Gowri Movie Review: ಸಮರ್ಜಿತ್​ ಲಂಕೇಶ್​ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ‘ಗೌರಿ’ ಸಿನಿಮಾ

ಬಣ್ಣದ ಲೋಕದಲ್ಲಿ ಹೀರೋ ಆಗಿ ಮಿಂಚಲು ಬೇಕಾದ ಎಲ್ಲ ಗುಣಗಳು ಸಮರ್ಜಿತ್​ ಲಂಕೇಶ್​ ಅವರಿಗೆ ಇದೆ. ಡ್ಯಾನ್ಸ್​, ಫೈಟ್​, ಆ್ಯಕ್ಟಿಂಗ್​ ಸೇರಿದಂತೆ ಅವರೊಳಗಿನ ಎಲ್ಲ ಪ್ರತಿಭೆಗಳನ್ನು ಪ್ರೇಕ್ಷಕರ ಮುಂದಿಡಲು ಸರಿಯಾಗುವ ರೀತಿಯಲ್ಲೇ ‘ಗೌರಿ’ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಇಂದ್ರಜಿತ್ ಲಂಕೇಶ್​ ಆ್ಯಕ್ಷನ್​-ಕಟ್​ ಹೇಳಿದ ಈ ಸಿನಿಮಾದ ವಿಮರ್ಶೆ ಇಲ್ಲಿದೆ..

Gowri Movie Review: ಸಮರ್ಜಿತ್​ ಲಂಕೇಶ್​ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ‘ಗೌರಿ’ ಸಿನಿಮಾ
ಸಮರ್ಜಿತ್​ ಲಂಕೇಶ್​
Follow us
|

Updated on: Aug 15, 2024 | 5:12 PM

ಸಿನಿಮಾ: ಗೌರಿ. ನಿರ್ಮಾಣ: ಇಂದ್ರಜಿತ್​ ಲಂಕೇಶ್​. ನಿರ್ದೇಶನ: ಇಂದ್ರಜಿತ್​ ಲಂಕೇಶ್​. ಪಾತ್ರವರ್ಗ: ಸಮರ್ಜಿತ್​ ಲಂಕೇಶ್​, ಸಾನ್ಯಾ ಐಯ್ಯರ್​, ಸಂಪತ್​ ಮೈತ್ರೇಯಾ, ಮಾನಸಿ ಸುಧೀರ್​, ಸಿಹಿ ಕಹಿ ಚಂದ್ರು ಮುಂತಾದವರು. ಸ್ಟಾರ್: 3/5

ಚಿತ್ರರಂಗದಲ್ಲಿ ಇಂದ್ರಜಿತ್​ ಲಂಕೇಶ್ ಅವರಿಗೆ ಇರುವ ಅನುಭವ ಹಲವು ವರ್ಷಗಳದ್ದು. ಅನೇಕ ಸ್ಟಾರ್ ಕಲಾವಿದರಿಗೆ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈಗ ಅವರು ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ತಮ್ಮದೇ ನಿರ್ಮಾಣ ಮತ್ತು ನಿರ್ದೇಶನದ ‘ಗೌರಿ’ ಸಿನಿಮಾ ಮೂಲಕ ಮಗನನ್ನು ಲಾಂಚ್​ ಮಾಡಿದ್ದಾರೆ. ಸಮರ್ಜಿತ್​ ಲಂಕೇಶ್​ ಚೊಚ್ಚಲ ಬಾರಿಗೆ ಹೀರೋ ಆಗಿ ನಟಿಸಿರುವ ಈ ಸಿನಿಮಾ ಇಂದು (ಆಗಸ್ಟ್​ 15) ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆ ಆಗಿದೆ.

ಯಾವುದೇ ಹೊಸ ಹೀರೋ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ ಎಂದಾಗ ಅವರ ಬಗ್ಗೆ ತಿಳಿದುಕೊಳ್ಳಲು ಸಿನಿಪ್ರಿಯರಿಗೆ ಆಸಕ್ತಿ ಇರುತ್ತದೆ. ಸಮರ್ಜಿತ್​ ಲಂಕೇಶ್​ ಹೀರೋ ಆಗುತ್ತಿದ್ದಾರೆ ಎಂದಾಗ ಆ ರೀತಿಯ ಕೌತುಕ ಸಹಜವಾಗಿಯೇ ಮೂಡಿತ್ತು. ಒಂದಷ್ಟು ತಯಾರಿ ಮಾಡಿಕೊಂಡು ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ಸಮರ್ಜಿತ್​ ಅವರಲ್ಲಿ ಏನೆಲ್ಲ ಪ್ರತಿಭೆ ಇದೆ ಎಂಬುದನ್ನು ತಿಳಿಯಲು ‘ಗೌರಿ’ ಸಿನಿಮಾ ನೋಡಬೇಕು. ಲವರ್​ ಬಾಯ್​ ರೀತಿ ಲುಕ್​ ಇರುವ ಸಮರ್ಜಿತ್​ ಅವರು ಅದಕ್ಕೆ ಮಾತ್ರ ಸೀಮಿತರಲ್ಲ. ಮಾಸ್​ ಆಗಿಯೂ ಅಬ್ಬರಿಸುವ ತಾಕತ್ತು ಅವರಿಗೆ ಇದೆ. ಡ್ಯಾನ್ಸ್​ ವಿಚಾರದಲ್ಲಿ ಫುಲ್​ ಮಾರ್ಕ್ಸ್​ ನೀಡಲೇಬೇಕು. ನಟನೆಯಲ್ಲೂ ಅವರು ಗಮನ ಸೆಳೆಯುತ್ತಾರೆ. ರೊಮ್ಯಾನ್ಸ್​, ಎಮೋಷನಲ್, ಆ್ಯಕ್ಷನ್​ ದೃಶ್ಯಗಳಲ್ಲಿ ಚಪ್ಪಾಳೆ ಗಿಟ್ಟಿಸುತ್ತಾರೆ. ಮಗ ಏನೆಲ್ಲ ಮಾಡಬಲ್ಲ ಎಂಬುದನ್ನು ‘ಗೌರಿ’ ಸಿನಿಮಾ ಮೂಲಕ ಲಂಕೇಶ್​ ತೋರಿಸಿದ್ದಾರೆ. ಅದಕ್ಕಾಗಿ ಸಮರ್ಜಿತ್​ ಅವರಿಗೆ ಇಲ್ಲಿ ದ್ವಿಪಾತ್ರ ಕೂಡ ಇದೆ!

ಇದಿಷ್ಟು ಸರ್ಮಜಿತ್​ ಅವರ ಪ್ರತಿಭಾ ಪ್ರದರ್ಶನವಾದರೆ, ಒಟ್ಟಾರೆ ಸಿನಿಮಾದ ಕಥೆ ಏನು? ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದು ಹುಡುಗನೊಬ್ಬ ದೊಡ್ಡ ಸಿಂಗರ್​ ಆಗಬೇಕು ಎಂಬ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬರುತ್ತಾನೆ. ಈ ಮಹಾನಗರದಲ್ಲಿ ಸಂಗೀತದ ಮೇಲೆ ಆಸಕ್ತಿಯಿರುವ ಸುಂದರಿಯೊಬ್ಬಳು ಆತನಿಗೆ ಸಹಾಯ ಮಾಡುತ್ತಾಳೆ. ನಿಧಾನವಾಗಿ ಅವರಿಬ್ಬರ ನಡುವೆ ಲವ್​ ಚಿಗುರುತ್ತದೆ. ಬಡತನದ ಜೊತೆ ಬಳುವಳಿಯಾಗಿ ಬಂದ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಾ ಆ ಹುಡುಗ ಕಡೆಗೂ ಒಂದು ಪ್ರತಿಷ್ಠಿತ ರಿಯಾಲಿಟಿ ಶೋ ವೇದಿಕೆಯಲ್ಲಿ ಹಾಡುವ ಅವಕಾಶ ಪಡೆಯುತ್ತಾನೆ. ಮುಂದೇನಾಗುತ್ತದೆ ಎಂಬುದು ಕಥೆಯ ಕೌತುಕ.

ಈ ಕಥೆಯಲ್ಲಿ ತುಂಬಾ ವಿಶೇಷವಾದ ಏನನ್ನೂ ಕಾಣಲು ಸಾಧ್ಯವಿಲ್ಲ. ಆದರೆ ಅದರೊಳಗೆ ಒಂದು ಸಾಮಾಜಿಕ ಸಂದೇಶವನ್ನು ಹೇಳುವ ಮೂಲಕ ಇಂದ್ರಜಿತ್​ ಲಂಕೇಶ್​ ಅವರು ಪ್ರೇಕ್ಷಕರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ವಿಶೇಷಚೇತನ ವ್ಯಕ್ತಿಗಳ ಕುರಿತಾಗಿ ಹೆಣೆದ ಈ ಕಥೆ ಎಮೋಷನಲ್​ ಆಗಿದೆ. ತಾಯಿ ಸೆಂಟಿಮೆಂಟ್​ ಮೂಲಕವೂ ಪ್ರೇಕ್ಷಕರನ್ನು ಸೆಳೆದುಕೊಳ್ಳಲಾಗಿದೆ. ಆ್ಯಕ್ಷನ್​-ಪ್ರಿಯರನ್ನು ಮೆಚ್ಚಿಸುವ ಪ್ರಯತ್ನವೂ ಈ ಸಿನಿಮಾದಲ್ಲಾಗಿದೆ. ಇವೆಲ್ಲ ಇದ್ದರೂ ಸಿನಿಮಾವನ್ನು ತುಂಬ ಸರಳವಾಗಿಯೇ ಕಟ್ಟಿಕೊಟ್ಟಿದ್ದಾರೆ ಇಂದ್ರಜಿತ್​ ಲಂಕೇಶ್​.

ಸಮರ್ಜಿತ್​ ಅವರಿಗೆ ಜೋಡಿಯಾಗಿ ಸಾನ್ಯಾ ಐಯ್ಯರ್​ ಅಭಿನಯಿಸಿದ್ದಾರೆ. ಇಬ್ಬರ ಜೋಡಿ ಫ್ರೆಶ್​ ಆಗಿರುವ ಕಾರಣದಿಂದ ರೊಮ್ಯಾಂಟಿಕ್​ ದೃಶ್ಯಗಳು ಹೈಲೈಟ್​ ಆಗಿವೆ. ನಾಯಕಿ ಪಾತ್ರದಲ್ಲಿ ಸಾನ್ಯಾ ಐಯ್ಯರ್​ ಅವರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಲೂಸ್​ ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ರಿಕ್ಕಿ ಕೇಜ್​, ವಸುಂದರಾ ದಾಸ್​ ಮುಂತಾದವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ಅಕುಲ್​ ಬಾಲಾಜಿ ಈ ಸಿನಿಮಾದಲ್ಲಿ ಕೂಡ ನಿರೂಪಕನ ಪಾತ್ರದಲ್ಲಿ ವೇದಿಕೆ ಏರಿದ್ದಾರೆ. ಸಂಪತ್​ ಮೈತ್ರೇಯಾ, ಮಾನಸಿ ಸುಧೀರ್​ ಅವರು ತಮ್ಮ ಅಭಿನಯದ ಮೂಲಕ ಮೆರುಗು ತುಂಬಿದ್ದಾರೆ.

ಇದನ್ನೂ ಓದಿ: Bheema Movie Review: ಹೇಗಿದೆ ‘ಭೀಮ’ ಸಿನಿಮಾ? ನಿರ್ದೇಶಕರ ಉದ್ದೇಶ ಈಡೇರಿದೆಯೇ?

ಮೇಕಿಂಗ್​ ವಿಚಾರದಲ್ಲಿ ಒಂದಷ್ಟು ಹೊಸತನ ಬೇಕಿತ್ತು ಎನಿಸುತ್ತದೆ. ಮೊದಲಾರ್ಧಕ್ಕೆ ಇನ್ನಷ್ಟು ಚುರುಕು ಮುಟ್ಟಿಸುವ ಅವಶ್ಯಕತೆ ಇತ್ತು. ಹಲವು ದೃಶ್ಯಗಳಲ್ಲಿ ನಿರ್ದೇಶಕರು ಸಣ್ಣ ಸಣ್ಣ ಲಾಜಿಕ್​ಗಳ ಕಡೆಗೆ ಗಮನ ಹರಿಸಲು ಮರೆತಂತಿದೆ. ಕಾಮಿಡಿ ದೃಶ್ಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ. ಮಂಜು ಪಾವಗಡ, ನವಾಜ್​ ಕಾಣಿಸಿಕೊಂಡ ಹಾಸ್ಯ ಸನ್ನಿವೇಶಗಳಿಂದ ಸಿನಿಮಾಗೆ ಯಾವುದೇ ಪ್ರಯೋಜನ ಆಗಿಲ್ಲ. ಸಿನಿಮಾದ ಕಥೆಯಲ್ಲಿ ಸಂಗೀತಕ್ಕೆ ಮಹತ್ವವಿದೆ. ಹಾಗಿದ್ದರೂ ಕೂಡ ಹಾಡುಗಳ ವಿಚಾರದಲ್ಲಿ ‘ಗೌರಿ’ ಕೊಂಚ ಡಲ್​ ಎನಿಸುತ್ತದೆ. ಇಂತಹ ಒಂದಷ್ಟು ನೆಗೆಟಿವ್​ ಅಂಶಗಳನ್ನು ಬದಿಗಿಟ್ಟರೆ ಹೊಸ ನಾಯನ ನಟನ ‘ಗೌರಿ’ ಚಿತ್ರವನ್ನು ಒಮ್ಮೆ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ