ಮುದ್ದುಲಕ್ಷ್ಮೀ ಧಾರಾವಾಹಿಗೆ ಗುಡ್​ಬೈ ಹೇಳಿದ ನಟ ಚರಿತ್​ ಬಾಳಪ್ಪ

ಮಂಗಳೂರು ಮೂಲದವರಾದ ಚರಿತ್​ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದರು. ನಟನೆಯ ತುಡಿತ ಹೆಚ್ಚಿದ್ದರಿಂದ ಕೆಲಸವನ್ನು ತೊರೆದು ಅವರು ಬಣ್ಣದ ಲೋಕಕ್ಕೆ ಬಂದರು.

ಮುದ್ದುಲಕ್ಷ್ಮೀ ಧಾರಾವಾಹಿಗೆ ಗುಡ್​ಬೈ ಹೇಳಿದ ನಟ ಚರಿತ್​ ಬಾಳಪ್ಪ
ಮುದ್ದುಲಕ್ಷ್ಮೀ ಧಾರಾವಾಹಿ
Follow us
ರಾಜೇಶ್ ದುಗ್ಗುಮನೆ
|

Updated on: May 01, 2021 | 5:38 PM

ಮುದ್ದುಲಕ್ಷ್ಮೀ ಧಾರಾವಾಹಿ ಕಡೆಯಿಂದ ಕಹಿಸುದ್ದಿಯೊಂದು ಹೊರಬಿದ್ದಿದೆ. ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದ ನಟ ಚರಿತ್ ಬಾಳಪ್ಪ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇದಕ್ಕೆ ಅವರು ಕೊವಿಡ್​ ಕಾರಣ ನೀಡಿದ್ದಾರೆ. ಇತ್ತೀಚೆಗೆ ಈ ಧಾರಾವಾಹಿ 1000 ಕಂತುಗಳನ್ನು ಪೂರೈಸಿತ್ತು. ಹೀಗಿರುವಾಗಲೇ ಅವರು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಕೊರೊನಾದಿಂದ ಪರಿಸ್ಥಿತಿ ತುಂಬಾನೇ ಕೆಟ್ಟದಾಗುತ್ತಿದೆ. ಹೀಗಾಗಿ ನಾನು ಮುದ್ದುಲಕ್ಷ್ಮೀ ಧಾರಾವಾಹಿಯಿಂದ ಹೊರ ಬರುತ್ತಿದ್ದೇನೆ. ಜಗತ್ತು ಮತ್ತೆ ಮೊದಲಿನಂತಾಗಲಿ. ನನಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಎಂದು ಚರಿತ್​ ಫೇಸ್​ಬುಕ್​ನಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದಾರೆ.

ಮಂಗಳೂರು ಮೂಲದವರಾದ ಚರಿತ್​ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದರು. ನಟನೆಯ ತುಡಿತ ಹೆಚ್ಚಿದ್ದರಿಂದ ಕೆಲಸವನ್ನು ತೊರೆದು ಅವರು ಬಣ್ಣದ ಲೋಕಕ್ಕೆ ಬಂದರು. ಮುದ್ದುಲಕ್ಷ್ಮೀ ಧಾರಾವಾಹಿಗೂ ಮೊದಲು ಅವರು ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು.

ಚರಿತ್ ಮುದ್ದುಲಕ್ಷ್ಮೀ ಧಾರಾವಾಹಿಯಲ್ಲಿ ನಾಯಕ ಧ್ರುವಂತ್ ಪಾತ್ರಕ್ಕೆ ಜೀವ ತುಂಬಿದ್ದರು​. ಧ್ರುವಂತ್ ವೃತ್ತಿಯಲ್ಲಿ ವೈದ್ಯ. ಆತ ಸೌಂದರ್ಯವತಿ ಅಲ್ಲದ ಹೆಣ್ಣನ್ನು ಪ್ರೀತಿಸಿ ಮದುವೆ ಆಗುತ್ತಾನೆ. ನಂತರ ಅವರ ಜೀವನದಲ್ಲಿ ಏನೆಲ್ಲ ಆಗುತ್ತದೆ ಎಂಬುದು ಈ ಧಾರಾವಾಹಿಯ ಕಥೆ. ಹೀರೋ ಪಾತ್ರಕ್ಕೆ ನೆಗೆಟಿವ್​ ಶೇಡ್​ ಇತ್ತು. ಈ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.

ಕೊರೊನಾ ವೈರಸ್​ ದೇಶದಲ್ಲಿ ಮಿತಿಮೀರಿ ಹೆಚ್ಚುತ್ತಿದೆ. ಇಂದು ಒಂದೇ ದಿನ 4 ಲಕ್ಷ ಕೇಸ್​ಗಳು ಭಾರತದಲ್ಲಿ ವರದಿಯಾಗಿದೆ. ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ಶೂಟಿಂಗ್​ ನಿಲ್ಲಿಸಲಾಗಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅವರು ಧಾರಾವಾಹಿಯಿಂದ ಹೊರ ಬಂದಿರುವುದು ಅನೇಕರು ಸರಿ ಎಂದು ಹೇಳಿಕೊಂಡಿದ್ದಾರೆ.  

ಇದನ್ನೂ ಓದಿ: ಹೊಸ ಮೈಲಿಗಲ್ಲು ಸೃಷ್ಟಿಸಿದ ಅನಿರುದ್ಧ-ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿ

ಬೀದಿಗೆ ಬಂತು ಶ್ರೀಕೃಷ್ಣ ಧಾರಾವಾಹಿ ನಟನ ಬದುಕು; ಕಣ್ಣೀರಿಟ್ಟ ಸುನಿಲ್​ ನಗರ್​

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್