47ನೇ ವಯಸ್ಸಿನಲ್ಲಿ ಹೀರೋ ಆದ ಸಂಗೀತ ನಿರ್ದೇಶಕ ಡಿಎಸ್​​ಪಿ

Yellamma movie: 27 ವರ್ಷಗಳಿಂದಲೂ ತೆಲುಗು ಮಾತ್ರವೇ ಅಲ್ಲದೆ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ಸಂಗೀತ ನೀಡುತ್ತಲೇ ಬರುತ್ತಿದ್ದಾರೆ. 2023ರ ‘ಪುಷ್ಪ’ ಸಿನಿಮಾದ ವರೆಗೆ ಹಲವಾರು ಬ್ಲಾಕ್ ಬಸ್ಟರ್ ಆಲ್ಬಂಗಳನ್ನು ದೇವಿಶ್ರೀ ಪ್ರಸಾದ್ ನೀಡಿದ್ದಾರೆ. ಚಿತ್ರರಂಗಕ್ಕೆ ಬಂದು 27 ವರ್ಷಗಳ ಬಳಿಕ ಈಗ ಇದ್ದಕ್ಕಿದ್ದಂತೆ ಸಿನಿಮಾ ನಾಯಕ ಆಗಿದ್ದಾರೆ ದೇವಿಶ್ರೀ ಪ್ರಸಾದ್.

47ನೇ ವಯಸ್ಸಿನಲ್ಲಿ ಹೀರೋ ಆದ ಸಂಗೀತ ನಿರ್ದೇಶಕ ಡಿಎಸ್​​ಪಿ
Devi Sri Prasad

Updated on: Aug 02, 2026 | 10:53 PM

ತೆಲುಗು ಚಿತ್ರರಂಗದಲ್ಲಿ (Tollywood) ಪ್ರೀತಿಯಿಂದ ‘ಡಿಎಸ್​​ಪಿ’ ಎಂದೇ ಕರೆಸಿಕೊಳ್ಳುವ ದೇವಿಶ್ರೀ ಪ್ರಸಾದ್ ಬಲು ಜನಪ್ರಿಯ ಸಂಗೀತ ನಿರ್ದೇಶ. 27 ವರ್ಷಗಳಿಂದಲೂ ತೆಲುಗು ಮಾತ್ರವೇ ಅಲ್ಲದೆ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ಸಂಗೀತ ನೀಡುತ್ತಲೇ ಬರುತ್ತಿದ್ದಾರೆ. 2023ರ ‘ಪುಷ್ಪ’ ಸಿನಿಮಾದ ವರೆಗೆ ಹಲವಾರು ಬ್ಲಾಕ್ ಬಸ್ಟರ್ ಆಲ್ಬಂಗಳನ್ನು ದೇವಿಶ್ರೀ ಪ್ರಸಾದ್ ನೀಡಿದ್ದಾರೆ. ಚಿತ್ರರಂಗಕ್ಕೆ ಬಂದು 27 ವರ್ಷಗಳ ಬಳಿಕ ಈಗ ಇದ್ದಕ್ಕಿದ್ದಂತೆ ಸಿನಿಮಾ ನಾಯಕ ಆಗಿದ್ದಾರೆ ದೇವಿಶ್ರೀ ಪ್ರಸಾದ್.

ದೇವಿ ಶ್ರೀ ಪ್ರಸಾದ್ ಅವರು ‘ಯಲ್ಲಮ್ಮ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇಂದು ಡಿಎಸ್ಪಿ ಅವರ ಹುಟ್ಟುಹಬ್ಬದ ವಿಶೇಷವಾಗಿ ‘ಯಲ್ಲಮ್ಮ’ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ‘ಯಲ್ಲಮ್ಮ’ ತಂಡ ಡಿಎಸ್​​ಪಿ ಅವರ ಲುಕ್‌ ಅನ್ನು ಸಖತ್‌ ಸಿಂಪಲ್‌ ಆಗಿ ಪ್ರಸೆಂಟ್‌ ಮಾಡಿದೆ. ಸಾಮಾನ್ಯ ಉಡುಪಿನಲ್ಲಿ, ಕೈಯಲ್ಲಿ ಕಿರೀಟ ಹಿಡಿದು, ಸಖತ್‌ ಸಿಂಪಲ್‌ ಆಗಿ ಕಾಣಿಸಿಕೊಂಡಿದ್ದಾರೆ ಡಿಎಸ್​​ಪಿ. ಪರ್ಶಿ ಅನ್ನೋ ಪಾತ್ರದಲ್ಲಿ ದೇವಿ ಶ್ರೀ ಪ್ರಸಾದ್‌ ಅಭಿನಯಿಸುತ್ತಿದ್ದಾರೆ.

ಈ ಹಿಂದೆ ‘ಬಲಗಂ’ ಹೆಸರಿನ ಸಿನಿಮಾ ನಿರ್ದೇಶಿಸಿ, ತೆಲುಗು ಪ್ರೇಕ್ಷಕರನ್ನು ಸೆಳೆದಿದ್ದ ಹಾಸ್ಯ ಕಲಾವಿದ ವೇಣು ಯೆಲ್ದಾಂಡಿ ಈಗ ‘ಯಲ್ಲಮ್ಮ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅವರು ನಿರ್ದೇಶಿಸಿದ್ದ ‘ಬಲಗಂ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಅತ್ಯಂತ ಕಡಿಮೆ ಬಜೆಟ್​​ನ ಸಿನಿಮಾ ಆಗಿದ್ದರೂ ಸಹ ಸಿನಿಮಾವನ್ನು ಜನ ಕೊಂಡಾಡಿದ್ದರು. ಖುದ್ದು ಮೆಗಾಸ್ಟಾರ್ ಚಿರಂಜೀವಿ, ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರು. ಆ ಸಿನಿಮಾಕ್ಕೆ ದಿಲ್ ರಾಜು ಬಂಡವಾಳ ಹೂಡಿದ್ದರು. ಈಗ ಮತ್ತೆ ‘ಯಲ್ಲಮ್ಮ’ ಸಿನಿಮಾಕ್ಕೂ ಅವರೇ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:ಭಾರತದಲ್ಲೇ ‘ಧುರಂಧರ್’, ‘ಪಠಾಣ್’ ಸಿನಿಮಾಗಳ ಹಿಂದಿಕ್ಕಿದ ಸ್ಪೈಡರ್ ಮ್ಯಾನ್

ಯಲ್ಲಮ್ಮ ಸಿನಿಮಾದಲ್ಲಿ ಡಿಎಸ್ಪಿ ಕೇವಲ ನಾಯಕನಾಗಿ ನಟಿಸಿರುವುದಷ್ಟೇ ಅಲ್ಲ, ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅವರ ಸಂಗೀತ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ನಿರ್ದೇಶಕ ವೇಣು ಯೆಲ್ದಂಡಿ, ‘ಬಲಗಂ’ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ ನಂತರ, ‘ಯಲ್ಲಮ್ಮ’ ಸಿನಿಮಾ ಕೈಗೆತ್ತಿಕೊಂಡಿದ್ದು, ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. ಮೊದಲಿಗೆ ಈ ಸಿನಿಮಾದ ನಾಯಕನಾಗಿ ನಾಯಕ ನಟ ನಿತಿನ್ ಆಯ್ಕೆ ಆಗಿದ್ದರು. ನಿತಿನ್ ಅವರೇ ‘ಯಲ್ಲಮ್ಮ’ ಸಿನಿಮಾದ ನಾಯಕ ಎಂದು ಘೋಷಣೆ ಸಹ ಆಗಿತ್ತು. ಆದರೆ ಅಚಾನಕ್ಕಾಗಿ ಅವರನ್ನು ಬದಲಾಯಿಸಿ, ನಟನೆಯನ್ನೇ ಮಾಡದ ಡಿಎಸ್​​ಪಿ ಅವರನ್ನು ನಾಯಕನನ್ನಾಗಿ ಹಾಕಿಕೊಳ್ಳಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us