ್ಲೂ ಸಾಕಷ್ಟು ಮೈನಸ್ ಪಾಯಿಂಟ್ ಇದೆ. ‘ಕೈದಿ’ ಚಿತ್ರ ಒಂದೇ ನೇರದಲ್ಲಿ ಸಾಗಿದ್ದ ಸಿನಿಮಾ. ಆದರೆ, ‘ವಿಕ್ರಮ್​’ ಸಿನಿಮಾ ಕಥೆ ಹಾಗಲ್ಲ. ಎತ್ತೆತ್ತಲೋ ಸುತ್ತಿ, ಎತ್ತೆತ್ತಲೋ ಹೋಗಿ, ಎಲ್ಲೆಲ್ಲೋ ನಿಂತು ಸಾಗುತ್ತದೆ. ಈ ಸಿನಿಮಾದ ಅವಧಿ ಸಮಯವೂ ಕೊಂಚ ಹೆಚ್ಚೇ ಇರುವುದರಿಂದ ಪ್ರೇಕ್ಷಕರು ಸುಸ್ತು ಬಡಿಯಬಹುದು. ಹೀಗಾಗಿ, ಅನೇಕ ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ಇತ್ತು.  ಕೆಲವೊಂದು ಕಡೆಗಳಲ್ಲಿ ರಕ್ತವನ್ನು ನೀರಿನಂತೆ ಚೆಲ್ಲಲಾಗಿದೆ. ಡ್ರಗ್ಸ್ ವಿರುದ್ಧ ಹೋರಾಡುವ ಕಥೆಯ ರೀತಿಯಲ್ಲಿ ಸಿನಿಮಾ ಸಾಗುತ್ತದೆ. ಆದರೆ, ವಿಲನ್ ಡ್ರಗ್ಸ್ ತಿಂದ ತಕ್ಷಣ ಯಾವುದೋ ಶಕ್ತಿ ಬಂದವರಂತೆ ಎದ್ದು ಕಾದಾಡುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಬಹುದು. ಆ ಬಗ್ಗೆ ನಿರ್ದೇಶಕರು ಗಮನ ಹರಿಸಬಹುದಿತ್ತು. ಚಿತ್ರದ ನಿರೂಪಣೆ ಭಿನವಾಗಿದೆಯಾದರೂ ಪ್ರೇಕ್ಷಕನಲ್ಲಿ ಗೊಂದಲ ಸೃಷ್ಟಿ ಮಾಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:50 am, Fri, 3 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ