‘ಶಕ್ತಿಮಾನ್’ (Shaktiman) ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದ ಶೋ. ಈಗ ‘ಶಕ್ತಿಮಾನ್’ ಸಿನಿಮಾ ಆಗುತ್ತಿದೆ. ‘ಶಕ್ತಿಮಾನ್’ ಧಾರಾವಾಹಿಯಲ್ಲಿ ನಟಿಸಿದ್ದ ಮುಖೇಶ್ ಖನ್ನಾ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಲ್ಲಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಅವರು ‘ಶಕ್ತಿಮಾನ್’ ಚಿತ್ರದ ಬಗ್ಗೆ ಹೊಸ ಹೇಳಿಕೆಗಳನ್ನು ನೀಡುತ್ತಿದ್ದಾರೆ. ‘ಶಕ್ತಿಮಾನ್’ ಮುಖೇಶ್ ಖನ್ನಾ ಅವರ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಹೀಗಾಗಿ ‘ಶಕ್ತಿಮಾನ್’ ಪಾತ್ರವನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂಬುದು ಅವರ ನಂಬಿಕೆ.
ಈ ಮೊದಲು ವಿಡಿಯೋ ಹಂಚಿಕೊಂಡಿದ್ದ ಮುಖೇಶ್ ಖನ್ನಾ ಅವರು ರಣವೀರ್ ಸಿಂಗ್ ‘ಶಕ್ತಿಮಾನ್’ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದಲ್ಲದೆ, ಅವರು ನಟನ ವ್ಯಕ್ತಿತ್ವದ ಬಗ್ಗೆಯೂ ಕಿಡಿಕಾರಿದ್ದರು. ಇದಕ್ಕೆ ರಣವೀರ್ ಸಿಂಗ್ ಫ್ಯಾನ್ಸ್ ಸಿಟ್ಟಾಗಿದ್ದರು. ಈಗ ಆ ವಿಡಿಯೋಗೆ ಸ್ಪಷ್ಟನೆ ಕೊಟ್ಟು ಮುಕೇಶ್ ಖನ್ನಾ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ವೀಡಿಯೋದಲ್ಲಿ, ಮುಖೇಶ್ ಖನ್ನಾ ಮತ್ತೊಮ್ಮೆ ‘ಶಕ್ತಿಮಾನ್’ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಸಾರ್ವಜನಿಕರ ಅಭಿಪ್ರಾಯವನ್ನೂ ಕೇಳಿದ್ದಾರೆ.
‘ನಾನು ನನ್ನ ಅಭಿಪ್ರಾಯದೊಂದಿಗೆ ಬಂದು ಯಾರೂ ಶಕ್ತಿಮಾನ್ ಆಗುವುದಿಲ್ಲ ಎಂದು ಹೇಳಿದ್ದೆ. ನನ್ನ ಅಭಿಪ್ರಾಯವನ್ನು ಆ ರೀತಿಯಲ್ಲಿ ನೀಡಲು ನಾನು ಬಯಸಿರಲಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ತರುತ್ತದೆ ಎಂದು ನಾನು ಭಾವಿಸಿದ್ದೆ. ಆ ವ್ಯಕ್ತಿಯಂತೂ ಶಕ್ತಿಮಾನ್ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಆದರೆ ನಾನು ನಿಮ್ಮ ಅಭಿಪ್ರಾಯವನ್ನು ನಿಮ್ಮಿಂದ ತಿಳಿದುಕೊಳ್ಳಲು ಬಯಸುತ್ತೇನೆ. ನಿಮ್ಮ ಪ್ರಕಾರ ಯಾರು ಶಕ್ತಿಮಾನ್ ಆಗಬೇಕು?’ ಎಂದು ಕೇಳಿದ್ದಾರೆ ಅವರು.
ಇದನ್ನೂ ಓದಿ: ‘ಬೆತ್ತಲೆಯಾದ ನಟ ಶಕ್ತಿಮಾನ್ ಆಗೋದು ಬೇಡ’: ಖಡಕ್ ಆಗಿ ಹೇಳಿದ ಮುಖೇಶ್ ಖನ್ನಾ
‘ಶಕ್ತಿಮಾನ್ ಚಿತ್ರದ ಕಾಸ್ಟಿಂಗ್ ಬಗ್ಗೆ ಮುಖೇಶ್ ಖನ್ನಾ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಹಳೆಯ ವೀಡಿಯೊದಲ್ಲಿ ಈ ಬಗ್ಗೆ ಮಾತನಾಡಿದ್ದರು. ‘ಶಕ್ತಿಮಾನ್ ಚಿತ್ರಕ್ಕೆ ರಣವೀರ್ ಸಿಂಗ್ ಅವರ ಹೆಸರು ಕೇಳಿ ಬಂದಿದೆ ಎಂಬ ವದಂತಿಗಳು ಬರುತ್ತಿವೆ. ಶಾರುಖ್ ಖಾನ್ ಮತ್ತು ಇತರ ನಟರ ಹೆಸರುಗಳು ಸಹ ಹೊರಬರುತ್ತಿವೆ. ಶಾರುಖ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಮತ್ತು ಟೈಗರ್ ಶ್ರಾಫ್ ಅವರ ಹೆಸರನ್ನು ತೆಗೆದುಕೊಂಡ ಮುಖೇಶ್ ಖನ್ನಾ ಇವರಲ್ಲಿ ಯಾರೂ ಶಕ್ತಿಮಾನ್ ಆಗಲು ಸಾಧ್ಯವಿಲ್ಲ. ಶಕ್ತಿಮಾನ್ ಮಕ್ಕಳಿಗೆ ಕಲಿಸುವವರಾಗಿರಬೇಕು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.