‘ಬ್ಲಾಕ್​ಬಸ್ಟರ್​’ ಪಕ್ಕಾ; ‘ಹನುಮಾನ್’ ನೋಡಿ ವಿಮರ್ಶೆ ತಿಳಿಸಿದ ಅಭಿಮಾನಿಗಳು

|

Updated on: Jan 12, 2024 | 12:00 PM

HanuMan Twitter Review: ‘ಹನುಮಾನ್’ ಇದು ಸೂಪರ್ ಹೀರೋ ಚಿತ್ರ ಎಂದು ತಂಡ ಹೇಳಿಕೊಂಡಿದೆ. ಹನುಮನಂತನ ಆಶೀರ್ವಾದ ಇರುವ ಕಥಾ ನಾಯಕನ ಹೋರಾಟದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

‘ಬ್ಲಾಕ್​ಬಸ್ಟರ್​’ ಪಕ್ಕಾ; ‘ಹನುಮಾನ್’ ನೋಡಿ ವಿಮರ್ಶೆ ತಿಳಿಸಿದ ಅಭಿಮಾನಿಗಳು
ಹನುಮಾನ್
Follow us on

ಭಾರತದಲ್ಲಿ ಸೂಪರ್ ಹೀರೋ ರೀತಿಯ ಕಾನ್ಸೆಪ್ಟ್ ಚಿತ್ರಗಳು ಕಡಿಮೆ. ಈಗ ತೇಜ ಸಜ್ಜಾ ಅವರು ಹನುಮಂತನ ಸ್ಫೂರ್ತಿಯಾಗಿಟ್ಟುಕೊಂಡು ಮಾಡಿದ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇಂದು (ಜನವರಿ 12) ರಿಲೀಸ್ ಆಗಿದೆ. ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಎಫ್​ಎಕ್ಸ್ ಹಾಗೂ ಚಿತ್ರದ ಕ್ಲೈಮ್ಯಾಕ್ಸ್​ನ ಜನರು ಇಷ್ಟಪಟ್ಟಿದ್ದಾರೆ. ತೇಜ ಸಜ್ಜಾ (Taja Sajja) ಅವರ ನಟನೆಯನ್ನು ಕೂಡ ಜನರು ಹೊಗಳಿದ್ದಾರೆ.  ಹೀಗಾಗಿ ಮೊದಲ ದಿನ ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

‘ಹನುಮಾನ್’ ಚಿತ್ರದಲ್ಲಿ ತೇಜ ಸಜ್ಜಾ, ವರಲಕ್ಷ್ಮೀ ಶರತ್​ಕುಮಾರ್, ಅಮೃತಾ ಅಯ್ಯರ್, ವಿನಯ್ ರಾಯ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ವರ್ಮ ನಿರ್ದೇಶನ ಮಾಡಿದ್ದಾರೆ. ಇದು ಸೂಪರ್ ಹೀರೋ ಚಿತ್ರ ಎಂದು ತಂಡ ಹೇಳಿಕೊಂಡಿದೆ. ಹನುಮನಂತನ ಆಶೀರ್ವಾದ ಇರುವ ಕಥಾ ನಾಯಕನ ಹೋರಾಟದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

‘ಮೊದಲಾರ್ಧ ಉತ್ತಮವಾಗಿದೆ. ಸಿನಿಮಾ ಅನುಭವ ಬೇರೆಯದೇ ಲೆವೆಲ್​ನಲ್ಲಿ ಸಿಗುತ್ತದೆ. ವಿಎಫ್​ಎಕ್ಸ್, ಬಿಜಿಎಂ ಗೂಸ್​ಬಂಪ್ಸ್ ಸಿಗುತ್ತದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ವರ್ಷದ ಸಿನಿಮಾ. ಈ ಚಿತ್ರವನ್ನು ಇಷ್ಟಪಟ್ಟೆ. ಕ್ಲೈಮ್ಯಾಕ್ಸ್ ನಿಮ್ಮನ್ನು ಕಾಡುತ್ತದೆ. ಲವ್​ ಯೂ ಹನುಮಾನ್’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನಿದ್ದೆ ಬಂತು’; ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್

ಹನುಮಂತು (ತೇಜ) ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಸಹೋದರಿ (ವರಲಕ್ಷ್ಮಿ) ಜೊತೆ ವಾಸವಾಗಿರುತ್ತಾನೆ. ಅಂಜನಾದ್ರಿ ಎನ್ನುವ ಕಾಲ್ಪನಿಕ ಊರಲ್ಲಿ ಕಥೆ ನಡೆಯುತ್ತದೆ. ಆ ಊರಲ್ಲಿ ಹನುಮಂತನ ದೊಡ್ಡದಾದ ಮೂರ್ತಿ ಇರುತ್ತದೆ. ಆ ಬಳಿಕ ಹನುಮಂತುಗೆ ದೇವ ಹನುಮಾನ್​ ಆಶೀರ್ವಾದ ಸಿಗುತ್ತದೆ. ನಂತರ ಏನೆಲ್ಲ ಆಗುತ್ತದೆ ಅನ್ನೋದು ಸಿನಿಮಾದ ಕಥೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:59 am, Fri, 12 January 24