‘ಅಬ್ಬಬ್ಬಾ.. ಇದು ನಿಜಕ್ಕೂ ಮಾಸ್ಟರ್​ಪೀಸ್​’; ‘ಆಪನ್​ಹೈಮರ್’ ಚಿತ್ರದ ವಿಮರ್ಶೆ ತಿಳಿಸಿದ ಪ್ರೇಕ್ಷಕರು

|

Updated on: Jul 21, 2023 | 12:37 PM

‘ಕಿಲಿಯನ್ ಮರ್ಫಿ ಅವರ ನಟನೆ ಅದ್ಭುತ. ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅವರಿಗೆ ಖಂಡಿತವಾಗಿಯೂ ಅವಾರ್ಡ್ ಸಿಗಲಿದೆ. ಇದು ಕ್ರಿಸ್ಟೋಫರ್ ನೋಲನ್ ಅವರ ಮಾಸ್ಟರ್​ಪೀಸ್’ ಎಂದು ಕೆಲವರು ಬರೆದುಕೊಂಡಿದ್ದಾರೆ.

‘ಅಬ್ಬಬ್ಬಾ.. ಇದು ನಿಜಕ್ಕೂ ಮಾಸ್ಟರ್​ಪೀಸ್​’; ‘ಆಪನ್​ಹೈಮರ್’ ಚಿತ್ರದ ವಿಮರ್ಶೆ ತಿಳಿಸಿದ ಪ್ರೇಕ್ಷಕರು
ಕಿಲಿಯನ್ ಮರ್ಫಿ
Follow us on

ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನದ ‘ಆಪನ್ ಹೈಮರ್’ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ಸುಳ್ಳಾಗಲಿಲ್ಲ. ಈ ಚಿತ್ರವನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಣು ಬಾಂಬ್ ಕಂಡುಹಿಡಿದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್​ (J. Robert Oppenheimer) ಅವರ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಪಾತ್ರದಲ್ಲಿ ಕಿಲಿಯನ್​ ಮರ್ಫಿ ನಟಿಸಿದ್ದಾರೆ. ಅವರ ನಟನೆಗೂ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾಗೆ ಸಿಕ್ಕ ವಿಮರ್ಶೆ ನೋಡಿದರೆ ಚಿತ್ರ ಧೂಳೆಬ್ಬಿಸೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸುತ್ತಿದ್ದಾರೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್​ನ ಎರಡು ನಗರಗಳ ಮೇಲೆ ಅಣುಬಾಂಬ್ ಹಾಕಲಾಯಿತು. ಈ ಅಣುಬಾಂಬ್​ನ ಕಂಡು ಹಿಡಿದಿದ್ದು ಜೆ ರಾಬರ್ಟ್​ ಆಪನ್​ಹೈಮರ್. ಅವರ ಜೀವನಾಧಾರಿತ ಸಿನಿಮಾ ಮಾಡುತ್ತಾರೆ ಎಂದಾಗಲೇ ನಿರೀಕ್ಷೆ ಸೃಷ್ಟಿ ಆಗಿತ್ತು. ಜುಲೈ 21ರಂದು ಈ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಆಸ್ಕರ್​ ಅವಾರ್ಡ್​ನಲ್ಲಿ ಇದು ಹಲವು ಪ್ರಶಸ್ತಿ ಗೆಲ್ಲುವ ಭರವಸೆ ಸೃಷ್ಟಿಸಿದೆ.

‘ಕಿಲಿಯನ್ ಮರ್ಫಿ ಅವರ ನಟನೆ ಅದ್ಭುತ. ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅವರಿಗೆ ಖಂಡಿತವಾಗಿಯೂ ಅವಾರ್ಡ್ ಸಿಗಲಿದೆ. ಇದು ಕ್ರಿಸ್ಟೋಫರ್ ನೋಲನ್ ಅವರ ಮಾಸ್ಟರ್​ಪೀಸ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಸಿನಿಮಾ ಅರ್ಧ ಕಲರ್ ಹಾಗೂ ಇನ್ನರ್ಧ ಕಪ್ಪು-ಬಿಳುಪಿನ ಶೈಲಿಯಲ್ಲಿ ಮೂಡಿ ಬಂದಿದೆ.

‘ಆಪನ್​ಹೈಮರ್ ಸಿನಿಮಾ ಬಗ್ಗೆ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದನ್ನು ನೀವು ಥಿಯೇಟರ್​ನಲ್ಲೇ ನೋಡಿ ಎಂಜಾಯ್ ಮಾಡಬೇಕು. 10ಕ್ಕೆ 10 ಅಂಕ ನೀಡುತ್ತೇವೆ’ ಎಂದು ಪ್ರೇಕ್ಷಕನೋರ್ವ ಬರೆದುಕೊಂಡಿದ್ದಾನೆ. ಇನ್ನು, ಸಿನಿಮಾ ವಿಮರ್ಶೆ ತಿಳಿಸುವ ಭರದಲ್ಲಿ ಕೆಲವರು ಸಿನಿಮಾದ ಪ್ರಮುಖ ದೃಶ್ಯಗಳನ್ನು ಶೂಟ್ ಮಾಡಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲೂ ಧೂಳೆಬ್ಬಿಸಿದ ಕ್ರಿಸ್ಟೋಫರ್ ನೋಲನ್; ‘ಆಪನ್​ಹೈಮರ್’ ಟಿಕೆಟ್ ಸೋಲ್ಡ್ಔಟ್

ಜುಲೈ 11ರಂದು ಪ್ಯಾರಿಸ್​ನಲ್ಲಿ, ಜುಲೈ 13ರಂದು ಲಂಡನ್​ನಲ್ಲಿ, ಜುಲೈ 17ರಂದು ನ್ಯೂಯಾರ್ಕ್​​ನಲ್ಲಿ ಪ್ರೀಮಿಯರ್ ಆಗಿತ್ತು. ಇಂದು ಬಹುತೇಕ ರಾಷ್ಟ್ರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.

Published On - 12:35 pm, Fri, 21 July 23