ಈ ಮೇಲಿನ ಫೋಟೋದಲ್ಲಿರೋ ಹೀರೋಯಿನ್ ಯಾರು ಊಹಿಸಿ; ಈಗ ಸ್ಟಾರ್ ನಾಯಕಿ

ಮೇಲಿನ ಫೋಟೋದಲ್ಲಿರುವ ಹುಡುಗಿ ನಿಮಗೆ ಗೊತ್ತಾ? ಇವರು ಟಾಲಿವುಡ್‌ನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಒಂದೇ ಒಂದು ಸಿನಿಮಾದಿಂದ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಎಲ್ಲರನ್ನೂ ತಮ್ಮ ಕಡೆಗೆ ತಿರುಗುವಂತೆ ಮಾಡಿದ್ದಾರೆ.

ಈ ಮೇಲಿನ ಫೋಟೋದಲ್ಲಿರೋ ಹೀರೋಯಿನ್ ಯಾರು ಊಹಿಸಿ; ಈಗ ಸ್ಟಾರ್ ನಾಯಕಿ
ಮೃಣಾಲ್ ಠಾಕೂರ್
Follow us
ರಾಜೇಶ್ ದುಗ್ಗುಮನೆ
|

Updated on:Aug 12, 2023 | 7:43 AM

ಮೇಲಿನ ಫೋಟೋದಲ್ಲಿರುವ ಹುಡುಗಿ ನಿಮಗೆ ಗೊತ್ತಾ? ಇವರು ಟಾಲಿವುಡ್‌ನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಒಂದೇ ಒಂದು ಸಿನಿಮಾದಿಂದ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಎಲ್ಲರನ್ನೂ ತಮ್ಮ ಕಡೆಗೆ ತಿರುಗುವಂತೆ ಮಾಡಿದ್ದಾರೆ. ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಒಂದೇ ಒಂದು ತೆಲುಗು ಚಿತ್ರದಿಂದ ಭರ್ಜರಿ ಜನಪ್ರಿಯತೆ ಸಿಕ್ಕಿತು. ಈಗ ಈ ನಟಿ ಬಾಲಿವುಡ್ (Bollywood News) ಹಾಗೂ ಟಾಲಿವುಡ್​​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಈ ನಟಿ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಲವು ಪ್ರಯೋಗಾತ್ಮಕ ಚಿತ್ರಗಳಲ್ಲೂ ಅಭಿನಯಿಸಿದ್ದರು. ಅವರು ಬೇರಾರೂ ಅಲ್ಲ ‘ಸೀತಾ ರಾಮಂ’ ಸಿನಿಮಾದ (Seetha Ramam Movie) ಪ್ರಿನ್ಸಸ್ ನೂರ್​ಜಹಾನ್ ಅಲಿಯಾಸ್ ಮೃಣಾಲ್ ಠಾಕೂರ್.

ಮೃಣಾಲ್ ಅವರು ವೃತ್ತಿಜೀವನದ ಆರಂಭದಲ್ಲಿ ‘ಲವ್ ಸೋನಿಯಾ’ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಹೆಣ್ಣುಮಕ್ಕಳ ಕಳ್ಳಸಾಗಾಣಿಕೆಯ ಕುರಿತು ಈ ಚಿತ್ರ ಇದೆ. 2018ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಮೃಣಾಲ್ ಅವರು ಸೋನಿಯಾ ಹೆಸರಿನ ಪಾತ್ರ ಮಾಡಿದ್ದರು. ಈ ಮೇಲಿನ ಫೋಟೋ ಅದೇ ಸಿನಿಮಾದ್ದು.

ಮೃಣಾಲ್ ಠಾಕೂರ್ ಅವರು 2014ರಲ್ಲಿ ರಿಲೀಸ್ ಆದ ಮರಾಠಿ ಚಿತ್ರ ‘ವಿಟ್ಟಿ ದಂಡು’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಲವ್ ಸೋನಿಯಾ’ ಅವರ ನಟನೆಯ ಮೊದಲ ಹಿಂದಿ ಚಿತ್ರ. ‘ಸೂಪರ್ 30’, ‘ಬಾಟ್ಲಾ ಹೌಸ್’, ‘ಜರ್ಸಿ’ ಮೊದಲಾದ ಹಿಂದಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ಸೀತಾ ರಾಮಂ’ ಅವರು ನಟಿಸಿದ ಮೊದಲ ತೆಲುಗು ಚಿತ್ರ. ಇತ್ತೀಚೆಗೆ ರಿಲೀಸ್ ಆದ ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲೂ ಅವರು ನಟಿಸಿದ್ದಾರೆ.

ಇದನ್ನೂ ಓದಿ: Mrunal Thakur: ‘ಪ್ರೀತಿಯೋ, ಕಾಮವೋ?’; ಜಾಣತನದ ಉತ್ತರ ಕೊಟ್ಟ ನಟಿ ಮೃಣಾಲ್ ಠಾಕೂರ್

‘ಲವ್ ಸೋನಿಯಾ’ ಚಿತ್ರದಲ್ಲಿ ಮೃಣಾಲ್ ಅವರು ಡಿಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ‘ಸೀತಾ ರಾಮಂ’ ಸಿನಿಮಾದಲ್ಲಿ ಅವರು ಸಖತ್ ಗ್ಲಾಮರ್ ಅವತಾರ ತಾಳಿದ್ದರು. ವಿಜಯ್ ದೇವರಕೊಂಡ ಜೊತೆ ಮೃಣಾಲ್ ಸಿನಿಮಾ ಮಾಡುತ್ತಿದ್ದಾರೆ. ‘ಗೀತಾ ಗೋವಿಂದಂ’ ಮತ್ತು ‘ಸರ್ಕಾರು ವಾರಿ ಪಾಟ’ ಚಿತ್ರಗಳ ಮೂಲಕ ಜನಮನ್ನಣೆ ಪಡೆದ ಪರಶುರಾಮ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Sat, 12 August 23

ಕಾಶಿ ಕ್ಷೇತ್ರಕ್ಕೆ ಹೋದಾಗ ಏನನ್ನು ಬಿಟ್ಟು ಬಂದರೆ ಒಳ್ಳೆಯದು?
ಕಾಶಿ ಕ್ಷೇತ್ರಕ್ಕೆ ಹೋದಾಗ ಏನನ್ನು ಬಿಟ್ಟು ಬಂದರೆ ಒಳ್ಳೆಯದು?
ಹೊಸ ವರ್ಷದ ಎರಡನೇ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಹೊಸ ವರ್ಷದ ಎರಡನೇ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್