LGM Movie: ಧೋನಿ ನಿರ್ಮಾಣದ ‘ಎಲ್​ಜಿಎಂ​’ ಫಸ್ಟ್​ ಲುಕ್​ ಬಿಡುಗಡೆ; ಫ್ಯಾಮಿಲಿ ಪ್ರೇಕ್ಷಕರೇ ಟಾರ್ಗೆಟ್​

|

Updated on: Apr 11, 2023 | 12:13 PM

LGM Movie First Look: ‘ಎಲ್​ಜಿಎಂ​’ ಸಿನಿಮಾಗೆ ರಮೇಶ್ ತಮಿಳ್ಮಣಿ ನಿರ್ದೇಶನ ಮಾಡುತ್ತಿದ್ದಾರೆ. ಫಸ್ಟ್​ ಲುಕ್​ ಬಿಡುಗಡೆ ಮಾಡಿರುವ ಧೋನಿ ಅವರು ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

LGM Movie: ಧೋನಿ ನಿರ್ಮಾಣದ ‘ಎಲ್​ಜಿಎಂ​’ ಫಸ್ಟ್​ ಲುಕ್​ ಬಿಡುಗಡೆ; ಫ್ಯಾಮಿಲಿ ಪ್ರೇಕ್ಷಕರೇ ಟಾರ್ಗೆಟ್​
ಎಲ್​ಜಿಎಂ ಫಸ್ಟ್​ ಲುಕ್
Follow us on

ಒಂದೆಡೆ ಎಂಎಸ್​ ಧೋನಿ (MS Dhoni) ಅವರು ಐಪಿಎಲ್​ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಇನ್ನೊಂದೆಡೆ ಅವರು ಸಿನಿಮಾ ಕ್ಷೇತ್ರದಲ್ಲೂ ಸದ್ದು ಮಾಡುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ‘ಎಲ್​ಜಿಎಂ​’. ‘ಲೆಟ್ಸ್​ ಗೆಟ್​ ಮ್ಯಾರೀಡ್​’ (Let’s Get Married) ಎಂಬುದು ಈ ಶೀರ್ಷಿಕೆಯ ವಿಸ್ತೃತ ರೂಪ. ಈ ಚಿತ್ರದ ಫಸ್ಟ್ ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ‘ಎಲ್​ಜಿಎಂ​’ ಸಿನಿಮಾದ (LGM Movie) ಮೂಲಕ ಫ್ಯಾಮಿಲಿ ಪ್ರೇಕ್ಷಕರನ್ನು ಎಂ.ಎಸ್​. ಧೋನಿ ಟಾರ್ಗೆಟ್​ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಹಂಚಿಕೊಂಡಿರುವ ಅವರು ಇಡೀ ತಂಡಕ್ಕೆ ವಿಶ್​ ಮಾಡಿದ್ದಾರೆ. ‘ಎಲ್​ಜಿಎಂ ಸಿನಿಮಾದ ಫಸ್ಟ್​ಲುಕ್​ ಬಿಡುಗಡೆ ಮಾಡಲು ಸಂತಸ ಆಗುತ್ತಿದೆ. ನಿಮ್ಮ ಮುಖದಲ್ಲಿ ನಗು ಮೂಡಿಸುವ ಫ್ಯಾಮಿಲಿ ಎಂಟರ್​ಟೇನರ್​ ಸಿನಿಮಾಗಾಗಿ ಸಿದ್ಧರಾಗಿ. ಇಡೀ ತಂಡಕ್ಕೆ ಆಲ್​ ದ ಬೆಸ್ಟ್​’ ಎಂದು ಎಂಎಸ್​ ಧೋನಿ ಪೋಸ್ಟ್​ ಮಾಡಿದ್ದಾರೆ.

‘ಎಲ್​ಜಿಎಂ​’ ಸಿನಿಮಾ ತಮಿಳಿನಲ್ಲಿ ಮೂಡಿಬರುತ್ತಿದೆ. ಚೈನ್ನೈ ಸೂಪರ್​ ಕಿಂಗ್ಸ್​ ಟೀಮ್​ನ ನಾಯಕತ್ವ ವಹಿಸುವ ಮೂಲಕ ತಮಿಳುನಾಡಿನ ಅಭಿಮಾನಿಗಳ ಜೊತೆ ಧೋನಿ ವಿಶೇಷ ನಂಟು ಬೆಳೆಸಿಕೊಂಡಿದ್ದಾರೆ. ಹಾಗಾಗಿ ಅವರ ಪ್ರೊಡಕ್ಷನ್​ ಹೌಸ್​ ಮೂಲಕ ತಮಿಳು ಚಿತ್ರವನ್ನು ಅವರು ಮೊದಲು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹರೀಶ್​ ಕಲ್ಯಾಣ್​, ನದಿಯಾ, ಇವಾನಾ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ.

IPL 2023: ಶತಕ ಬಾರಿಸು ಎಂದ ಧೋನಿ ಫ್ಯಾನ್​ಗೆ ಕೊಹ್ಲಿ ಪಾಠ ಕಲಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ

ವಿಕಾಸ್ ಹಸಿಜಾ ಅವರು ‘ಎಲ್​ಜಿಎಂ​’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಫಸ್ಟ್​ ಲುಕ್​ ಬಿಡುಗಡೆ ಸಂದರ್ಭದಲ್ಲಿ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ‘ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಶೀಘ್ರದಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ಈ ಸಿನಿಮಾ ಮೂಲಕ ತಮಿಳು ಚಿತ್ರೋದ್ಯಮದಲ್ಲಿ ನಮ್ಮ ಪಯಣ ಆರಂಭವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಎಲ್​ಜಿಎಂ​’ ಸಿನಿಮಾಗೆ ರಮೇಶ್ ತಮಿಳ್ಮಣಿ ನಿರ್ದೇಶನ ಮಾಡುತ್ತಿದ್ದಾರೆ. ಹರೀಶ್ ಕಲ್ಯಾಣ್, ನದಿಯಾ, ಇವಾನಾ ಜೊತೆಗೆ ಯೋಗಿ ಬಾಬು, ಮಿರ್ಚಿ ವಿಜಯ್ ಮುಂತಾದವರು ನಟಿಸುತ್ತಿದ್ದಾರೆ. ರಮೇಶ್ ತಮಿಳ್ಮಣಿ ಅವರು ಆ್ಯಕ್ಷನ್​-ಕಟ್​ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ‘ಇದು ಹೊಸ ಪರಿಕಲ್ಪನೆಯ ಚಿತ್ರ. ಅನೇಕ ಸ್ವಾರಸ್ಯಕರ ಅಂಶಗಳು ಇದರಲ್ಲಿವೆ. ಪ್ರತಿಭಾನ್ವಿತ ಚಿತ್ರತಂಡ ಹಾಗೂ ತಾಂತ್ರಿಕ ಬಳಗ ಈ ಚಿತ್ರದಲ್ಲಿದೆ’ ಎಂದು ಸಿನಿಮಾ ಕ್ರಿಯೇಟಿವ್ ಹೆಡ್ ಪ್ರಿಯಾಂಶು ಚೋಪ್ರಾ ಹೇಳಿದ್ದಾರೆ.

‘ಧೋನಿ ಎಂಟರ್​ಟೇನ್ಮೆಂಟ್​’ ಸಂಸ್ಥೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ದಳಪತಿ ವಿಜಯ್​ ಮತ್ತು ಧೋನಿ ಅವರು ಒಂದು ಸಿನಿಮಾಗಾಗಿ ಕೈ ಜೋಡಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. ಆದರೆ ಆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:13 pm, Tue, 11 April 23