Vikram First Half Review: ಹೇಗಿದೆ ‘ವಿಕ್ರಮ್’ ಸಿನಿಮಾ ಮೊದಲಾರ್ಧ? ಇಲ್ಲಿದೆ ಫಸ್ಟ್ ಹಾಫ್ ರಿವ್ಯೂ
ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಇಂದು (ಜೂನ್ 3) ತೆರೆಗೆ ಬಂದಿದೆ. ಸಿನಿಮಾದ ಮೊದಲಾರ್ಧ ಹೇಗಿದೆ? ಯಾರು ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಬಗ್ಗೆ ಮೊದಲಾರ್ಧದ ವಿಮರ್ಶೆಯಲ್ಲಿದೆ ಉತ್ತರ.
2018ರಲ್ಲಿ ತೆರೆಗೆ ಬಂದ ‘ವಿಶ್ವರೂಪಂ 2’ ಸಿನಿಮಾ ಬಳಿಕ ಕಮಲ್ ಹಾಸನ್ (Kamal Haasan) ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಆದರು. ಆದರೆ, ರಾಜಕೀಯದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಈಗ ಅವರು ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಕಮಲ್ ಹಾಸನ್ ಸಿನಿಮಾ ಮತ್ತೆ ತೆರೆಮೇಲೆ ಬರುತ್ತಿದೆ. ಅವರ ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ಇಂದು (ಜೂನ್ 3) ತೆರೆಗೆ ಬಂದಿದೆ. ಟ್ರೇಲರ್ ಮೂಲಕ ಸಿನಿಮಾ ನಿರೀಕ್ಷೆ ಹುಟ್ಟು ಹಾಕಿತ್ತು. ಫಹಾದ್ ಫಾಸಿಲ್, ವಿಜಯ್ ಸೇತುಪತಿ (Vijay Sethupathi) ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೋಕೇಶ್ ಕನಗರಾಜ್ ಅವರ ನಿರ್ದೇಶನ ಚಿತ್ರಕ್ಕೆ ಇದೆ. ಹಿಟ್ ಮ್ಯೂಸಿಕ್ ಡೈರೆಕ್ಟರ್ ಎನಿಸಿಕೊಂಡಿರುವ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗಾದರೆ ಸಿನಿಮಾದ ಮೊದಲಾರ್ಧ ಹೇಗಿದೆ? ಯಾರು ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಬಗ್ಗೆ ಮೊದಲಾರ್ಧದ ವಿಮರ್ಶೆಯಲ್ಲಿದೆ ಉತ್ತರ.
- ಚಿತ್ರದ ಮೊದಲಾರ್ಧ ತುಂಬ ಸಸ್ಪೆನ್ಸ್ ಆಗಿ ಮೂಡಿಬಂದಿದೆ. ಇದು ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ.
- ಇಡೀ ಸಿನಿಮಾದ ಹೈಲೈಟ್ ಕಮಲ್ ಹಾಸನ್. ಆದರೂ ಫಹಾದ್ ಫಾಸಿಲ್ ಅವರು ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಅವರ ಪಾತ್ರ ಡಿಫರೆಂಟ್ ಆಗಿದೆ.
- ಫೈಟಿಂಗ್ ಮತ್ತು ಚೇಸಿಂಗ್ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ. ಈ ಸನ್ನಿವೇಶಗಳಿಂದ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗುತ್ತದೆ.
- ಒಂದು ಹಾಡಿನ ಮೂಲಕ ಕಮಲ್ ಹಾಸನ್ ಪಾತ್ರದ ಎಂಟ್ರಿ ಆಗುತ್ತದೆ. ಇದು ಅವರ ಅಭಿಮಾನಿಗಳಿಗೆ ಇಷ್ಟ ಆಗುವಂತಿದೆ.
- ಫಸ್ಟ್ ಹಾಫ್ನಲ್ಲಿ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಹೈಲೈಟ್ ಆಗಿದೆ. ಇದರಿಂದ ಚಿತ್ರದ ಗುಣಮಟ್ಟ ಹೆಚ್ಚಿದೆ.
- ಮೊದಲಾರ್ಧದ ಕೊನೆಯಲ್ಲಿ ಒಂದು ಸಸ್ಪೆನ್ಸ್ ಬಹಿರಂಗ ಆಗುತ್ತದೆ. ಅದನ್ನು ನೋಡಿದ ಪ್ರೇಕ್ಷಕರಿಗೆ ಸೆಕೆಂಡ್ ಹಾಫ್ ಮೇಲಿನ ಕೌತುಕ ಹೆಚ್ಚುತ್ತದೆ.
- ಕಮಲ್ ಹಾಸನ್ ಅವರಿಗೆ ಇದೊಂದು ಬೆಸ್ಟ್ ಕಮ್ ಬ್ಯಾಕ್ ಸಿನಿಮಾ ಆಗುವ ಎಲ್ಲ ಸಾಧ್ಯತೆ ದಟ್ಟವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.