Pepe Movie Review: ಹೊಡಿ-ಬಡಿ ಅವತಾರದಲ್ಲಿ ಬಂದ ‘ಪೆಪೆ’ ವಿನಯ್ ರಾಜ್​ಕುಮಾರ್​

|

Updated on: Aug 30, 2024 | 5:49 PM

‘ಪೆಪೆ’ ಸಿನಿಮಾದಲ್ಲಿ ಸಂಘರ್ಷದ ಕಥೆ ಇದೆ. ಇದರ ಮೂಲಕ ವಿನಯ್​ ರಾಜ್​ಕುಮಾರ್​ ಅವರು ಮಾಸ್​ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸರಳವಾಗಿ ಮನಮುಟ್ಟಬಹುದಾದ ಈ ಕಥೆಗೆ ನಿರ್ದೇಶಕರು ಸಾಕಷ್ಟು ಟ್ವಿಸ್ಟ್​ಗಳನ್ನು ನೀಡಿ, ತಮ್ಮದೇ ಫ್ಲೇವರ್​ ನೀಡಿದ್ದಾರೆ. ಒಟ್ಟಾರೆ ‘ಪೆಪೆ’ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

Pepe Movie Review: ಹೊಡಿ-ಬಡಿ ಅವತಾರದಲ್ಲಿ ಬಂದ ‘ಪೆಪೆ’ ವಿನಯ್ ರಾಜ್​ಕುಮಾರ್​
ವಿನಯ್​ ರಾಜ್​ಕುಮಾರ್​
Follow us on

ಸಿನಿಮಾ: ಪೆಪೆ. ನಿರ್ಮಾಣ: ಉದಯ್​ ಶಂಕರ್​ ಎಸ್​., ಬಿ.ಎಂ. ಶ್ರೀರಾಮ್​ ಕೋಲಾರ. ನಿರ್ದೇಶನ: ಶ್ರೀಲೇಶ್​ ಎಸ್​. ನಾಯರ್​. ಪಾತ್ರವರ್ಗ: ವಿನಯ್​ ರಾಜ್​ಕುಮಾರ್​, ಮಯೂರ್ ಪಟೇಲ್​, ನವೀನ್​ ಡಿ. ಪಡೀಲ್​, ಯಶ್​ ಶೆಟ್ಟಿ, ಕಾಜಲ್​ ಕುಂದರ್​, ಮೇದಿನಿ ಕೆಳಮನಿ, ಬಾಲರಾಜ್​ ವಾಡಿ, ಅರುಣಾ ಬಾಲ್​ರಾಜ್​, ಸಂಧ್ಯಾ ಅರೆಕೆರೆ ಮುಂತಾದವರು. ಸ್ಟಾರ್​: 3/5

ನಟ ವಿನಯ್ ರಾಜ್​ಕುಮಾರ್​ ಅವರು ಇದೇ ಮೊದಲ ಬಾರಿಗೆ ಸಖತ್​ ಮಾಸ್​ ಆಗಿ ಕಾಣಿಸಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಪೆಪೆ’ ನಿರೀಕ್ಷೆ ಮೂಡಿಸಿತ್ತು. ಟ್ರೆಲರ್​ ಬಿಡುಗಡೆ ಆದಾಗ ನಿರೀಕ್ಷೆ ಇನ್ನಷ್ಟು ಹೆಚ್ಚಾಯಿತು. ಈ ಚಿತ್ರದಲ್ಲಿ ಗಂಭೀರವಾದ ಕಹಾನಿಯನ್ನು ಹೇಳಲಾಗಿದೆ ಎಂಬುದು ಟ್ರೇಲರ್​ ಮೂಲಕ ಗೊತ್ತಾಗಿತ್ತು. ವಿನಯ್ ರಾಜ್​ಕುಮಾರ್​ ಮಾಸ್​ ಆಗಿ ಕಾಣಿಸಿಕೊಂಡಿರುವುದು ನಿಜ. ಗಂಭೀರ ಕಥಾವಸ್ತು ಇರುವುದು ಕೂಡ ನಿಜ. ಅವರನ್ನು ಈ ಅವತಾರದಲ್ಲಿ ನೋಡಲು ಇಷ್ಟಪಡುವ ಪ್ರೇಕ್ಷಕರಿಗೆ ‘ಪೆಪೆ’ ಸಿನಿಮಾ ಹಿಡಿಸುತ್ತದೆ.

ಜಾತಿ ಮತ್ತು ವರ್ಗ ಸಂಘರ್ಷ ಇರುವ ಕಥೆಯನ್ನು ‘ಪೆಪೆ’ ಸಿನಿಮಾದಲ್ಲಿ ತೋರಿಸಲಾಗಿದೆ. ತಲೆಮಾರುಗಳ ತನಕ ಸಾಗಿ ಬಂದ ದ್ವೇಷದ ಕಥೆ ಕೂಡ ಇದರಲ್ಲಿ ಇದೆ. ಇದನ್ನು ಪ್ರೇಕ್ಷಕರ ಎದುರು ಪ್ರಸ್ತುತಪಡಿಸುವಾಗ ಫ್ಲ್ಯಾಶ್​ ಬ್ಯಾಕ್ ತಂತ್ರದ ಮೊರೆ ಹೋಗಲಾಗಿದೆ. ಎಲ್ಲವನ್ನೂ ಒಮ್ಮೆಲೇ ಬಿಟ್ಟುಕೊಡದೇ ಹಂತ ಹಂತವಾಗಿ ಸಸ್ಪೆನ್ಸ್​ ರಿವೀಲ್​ ಮಾಡುವ ತಂತ್ರವನ್ನು ನಿರ್ದೇಶಕರು ಪ್ರಯೋಗಿಸಿದ್ದಾರೆ. ಒಟ್ಟಾರೆಯಾಗಿ ನೋಡುವಾಗ ಈ ಸಿನಿಮಾ ಬೇರೆಯದೇ ಫೀಲ್​ ನೀಡುತ್ತದೆ.

ಇದನ್ನೂ ಓದಿ: ಬೆಳ್ಳಗಿರೋದೆಲ್ಲ ‘ಪೌಡರ್​’ ಅಲ್ಲ: ಕಳೆದು ಹೋಗಿದ್ದನ್ನು ಹುಡುಕುವ ಪ್ರಯಾಸ ಪ್ರಸಂಗ

ರಿಯಲಿಸ್ಟಿಕ್​ ಅಂಶಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಮೂಡಿಬಂದಿರುವ ಈ ಸಿನಿಮಾದಲ್ಲಿ ಸಾಮಾಜಿಕ ಪಿಡುಗಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಆಗಿದೆ. ಜಾತಿ ತಾರತಮ್ಯದ ಜೊತೆಗೆ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುವಂತಹ ಒಂದಷ್ಟು ಸನ್ನಿವೇಶಗಳು ಇವೆ. ಆ ಮೂಲಕ ಅಂಥ ಆಚರಣೆಗಳನ್ನು ಪ್ರಶ್ನಿಸುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ.

ಇದನ್ನೂ ಓದಿ: ಸಮರ್ಜಿತ್​ ಲಂಕೇಶ್​ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ‘ಗೌರಿ’ ಸಿನಿಮಾ

ಮೇಕಿಂಗ್​ ಗುಣಮಟ್ಟದ ಕಾರಣದಿಂದಲೂ ‘ಪೆಪೆ’ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಅಚ್ಚುಕಟ್ಟಾದ ಛಾಯಾಗ್ರಹಣ, ಚುರುಕಾದ ಸಂಕಲನ, ಸೆಳೆಯುವಂತಹ ಹಿನ್ನೆಲೆ ಸಂಗೀತದಿಂದಾಗಿ ಈ ಚಿತ್ರ ಇಷ್ಟ ಆಗುತ್ತದೆ. ವಿನಯ್​ ರಾಜ್​ಕುಮಾರ್​ ಅವರನ್ನು ಮಾಸ್​ ಆಗಿ ತೋರಿಸಬೇಕು ಎಂಬ ಉದ್ದೇಶ ಈಡೇರಿದೆ. ವಿನಯ್​ ರಾಜ್​ಕುಮಾರ್​ ಜೊತೆ ಕಾಜಲ್​ ಕುಂದರ್​, ಅರುಣಾ ಬಾಲರಾಜ್, ಮೇದಿನಿ ಕೆಳಮನಿ, ಮಯೂರ್​ ಪಟೇಲ್, ಬಾಲರಾಜ್​ ವಾಡಿ ಮುಂತಾದ ಕಲಾವಿದರ ನಟನೆಯಿಂದಾಗಿ ಸಿನಿಮಾದ ಮೆರುಗು ಜಾಸ್ತಿ ಆಗಿದೆ. ಮಾಮೂಲಿ ಪ್ಯಾಟರ್ನ್​​ ಬಿಟ್ಟು ಬೇರೆ ರೀತಿಯ ಸಂಭಾಷಣೆಗಳಿಂದಾಗಿ ಎಲ್ಲ ದೃಶ್ಯಗಳ ಸ್ವರೂಪ ಬದಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:58 pm, Fri, 30 August 24