‘ನನ್ನ ತಗಲಾಕಿಸಬೇಡ’; ಪ್ರೇಮ್ಗೆ ಮನವಿ ಮಾಡಿದ ಕಿಚ್ಚ ಸುದೀಪ್
ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವ ದಾದಾ ಆನ್ ಹಾಲಿಡೇ ಸಿನಿಮಾ ಲಾಂಚ್ ವೇಳೆ ಹಾಡಿನ ಬಿಡುಗಡೆ ಬಗ್ಗೆ ಪ್ರೇಮ್ ನೀಡಿದ ಹೇಳಿಕೆಗೆ ಸುದೀಪ್ ತಮಾಷೆಯಾಗಿಯೇ ತಿರುಗೇಟು ನೀಡಿದ್ದಾರೆ. ಮುಂಚಿತವಾಗಿಯೇ ಹೇಳಿ ತಗಲಾಕಿಕೊಳ್ಳಬೇಡಿ ಎಂದು ಸಲಹೆ ನೀಡಿರುವ ಅವರು, ಎಲ್ಲವೂ ಪಕ್ಕಾ ಆದ ನಂತರವೇ ಘೋಷಣೆ ಮಾಡಬೇಕು ಎಂದಿದ್ದಾರೆ. ಈ ಚಿತ್ರ 2027ರಲ್ಲಿ ತೆರೆಕಾಣಲಿದೆ.

ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ನಟ ಕಿಚ್ಚ ಸುದೀಪ್ ನಟಿಸುತ್ತಿರುವ ಹೊಸ ಸಿನಿಮಾ ‘ದಾದಾ ಆನ್ ಹಾಲಿಡೇ’ ಲಾಂಚ್ ಕಾರ್ಯಕ್ರಮದಲ್ಲಿ ಸುದೀಪ್ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಬಹಳ ಸಮಯದ ನಂತರ ಪ್ರೇಮ್ ಅವರ ಕಾಂಬಿನೇಷನ್ ಒಟ್ಟಿಗೆ ಬಂದಿರುವುದಕ್ಕೆ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರೇಮ್ ಅವರೊಂದಿಗೆ ಚರ್ಚೆಗೆ ಕುಳಿತಾಗಲೇ ದೊಡ್ಡ ಸಿನಿಮಾ, ಚಿಕ್ಕ ಸಿನಿಮಾ ಎಂಬ ಲೆಕ್ಕಾಚಾರಕ್ಕಿಂತ ವೇಗವಾಗಿ ಮುಂದುವರಿಯಬೇಕು ಎಂದು ನಿರ್ಧರಿಸಿದ್ದಾಗಿ ಸುದೀಪ್ ತಿಳಿಸಿದ್ದಾರೆ. ಚಿತ್ರೀಕರಣದ ವಿಚಾರದಲ್ಲೂ ತಾವು ಮತ್ತು ಪ್ರೇಮ್ ಸಮಯಕ್ಕೆ ಸರಿಯಾಗಿ ಸೆಟ್‌ನಲ್ಲಿ ಇರುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಚಿತ್ರದ ಹಾಡು ಜನವರಿಯಲ್ಲಿ ಬರುತ್ತದೆ ಎಂದು ಪ್ರೇಮ್ ಹೇಳಿದ ಮಾತಿಗೆ ಸುದೀಪ್ ತಮಾಷೆಯಾಗಿಯೇ ಕಿವಿಮಾತು ಹೇಳಿದ್ದಾರೆ. ‘ಇವಾಗ್ಲೇ ಜನವರಿಯಲ್ಲಿ ಸಾಂಗ್ ರಿಲೀಸ್ ಅಂತ ಹೇಳ್ಬೇಡಪ್ಪ. ನಿಮ್ಮ ದೊಡ್ಡ ಸಮಸ್ಯೆ ಇದೇ. ಮುಂಚೆಯೇ ಹೇಳಿ ತಗಲಾಕಿಕೊಳ್ತೀರಾ, ನಾನು ತಗಲಾಕಿಕೊಳ್ತೀನಿ. ನಿಮ್ಮ ಮಾತಿಗೆ ನಾನು ಬೈಸ್ಕೊತೀನಿ’ ಎಂದು ನಗುತ್ತೇ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ‘ನಟನೆ ದೇವಸ್ಥಾನ ಇದ್ದಂತೆ, ಅದಕ್ಕೆ ದ್ರೋಹ ಮಾಡಲ್ಲ’; ಟೀಕಿಸಿದವರಿಗೆ ಕಿಚ್ಚನ ಖಡಕ್ ಉತ್ತರ
ಮುಂದುವರಿದು ಮಾತನಾಡಿದ ಸುದೀಪ್, ಯಾವುದೇ ವಿಷಯ ಕನ್ಫರ್ಮ್ ಆದ ನಂತರವೇ ಅನೌನ್ಸ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಎಲ್ಲವೂ ಪಕ್ಕಾ ಆದಾಗ ಘೋಷಣೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುದೀಪ್ ಅವರ ನಿರ್ದೇಶನದ ‘ದಾದಾ ಆನ್ ಹಾಲಿಡೇ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರವನ್ನು ಜನರು 2027ರಲ್ಲಿ ಕಣ್ತುಂಬಿಕೊಳ್ಳಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




