‘ಹರಿ ಹರ ವೀರ ಮಲ್ಲು’ ಫಸ್ಟ್​ ಹಾಫ್ ವಿಮರ್ಶೆ

Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಇಂದು (ಜುಲೈ 24) ಬಿಡುಗಡೆ ಆಗಿದೆ. ಹಲವು ರಾಜ್ಯಗಳಲ್ಲಿ ಏಕಕಾಲಕ್ಕೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಗಿದೆ. ಅಭಿಮಾನಿಗಳು ನಿರೀಕ್ಷೆಯಿಂದ ಚಿತ್ರಮಂದಿರಗಳಿಗೆ ಬಂದಿದ್ದಾರೆ. ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ಫಸ್ಟ್ ಹಾಫ್ ರಿವ್ಯೂ...

‘ಹರಿ ಹರ ವೀರ ಮಲ್ಲು’ ಫಸ್ಟ್​ ಹಾಫ್ ವಿಮರ್ಶೆ
ಪವನ್ ಕಲ್ಯಾಣ್
Updated By: Digi Tech Desk

Updated on: Jul 24, 2025 | 12:35 PM

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಇಂದು (ಜುಲೈ 24) ಬಿಡುಗಡೆ ಆಗಿದೆ. ಕೆಲ ವರ್ಷಗಳ ಬಳಿಕ ಪವನ್ ಕಲ್ಯಾಣ್ ಸೋಲೊ ಹೀರೋ ಆಗಿ ನಟಿಸಿರುವ ಸಿನಿಮಾ ತೆರೆಗೆ ಬಂದಿದೆ. ಅದೂ ರೀಮೇಕ್ ಅಲ್ಲದ, ಒರಿಜಿನಲ್ ಕತೆಯುಳ್ಳ ಸಿನಿಮಾ. ಸಹಜವಾಗಿಯೇ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇದೆ. ಪವನ್ ಕಲ್ಯಾಣ್, ನಿಧಿ ಅಗರ್ವಾಲ್,  ಬಾಬಿ ಡಿಯೋಲ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸಿನಿಮಾದ ಮೊದಲಾರ್ಧದ ವಿಮರ್ಶೆ ಇಲ್ಲಿದೆ…

  1. ಹರಿ ಹರ ವೀರ ಮಲ್ಲು ಸಿನಿಮಾ ಪವರ್ ಫುಲ್ ಮೊದಲಾರ್ಧ. ಆ್ಯಕ್ಷನ್, ಹಾಡುಗಳ ಜೊತೆಗೆ ಸಖತ್ ಟ್ವಿಸ್ಟ್.
  2. ಪವನ್ ಕಲ್ಯಾಣ್ ಪವರ್ ಫುಲ್ ಎಂಟ್ರಿ. ವಜ್ರಗಳ ಕಳ್ಳನ ಪಾತ್ರದಲ್ಲಿ ಪವನ್ ಕಾಣಿಸಿಕೊಂಡಿದ್ದಾರೆ. ಉಳ್ಳವರಿಂದ ದೋಚಿ ಬಡವರಿಗೆ ಹಂಚುವ ವೀರ ಮಲ್ಲು.
  3. ಪವನ್ ಕಲ್ಯಾಣ್ ಪಾತ್ರದಷ್ಟೇ ಬಾಬಿ ಡಿಯೋಲ್ ಪಾತ್ರಕ್ಕೂ ತೂಕ ಇದೆ. ಮೊದಲಾರ್ಧದಲ್ಲಿ ಪವರ್ ಫುಲ್ ಎಂಟ್ರಿ, ಆ್ಯಕ್ಷನ್ ಮತ್ತು ಸಂಭಾಷಣೆಗಳು ಇವೆ.
  4. ನಾಯಕಿ ನಿಧಿ ಅಗರ್ವಾಲ್ ಅಂದವಾಗಿ ಕಾಣಿಸಿಕೊಂಡಿದ್ದಾರೆ. ಮೊದಲಾರ್ಧದಲ್ಲೇ ನಾಯಕಿ ನಡುವೆ ರೊಮ್ಯಾನ್ಸ್ ಸ್ಟಾರ್ಟ್ ಆದರೆ ಯಾರೂ ಊಹಿಸದ ಟ್ವಿಸ್ಟ್ ಕೊಡುತ್ತೆ ನಿಧಿ ಅಗರ್ವಾಲ್ ಪಾತ್ರ.
  5. ಸಾಮಾನ್ಯ ವಜ್ರಗಳ ಕಳ್ಳನಿಗೆ ಬಹು ದೊಡ್ಡ ಟಾಸ್ಕ್ ಒಂದು ಸಿಗುತ್ತದೆ. ಅದುವೇ ಇಂಟರ್ವೆಲ್ ಟ್ವಿಸ್ಟ್, ನಾಯಕನ ಮುಂದಿನ ಹಾದಿ ಸವಾಲಿನದ್ದಾಗಿರಲಿದೆ.
  6. ಮೊದಲಾರ್ಧದಲ್ಲಿ ಮೂರು ಆ್ಯಕ್ಷನ್ ಸೀನ್ ಎರಡು ಹಾಡುಗಳಿವೆ. ಹಾಸ್ಯ ದೃಶ್ಯಗಳು ತುಸು ಕಡಿಮೆಯೇ.
  7. ಇತ್ತೀಚೆಗೆ ನಿಧನರಾದ ಕೋಟಾ ಶ್ರೀನಿವಾಸ ರಾವ್ ಅವರ ಕೊನೆಯ ಸಿನಿಮಾ ಇದಾಗಿದ್ದು ಭೂಮಾಲಿಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  8. ಸಿನಿಮಾದ ಆರಂಭದಲ್ಲಿ ಬರುವ ಜಟ್ಟಿಗಳೊಂದಿಗೆ ಮಲ್ಲಯುದ್ಧ ಚೆನ್ನಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:07 pm, Thu, 24 July 25