ಕಾಶ್ಮೀರದಲ್ಲೂ ಧೂಳೆಬ್ಬಿಸಿದ ಕ್ರಿಸ್ಟೋಫರ್ ನೋಲನ್; ‘ಆಪನ್​ಹೈಮರ್’ ಟಿಕೆಟ್ ಸೋಲ್ಡ್ಔಟ್

ಕಾಶ್ಮೀರದಲ್ಲಿ ಕಳೆದ 33 ವರ್ಷಗಳಿಂದ ಚಿತ್ರಮಂದಿರ ಬಂದ್ ಆಗಿತ್ತು. ಇದನ್ನು ಕಳೆದ ವರ್ಷ ರೀ ಓಪನ್ ಮಾಡಲಾಯಿತು. ಕಾಶ್ಮೀರದಲ್ಲಿ ಇರುವ ಏಕೈಕ ಚಿತ್ರಮಂದಿರ ಇದು.

ಕಾಶ್ಮೀರದಲ್ಲೂ ಧೂಳೆಬ್ಬಿಸಿದ ಕ್ರಿಸ್ಟೋಫರ್ ನೋಲನ್; ‘ಆಪನ್​ಹೈಮರ್’ ಟಿಕೆಟ್ ಸೋಲ್ಡ್ಔಟ್
ಆಪನ್​ಹೈಮರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 21, 2023 | 9:10 AM

ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನದ ‘ಆಪನ್​ಹೈಮರ್’ ಸಿನಿಮಾ ಇಂದು (ಜುಲೈ 21) ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರದ ಅಡ್ವಾನ್ಸ್ ಬುಕಿಂಗ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮೊದಲ ದಿನ 3 ಲಕ್ಷಕ್ಕೂ ಅಧಿಕ ಟಿಕೆಟ್​ಗಳು ಮಾರಾಟ ಆಗಿವೆ. ಮತ್ತೊಂದು ವಿಶೇಷ ಎಂದರೆ ಕಾಶ್ಮೀರದಲ್ಲಿ ಈ ಚಿತ್ರದ ಟೀಕಟ್​ಗಳು ಸೋಲ್ಡ್​ಔಟ್ ಆಗಿವೆ. ವೀಕೆಂಡ್​ನಲ್ಲಿ ಹುಡುಕಿದರೂ ಒಂದೇ ಒಂದು ಸೀಟ್ ಸಿಗದಂತೆ ಆಗಿದೆ. ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಬಳಿಕ ಕಾಶ್ಮೀರದಲ್ಲಿ ಹೌಸ್​ಫುಲ್ ಕಾಣುತ್ತಿರುವ ಏಕೈಕ ಸಿನಿಮಾ ಇದು ಅನ್ನೋದು ವಿಶೇಷ.

ಕಾಶ್ಮೀರದಲ್ಲಿ ಕಳೆದ 33 ವರ್ಷಗಳಿಂದ ಚಿತ್ರಮಂದಿರ ಬಂದ್ ಆಗಿತ್ತು. ಇದನ್ನು ಕಳೆದ ವರ್ಷ ರೀ ಓಪನ್ ಮಾಡಲಾಯಿತು. ಕಾಶ್ಮೀರದಲ್ಲಿ ಇರುವ ಏಕೈಕ ಚಿತ್ರಮಂದಿರ ಇದು. ಹೀಗಿದ್ದರೂ ಯಾವಾಗಲೂ ಚಿತ್ರಮಂದಿರ ಇಲ್ಲಿ ಫುಲ್ ಆಗುವುದಿಲ್ಲ. ಜನವರಿ ತಿಂಗಳಲ್ಲಿ ರಿಲೀಸ್ ಆದ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಹಲವು ದಿನಗಳ ಕಾಲ ಕಾಶ್ಮೀರ ಚಿತ್ರಮಂದಿರ ಹೌಸ್​ಫುಲ್ ಪ್ರದರ್ಶನ ಕಂಡಿತ್ತು. ಈಗ ಕಾಶ್ಮೀರದ ಥಿಯೇಟರ್​ಗೆ ಮತ್ತೆ ಹೌಸ್​ಫುಲ್ ಬೋರ್ಡ್ ಬೀಳುತ್ತಿದೆ.

ಐನಾಕ್ಸ್ ಸಂಸ್ಥೆಯ ಸಹಕಾರದೊಂದಿಗೆ ವಿಜಯ್ ಧಾರ್ ಅವರು ಕಾಶ್ಮೀರದಲ್ಲಿ ಸಿನಿಮಾ ಮಂದಿರವನ್ನು ನಡೆಸುತ್ತಿದ್ದಾರೆ. ಇಲ್ಲಿಯೂ ಕ್ರಿಸ್ಟೋಫರ್ ನೋಲನ್ ಅವರ ಹವಾ ಇದೆ. ವೀಕೆಂಡ್​ ಶೋನ ಟಿಕೆಟ್​ಗಳು ಮಾರಾಟ ಆಗಿರುವ ಬಗ್ಗೆ ವಿಜಯ್ ಅವರು ಇಂಡಿಯನ್​ ಎಕ್ಸ್​ಪ್ರೆಸ್​ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

‘33 ವರ್ಷದ ನಂತರ ನಾವು ಕಾಶ್ಮೀರದಲ್ಲಿ ಥಿಯೇಟರ್ ಓಪನ್ ಮಾಡಿದಾಗ ಹೆಚ್ಚಿನದ್ದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಪಠಾಣ್ ರಿಲೀಸ್ ಆಗಿ ಇಲ್ಲಿ ಹೌಸ್​ಫುಲ್ ಓಡಿತು. ಪಠಾಣ್ ಬಳಿಕ ಯಾವ ಸಿನಿಮಾಗಳೂ ಅಷ್ಟಾಗಿ ಓಡಿಲ್ಲ. ಆದರೆ, ಆಪನ್​ಹೈಮರ್ ಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆ ನಮಗೆ ಅಚ್ಚರಿ ಮೂಡಿಸಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಆಪನ್​ಹೈಮರ್​’ ಪಾತ್ರಕ್ಕಾಗಿ ಅಪಾಯಕಾರಿ ಡಯೆಟ್​ ಮಾಡಿದ ನಟ ಕಿಲಿಯನ್​ ಮರ್ಫಿ; ದಿನಕ್ಕೆ ಒಂದೇ ಬಾದಾಮಿ?

‘ನಮ್ಮ ಮಲ್ಟಿಪ್ಲೆಕ್ಸ್​ನಲ್ಲಿ ಮೂರು ಸ್ಕ್ರೀನ್ ಇದೆ. ಒಟ್ಟೂ 535 ಆಸನ ವ್ಯವಸ್ಥೆ ಇದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರದ ಎಲ್ಲಾ ಟಿಕೆಟ್​ಗಳು ಮಾರಾಟ ಆಗಿವೆ. 300-1000 ಟಿಕೆಟ್​ ದರ ನಿಗದಿ ಮಾಡಿದ್ದೇವೆ. ಒಂದು ಶೋ ಹಿಂದಿಯಲ್ಲಿದೆ’ ಎಂದು ವಿಜಯ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು