‘ಬೆತ್ತಲೆಯಾದ ನಟ ಶಕ್ತಿಮಾನ್​ ಆಗೋದು ಬೇಡ’: ಖಡಕ್​ ಆಗಿ ಹೇಳಿದ ಮುಖೇಶ್​ ಖನ್ನಾ

ದೊಡ್ಡ ಬಜೆಟ್​ನಲ್ಲಿ ‘ಶಕ್ತಿಮಾನ್​’ ಸಿನಿಮಾ ಸಿದ್ಧವಾಗಲಿದೆ. ಆ ಸಿನಿಮಾದಲ್ಲಿ ಯಾರು ಶಕ್ತಿಮಾನ್​ ಪಾತ್ರ ಮಾಡುತ್ತಾರೆ ಎಂಬ ಬಗ್ಗೆ ಗಾಸಿಪ್ ಹಬ್ಬಿದೆ. ರಣವೀರ್​ ಸಿಂಗ್​ ಆಯ್ಕೆ ಆಗಿದ್ದಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಆದರೆ ಆ ಸುದ್ದಿಯನ್ನು ಮುಖೇಶ್​ ಖನ್ನಾ ತಳ್ಳಿ ಹಾಕಿದ್ದಾರೆ. ತಾವು ಆ ನಟನನ್ನು ಆಯ್ಕೆ ಮಾಡಿಲ್ಲ ಎಂದು ಮುಖೇಶ್​ ಖನ್ನಾ ತಿಳಿಸಿದ್ದಾರೆ.

‘ಬೆತ್ತಲೆಯಾದ ನಟ ಶಕ್ತಿಮಾನ್​ ಆಗೋದು ಬೇಡ’: ಖಡಕ್​ ಆಗಿ ಹೇಳಿದ ಮುಖೇಶ್​ ಖನ್ನಾ
ರಣವೀರ್​ ಸಿಂಗ್​, ಮುಖೇಶ್​ ಖನ್ನಾ
Follow us
ಮದನ್​ ಕುಮಾರ್​
|

Updated on: Mar 18, 2024 | 3:38 PM

ಭಾರತೀಯ ಕಿರುತೆರೆಯಲ್ಲಿ ‘ಶಕ್ತಿಮಾನ್​’ (Shaktimaan) ಪಾತ್ರವನ್ನು ಮಾಡುವ ಮೂಲಕ ಜನಮನ ಗೆದ್ದ ಮುಖೇಶ್​ ಖನ್ನಾ (Mukesh Khanna) ಅವರು ಈಗ ಅದೇ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಸಿನಿಮಾದಲ್ಲಿ ಯಾರು ಶಕ್ತಿಮಾನ್​ ಪಾತ್ರ ಮಾಡುತ್ತಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಅಷ್ಟರಲ್ಲಾಗಲೇ ಕೆಲವು ಮಾಧ್ಯಮಗಳು ರಣವೀರ್​ ಸಿಂಗ್​ ಹೆಸರನ್ನು ಎಳೆದುತಂದಿವೆ. ಆದರೆ ಆ ಸುದ್ದಿ ಸುಳ್ಳು ಎಂದು ಮುಖೇಶ್​ ಖನ್ನಾ ಸ್ಪಷ್ಟಪಡಿಸಿದ್ದಾರೆ. ತಾವು ಶಕ್ತಿಮಾನ್​ ಪಾತ್ರಕ್ಕೆ ರಣವೀರ್​ ಸಿಂಗ್​ (Ranveer Singh) ಅವರನ್ನು ಆಯ್ಕೆ ಮಾಡಿಲ್ಲ ಎಂದು ಮುಖೇಶ್​ ಖನ್ನಾ ಹೇಳಿದ್ದಾರೆ.

‘ಶಕ್ತಿಮಾನ್​ ಪಾತ್ರವನ್ನು ರಣವೀರ್​ ಸಿಂಗ್​ ಮಾಡುತ್ತಾರೆ ಎಂಬ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಇತ್ತು. ಎಲ್ಲರೂ ಅದರಿಂದ ಕೋಪಗೊಂಡಿದ್ದರು. ನಾನು ಮೌನವಾಗಿದ್ದೆ. ಆದರೆ ಈ ಸಿನಿಮಾಗೆ ರಣವೀರ್​ ಸಿಂಗ್​ ಸಹಿ ಮಾಡಿದ್ದಾರೆ ಎಂದು ಟಿವಿ ವಾಹಿನಿಗಳು ಕೂಡ ಸುದ್ದಿ ಪ್ರಸಾರ ಮಾಡಲು ಶುರುಮಾಡಿದವು. ಆಗ ನಾನು ಮಾತನಾಡಬೇಕಾಯಿತು. ರಣವೀರ್​ ಸಿಂಗ್​ ಎಷ್ಟೇ ದೊಡ್ಡ ಸ್ಟಾರ್​ ಆಗಿರಬಹುದು. ಆದರೆ ಇಂಥ ಇಮೇಜ್​ ಇರುವ ವ್ಯಕ್ತಿ ಶಕ್ತಿಮಾನ್​ ಆಗಲಾರ. ಮುಂದೇನಾಗುತ್ತೋ ನೋಡೋಣ’ ಎಂದಿದ್ದಾರೆ ಮುಖೇಶ್​ ಖನ್ನಾ.

ಇದನ್ನೂ ಓದಿ: ‘ಶಕ್ತಿಮಾನ್​’ ಸಿನಿಮಾ ಬಜೆಟ್​ 300 ಕೋಟಿ ರೂಪಾಯಿ; ಕೆಲಸ ತಡ ಆಗಿದ್ದಕ್ಕೆ ಕಾರಣ ತಿಳಿಸಿದ ಮುಕೇಶ್​ ಖನ್ನಾ

ರಣವೀರ್​ ಸಿಂಗ್​ ಬೇಡವೇ ಬೇಡ ಎಂದು ಮುಖೇಶ್​ ಖನ್ನಾ ಅವರು ಹಠ ಹಿಡಿಯಲು ಕಾರಣ ಕೂಡ ಇದೆ. ಈ ಹಿಂದೆ ರಣವೀರ್​ ಸಿಂಗ್​ ಅವರು ಬೆತ್ತಲೆ ಫೋಟೋಶೂಟ್​ ಮಾಡಿಸಿದ್ದರು. ಅದನ್ನು ಮುಖೇಶ್​ ಖನ್ನಾ ಖಂಡಿಸಿದ್ದಾರೆ. ಈ ರೀತಿ ಬೆತ್ತಲೆಯಾಗಿ ನಟಿಸುವುದು ಭಾರತದ ಸಂಸ್ಕೃತಿ ಅಲ್ಲ ಎಂದು ಅವರು ಛಾಟಿ ಬೀಸಿದ್ದಾರೆ. ‘ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಅವರಿಗೆ ಸರಿ ಎನಿಸಿದರೆ ಅಂತಹ ದೇಶಕ್ಕೆ ಹೋಗಲಿ. ಅಲ್ಲಿ ಪ್ರತಿ ಮೂರನೇ ಒಂದು ದೃಶ್ಯದಲ್ಲಿ ಬೆತ್ತಲೆಯಾಗಿ ನಟಿಸಬಹುದು’ ಎಂದು ಮುಖೇಶ್​ ಖನ್ನಾ ಹೇಳಿದ್ದಾರೆ.

ಮುಖೇಶ್​ ಖನ್ನಾ ಇನ್​ಸ್ಟಾಗ್ರಾಮ್​ ಪೋಸ್ಟ್​:

‘ನಿಮ್ಮ ಪೈಪೋಟಿ ಇರುವುದು ಸೂಪರ್​ ಮ್ಯಾನ್​, ಸ್ಪೈಡರ್​ ಮ್ಯಾನ್​ ವಿರುದ್ಧ ಅಲ್ಲ ಎಂದು ನಾನು ನಿರ್ಮಾಪಕರಿಗೆ ಹೇಳಿದ್ದೇನೆ. ಶಕ್ತಿಮಾನ್​ ಎಂದರೆ ಕೇವಲ ಸೂಪರ್​ ಹೀರೋ ಮಾತ್ರ ಅಲ್ಲ. ಅವನು ಸೂಪರ್​ ಟೀಚರ್​ ಕೂಡ ಹೌದು. ಆ ಪಾತ್ರವನ್ನು ಮಾಡುವ ನಟನಿಗೆ ಅಂಥ ಗುಣ ಇರಬೇಕು. ಅವನು ಹೇಳಿದರೆ ಜನರು ಕೇಳುವಂತಿರಬೇಕು. ದೊಡ್ಡ ಸ್ಟಾರ್​ಗಳು ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರ ಇಮೇಜ್​ ಅಡ್ಡ ಬರುತ್ತದೆ’ ಎಂಬುದು ಮುಖೇಶ್​ ಖನ್ನಾ ಅವರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್