Indrajit Lankesh: ಪುನೀತ್​ ಜನ್ಮದಿನವನ್ನು ‘ಅಪ್ಪು ದಿನಾಚರಣೆ’ಯನ್ನಾಗಿ ಆಚರಿಸಿ; ಇಂದ್ರಜಿತ್​ ಲಂಕೇಶ್​

ಪುನೀತ್​ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಹೀಗಾಗಿ, ಪುನೀತ್​ ಜನ್ಮದಿನವನ್ನು ಅಪ್ಪು ದಿನಾಚರಣೆಯಾಗಿ ಮಾಡಬೇಕು ಎಂದು ಅವರು ಕೋರಿದ್ದಾರೆ.

Indrajit Lankesh: ಪುನೀತ್​ ಜನ್ಮದಿನವನ್ನು ‘ಅಪ್ಪು ದಿನಾಚರಣೆ’ಯನ್ನಾಗಿ ಆಚರಿಸಿ; ಇಂದ್ರಜಿತ್​ ಲಂಕೇಶ್​
ಇಂದ್ರಜಿತ್​ ಲಂಕೇಶ್​
Follow us
| Edited By: Rajesh Duggumane

Updated on:Nov 16, 2021 | 3:54 PM

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಎಲ್ಲ ಕಡೆಗಳಲ್ಲೂ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಪರವಾಗಿ ‘ಪುನೀತ ನಮನ’ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಸ್ಯಾಂಡಲ್​ವುಡ್​ ಹಾಗೂ ಪರಭಾಷೆಯ ಕಲಾವಿದರು ಆಗಮಿಸುತ್ತಿದ್ದಾರೆ. ಇದಕ್ಕೆ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರು ಕೂಡ ಆಗಮಿಸಿದ್ದಾರೆ. ಈ ವೇಳೆ ಸರ್ಕಾರದ ಎದುರು ಒಂದು ಹೊಸ ಬೇಡಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಾತನಾಡುವುದಾಗಿ ಹೇಳಿದ್ದಾರೆ.

ಪುನೀತ್​ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಹೀಗಾಗಿ, ಪುನೀತ್​ ಜನ್ಮದಿನವನ್ನು ಅಪ್ಪು ದಿನಾಚರಣೆಯಾಗಿ ಮಾಡಬೇಕು ಎಂದು ಅವರು ಕೋರಿದ್ದಾರೆ. ‘ನಾನು ಪುನೀತ್​ ಒಂದೇ ವರ್ಷ ಒಂದೇ ತಿಂಗಳು ಚಿತ್ರರಂಗ ಜರ್ನಿ ಆರಂಭಿಸಿದೆವು. ಅವರ ನಟನೆಯ ಮೊದಲ ಸಿನಿಮಾ ಏಪ್ರಿಲ್​ನಲ್ಲಿ ತೆರೆಗೆ ಬಂತು. ನನ್ನ ನಿರ್ದೇಶನದ ಸಿನಿಮಾ ಮೇ ತಿಂಗಳಲ್ಲಿ ರಿಲೀಸ್​ ಆಯ್ತು. ಪುನೀತ್​ ನಾನು ಪ್ರಶಸ್ತಿ ಸ್ವೀಕರಿಸಲು ಮುಂಬೈಗೆ ತೆರಳಿದ್ದೆವು. ಆಗಿನಿಂದಲೇ ನನಗೆ ಅವರ ಪರಿಚಯ ಇತ್ತು. ರಾಜ್​​ಕುಮಾರ್​ ಅವರ ಹಾದಿಯಲ್ಲೇ ಪುನೀತ್​ ನಡೆದಿದ್ದಾರೆ’ ಎಂದರು ಇಂದ್ರಜಿತ್​.

‘ಪುನೀತ್​ ಡ್ಯಾನ್ಸ್​ನಲ್ಲಿ ಮಿಂಚಿದ್ದಾರೆ. ಅವರು ನಮ್ಮ ಜತೆಗೆ ಈಗಲೂ ಇದ್ದಾರೆ. ಅವರು ಎಲ್ಲಿಯೂ ಹೋಗಿಲ್ಲ. ನಗುವನ್ನು ತೋರಿಸಿಕೊಟ್ಟರು. ಅವರ ಜೀವನ ಆಧಾರವಾಗಿಟ್ಟುಕೊಂಡು ನಾವು ಜೀವನ ಸಾಗಿಸಬೇಕು. ಅವರು ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಪ್ರತಿಯೊಬ್ಬ ಮಹಿಳೆಯರಿಗೆ, ಮಕ್ಕಳಿಗೆ ಅವರು ಸಹಾಯ ಮಾಡಿದ್ದಾರೆ’ ಎಂದಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಒಂದು ಮನವಿ ಸಲ್ಲಿಕೆ ಮಾಡಬೇಕು. ಅವರ ಹುಟ್ಟಿದ ಹಬ್ಬವನ್ನು ‘ಅಪ್ಪು ದಿನಾಚರಣೆ’ಯನ್ನಾಗಿ ಮಾಡಬೇಕು. ಪುನೀತ್​ ಹೃದಯದಲ್ಲಿ ಶ್ರೀಮಂತರು. ಅವರಿಗೆ ನಾವೇನೂ ಕೊಡಬೇಕಿಲ್ಲ. ಆದರೆ, ಪುನೀತ್​ ಹೆಸರಲ್ಲಿ ಒಂದಷ್ಟು ಯುವ ಪ್ರತಿಭೆಗಳಿಗೆ ಸ್ಕಾಲರ್​ಶಿಪ್​ ಕೊಡುವ ಕೆಲಸ ಆಗಬೇಕು. ಸಿಎಂ ಫಂಡ್​ನಿಂದ ಈ ರೀತಿಯ ಕೆಲಸ ಆಗಬೇಕು. ಆ ಮೂಲಕ ಪುನೀತ್​ ದಿನಾಚರಣೆ ಆಚರಿಸಬೇಕು’ ಎಂದು ಕೋರಿದರು ಅವರು.

ಇದನ್ನೂ ಓದಿ: ‘ಪುನೀತ ನಮನ’ ಕಾರ್ಯಕ್ರಮ ಲೈವ್​ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್​ ಮಾಡಿ

Published On - 3:53 pm, Tue, 16 November 21

ತಾಜಾ ಸುದ್ದಿ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ