ಹೇಗಿದೆ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾದ ಮೊದಲಾರ್ಧ? ಇಲ್ಲಿದೆ ಮಾಹಿತಿ

| Updated By: ಮದನ್​ ಕುಮಾರ್​

Updated on: May 12, 2022 | 7:26 AM

Sarkaru Vaari Paata Movie: ಗೀತ ಗೋವಿಂದಂ’ ನಿರ್ದೇಶಕ ಪರಶುರಾಮ್ ಅವರು ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ಮಾಹಿತಿ.

ಹೇಗಿದೆ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾದ ಮೊದಲಾರ್ಧ? ಇಲ್ಲಿದೆ ಮಾಹಿತಿ
ಮಹೇಶ್-ಕೀರ್ತಿ
Follow us on

ಮಹೇಶ್ ಬಾಬು (Mahesh Babu) ನಟನೆಯ ‘ಸರಿಲೇರು ನೀಕೆವ್ವರು’ ಸಿನಿಮಾ 2020ರಲ್ಲಿ ತೆರೆಗೆ ಬಂದಿತ್ತು. ಎರಡು ವರ್ಷದ ಬಳಿಕ ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ತೆರೆಗೆ ಬಂದಿದೆ. ಮಹೇಶ್ ಬಾಬು ಅವರ ಭಿನ್ನ ಲುಕ್​​ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಸಾಕಷ್ಟು ಹಿಟ್ ಆಗಿದೆ. ‘ಕಲಾವತಿ..’ ಹಾಡು (Kalaavathi  Song) ಸಿನಿಮಾದ ಜನಪ್ರಿಯತೆಯನ್ನು ಹೆಚ್ಚಿಸಿದೆ. ಮಹೇಶ್ ಬಾಬುಗೆ ಜತೆಯಾಗಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಬ್ಯಾಕ್​ ಟು ಬ್ಯಾಕ್ ಸೋಲು ಅನುಭವಿಸಿರುವ ಅವರಿಗೆ ಈ ಚಿತ್ರ ತುಂಬಾನೇ ಮುಖ್ಯವಾಗಿದೆ. ‘ಗೀತ ಗೋವಿಂದಂ’ ನಿರ್ದೇಶಕ ಪರಶುರಾಮ್ ಅವರು ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಹಾಗಾದರೆ, ಸಿನಿಮಾದ ಮೊದಲಾರ್ಧ ಹೇಗಿದೆ? ಈ ಚಿತ್ರದಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

  1. ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ಮಹೇಶ್​ ಬಾಬು ಅವರು ಡಿಫರೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸ್ಪೆಷಲ್​ ಟ್ರೀಟ್​ ಎನ್ನಬಹುದು.
  2. ‘ಪ್ರಿನ್ಸ್​’ ಮಹೇಶ್​ ಬಾಬು ಅವರ ಎಂಟ್ರಿಯೇ ಫೈಟಿಂಗ್​ ದೃಶ್ಯದಿಂದ ಆಗುತ್ತದೆ. ಈ ಸಾಹಸ ದೃಶ್ಯ ಸಖತ್​ ಮಾಸ್​ ಮೂಡಿ ಬಂದಿದೆ. ಅಭಿಮಾನಿಗಳಿಗೆ ಖುಷಿ ನೀಡುತ್ತದೆ.
  3. ಜನರಿಗೆ ಹೆಚ್ಚು ಇಷ್ಟ ಆಗಿರುವ ‘ಕಲಾವತಿ..’ ಹಾಡು ಚಿತ್ರದ ಫಸ್ಟ್​ ಹಾಫ್​ನಲ್ಲಿಯೇ ಬರುತ್ತದೆ. ಮಹೇಶ್​ ಬಾಬು ಮತ್ತು ಕೀರ್ತಿ ಸುರೇಶ್​ ಕಾಂಬಿನೇಷನ್​ ಚೆನ್ನಾಗಿ ಮೂಡಿಬಂದಿದೆ.
  4. ಮೊದಲಾರ್ಧದ ಕಥೆ ಕಾಮಿಡಿಯಾಗಿ ಸಾಗುತ್ತದೆ. ಆದರೆ ಮಧ್ಯಂತರ ಬರುವ ವೇಳೆಗೆ ಬೇರೆ ರೀತಿಯಾದ ತಿರುವು ಪಡೆದುಕೊಳ್ಳುತ್ತದೆ.
  5. ಇದನ್ನೂ ಓದಿ
    ಬಾಲಿವುಡ್ ಬಗ್ಗೆ ಮಹೇಶ್ ಬಾಬು ಹೇಳಿಕೆ; ಹಿಂದಿಯ ಖ್ಯಾತ ನಿರ್ಮಾಪಕ ಕೊಟ್ರು ಉತ್ತರ
    ಹೊಸ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ ಮಹೇಶ್ ಬಾಬು; ಶೂಟಿಂಗ್ ಯಾವಾಗ?
    ಮಸ್ತ್​ ಮನರಂಜನೆ ನೀಡಲಿದ್ದಾರೆ ಮಹೇಶ್​ ಬಾಬು-ಕೀರ್ತಿ ಸುರೇಶ್​; ಈ ಫೋಟೋದಲ್ಲಿದೆ ಝಲಕ್​
    ‘ಸರ್ಕಾರು ವಾರಿ ಪಾಟ’ ಟ್ರೇಲರ್​ನಲ್ಲಿ ಆ್ಯಕ್ಷನ್ ಮೂಲಕ ಮಿಂಚಿದ ಮಹೇಶ್ ಬಾಬು; ಚಿತ್ರದ ಕಥೆ ಏನು?
  6. ಫಸ್ಟ್​ ಹಾಫ್​ ಮುಗಿಯುವಾಗ ನಿರ್ದೇಶಕರು ಒಂದು ಸಖತ್​ ಟ್ವಿಸ್ಟ್ ನೀಡಿದ್ದಾರೆ. ಅದೇನು ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು. ದ್ವಿತೀಯಾರ್ಧದ ಮೇಲೆ ನಿರೀಕ್ಷೆ ಮೂಡುವಂತೆ ಈ ಟ್ವಸ್ಟ್​ ನೀಡಲಾಗಿದೆ.
  7. ಹೀರೋ-ಹೀರೋಯಿನ್​ ನಡುವಿನ ಕಹಾನಿ ಕೂಡ ಭಿನ್ನವಾಗಿದೆ. ಇದು ಮಾಮೂಲಿ ಲವ್​ ಸ್ಟೋರಿ ರೀತಿ ಇಲ್ಲ. ಇದು ಕೀರ್ತಿ ಸುರೇಶ್​ ಮತ್ತು ಮಹೇಶ್​ ಬಾಬು ಫ್ಯಾನ್ಸ್​ಗೆ ಇಷ್ಟವಾಗಲಿದೆ.
  8. ಕಾಮಿಡಿ ನಟ ಕಿಶೋರ್​ ಅವರು ಮೊದಲಾರ್ಧದಲ್ಲಿ ಹೆಚ್ಚು ಹೈಲೈಟ್​ ಆಗಿದ್ದಾರೆ. ಪ್ರೇಕ್ಷಕರನ್ನು ನಗಿಸುವಲ್ಲಿ ಅವರು ಯಶಸ್ವಿ ಆಗಿದ್ದಾರೆ.
  9. ಫಸ್ಟ್​ ಹಾಫ್​ ಅಂತ್ಯದಲ್ಲಿ ವಿಲನ್​ ಎಂಟ್ರಿ ಆಗಿದೆ. ಆ ಮೂಲಕ ಸೆಕೆಂಡ್​ ಹಾಫ್​ನಲ್ಲಿ ಕಥೆ ಬೇರೆ ತಿರುವು ಪಡೆದುಕೊಳ್ಳುವ ಸೂಚನೆ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.