Ravi Bopanna First Half Review : ಹೇಗಿದೆ ರವಿ ಬೋಪಣ್ಣ ಸಿನಿಮಾದ ಮೊದಲಾರ್ಧ? ಇಲ್ಲಿದೆ ವಿಮರ್ಶೆ

ರವಿಚಂದ್ರನ್​ ಅವರು ಸಿನಿಮಾದಿಂದ ಸಿನಿಮಾಗೆ ಭಿನ್ನ ಗೆಟಪ್ ತಾಳುತ್ತಿದ್ದಾರೆ. ಅವರು ಈಗ ‘ರವಿ ಬೋಪಣ್ಣ’ ಸಿನಿಮಾದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ.

Ravi Bopanna First Half Review : ಹೇಗಿದೆ ರವಿ ಬೋಪಣ್ಣ ಸಿನಿಮಾದ ಮೊದಲಾರ್ಧ? ಇಲ್ಲಿದೆ ವಿಮರ್ಶೆ
ರವಿಚಂದ್ರನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 12, 2022 | 11:12 AM

ರವಿಚಂದ್ರನ್ (Ravichandran)​ ಅವರು ಸಿನಿಮಾದಿಂದ ಸಿನಿಮಾಗೆ ಭಿನ್ನ ಗೆಟಪ್ ತಾಳುತ್ತಿದ್ದಾರೆ. ಅವರು ಈಗ ‘ರವಿ ಬೋಪಣ್ಣ’ ಸಿನಿಮಾದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದಾರೆ ಎಂಬುದು ವಿಶೇಷ. ಈ ಚಿತ್ರದಲ್ಲಿ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ (Radhika Kumaraswamy), ಕಾವ್ಯಾ ಶೆಟ್ಟಿ ಮೊದಲಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇದು ಮಲಯಾಳಂ ಚಿತ್ರದ ರಿಮೇಕ್. ಆದರೆ, ರವಿಚಂದ್ರನ್ ಅವರು ಇದನ್ನು ರಿಮೇಕ್ ಎಂದು ಹೇಳಲು ರೆಡಿ ಇಲ್ಲ. ಇದಕ್ಕೆ ಕಾರಣವೂ ಇದೆ. ಮೂಲ ಚಿತ್ರದ ಶೇ.30 ಭಾಗವನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಅವರು. ಹಾಗಾದರೆ, ‘ರವಿ ಬೋಪಣ್ಣ’ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

  • ರವಿಚಂದ್ರನ್ ಅವರು ಈ ಚಿತ್ರದ ಮೊದಲಾರ್ಧದಲ್ಲಿ ಭಿನ್ನ ಭಿನ್ನ ಗೆಟಪ್​ನಲ್ಲಿ ಬರುತ್ತಾರೆ. ಪ್ರತಿ ಗೆಟಪ್​ನಲ್ಲೂ ಅವರು ಒಂದೊಂದು ಕಾಲಘಟ್ಟದ ಕಥೆಯನ್ನು ಹೇಳುತ್ತಾರೆ.
  • ತಮ್ಮದೇ ಶೈಲಿಯಲ್ಲಿ ಸಿನಿಮಾ ರೂಪಿಸುವ ಕೆಲಸವನ್ನು ರವಿಚಂದ್ರನ್ ಅವರು ಮಾಡಿದ್ದಾರೆ. ಅವರ ಈ ಹಿಂದಿನ ಚಿತ್ರಗಳಿಗಿಂತ ಇದು ಸಂಪೂರ್ಣವಾಗಿ ಭಿನ್ನ ಸಿನಿಮಾ.
  • ನಿವೃತ್ತ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ರವಿಚಂದ್ರನ್​ ಅವರನ್ನು ಪರಿಚಯಿಸಲಾಗುತ್ತದೆ. ಇದೊಂದೇ ಅಲ್ಲದೆ, ಅವರ ಪಾತ್ರಕ್ಕೆ ಹಲವು ಆಯಾಮಗಳಿವೆ. ಫ್ಲ್ಯಾಶ್​​ಬ್ಯಾಕ್ ಓಪನ್ ಆದಾಗ ಹೊಸಹೊಸ ಕಥೆಗಳು ತೆರೆದುಕೊಳ್ಳುತ್ತವೆ.
  • ರಾಧಿಕಾ ಕುಮಾರಸ್ವಾಮಿ ಹಾಗೂ ಕಾವ್ಯಾ ಶೆಟ್ಟಿ ಅವರ ಜತೆ ರವಿಚಂದ್ರನ್ ಅವರು ತಲಾ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಅವರು ಸಖತ್ ರೊಮ್ಯಾಂಟಿಕ್ ಆಗಿ ಮಿಂಚಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮನರಂಜನೆ ನೀಡಲಿದೆ.
  • ತುಂಬಾ ಚುರುಕಾದ ಪೊಲೀಸ್ ಅಧಿಕಾರಿ ರವಿ ಬೋಪಣ್ಣ. ಆದರೆ, ಆತ ಎಲ್ಲವನ್ನೂ ತ್ಯಜಿಸಿ  ಧೂಮಪಾನ, ಮದ್ಯಪಾನ ಮಾಡುತ್ತಾ ಮನೆಯಲ್ಲಿ ಬಂಧಿಯಾಗಿರುತ್ತಾನೆ. ಅದು ಏಕೆ? ಹೇಗೆ ಎಂಬ ಕುತೂಹಲ ಮೊದಲಾರ್ಧದಲ್ಲಿ ಮೂಡುತ್ತದೆ.
  • ಕಥೆಯನ್ನು ರೂಪಿಸುವ ಜತೆಜತೆಗೆ ತಮ್ಮದೇ ಆದ ಒಂದಷ್ಟು ಫಿಲಾಸಫಿಗಳನ್ನು ಹೇಳೋಕೆ ರವಿಚಂದ್ರನ್ ಪ್ರಯತ್ನಿಸಿದ್ದಾರೆ. ಸಿನಿಮಾದ ದೃಶ್ಯದ ಮಧ್ಯೆ ಮಧ್ಯೆ ಅದು ಬಂದು ಹೋಗುತ್ತದೆ.
  • ಆ್ಯಕ್ಷನ್​ ದೃಶ್ಯಗಳಲ್ಲೂ ಮನರಂಜನೆ ನೀಡಲು ರವಿಚಂದ್ರನ್​ ಅವರು ಪ್ರಯತ್ನಿಸಿದ್ದಾರೆ. ಈ ದೃಶ್ಯಗಳು ಕೂಡ ಅವರದ್ದೇ ಶೈಲಿಯಲ್ಲಿದೆ.
  • ರವಿ ಬೋಪಣ್ಣ ಜೀವನದಲ್ಲಿ ಹಲವು ಜನರು ಬಂದು ಹೋಗಿರುತ್ತಾರೆ. ಅವರಿಗೂ ರವಿ ಬೋಪಣ್ಣ ಅವರಿಗೂ ಇರುವ ಲಿಂಕ್ ಏನು ಎಂಬ ಕುತೂಹಲವನ್ನು ಮೊದಲಾರ್ಧ ಹುಟ್ಟುಹಾಕುತ್ತದೆ.

Published On - 11:04 am, Fri, 12 August 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್