Lucky Ali Death Hoax: ಗಾಯಕ ಲಕ್ಕಿ ಅಲಿ ನಿಧನರಾಗಿದ್ದಾರೆ ಎಂಬುದು ಸುಳ್ಳುಸುದ್ದಿ: ನಫೀಸಾ ಅಲಿ

| Updated By: Digi Tech Desk

Updated on: May 05, 2021 | 2:42 PM

ಗಾಯಕ ಲಕ್ಕಿ ಅಲಿ ಬೆಂಗಳೂರಿನಲ್ಲಿರುವ ತೋಟದ ಮನೆಯಲ್ಲಿದ್ದಾರೆ. ಅವರು ಆರೋಗ್ಯದಿಂದಿದ್ದಾರೆ ಎಂದು ಹೇಳಿದ್ದಾರೆ. ನಾನು ಎರಡು ಮೂರು ಬಾರಿ ಲಕ್ಕಿ ಜತೆ ಮಾತನಾಡಿದ್ದೇನೆ. ಅವರು ಆರೋಗ್ಯದಿಂದಿದ್ದಾರೆ. ಅವರಿಗೆ ಕೊವಿಡ್ ಇಲ್ಲ ಎಂದು ನಫೀಸಾ ಅಲಿ ಹೇಳಿದ್ದಾರೆ.

Lucky Ali Death Hoax: ಗಾಯಕ ಲಕ್ಕಿ ಅಲಿ ನಿಧನರಾಗಿದ್ದಾರೆ ಎಂಬುದು ಸುಳ್ಳುಸುದ್ದಿ: ನಫೀಸಾ ಅಲಿ
ಲಕ್ಕಿ ಅಲಿ (ಕೃಪೆ: ಫೇಸ್​ಬುಕ್)
Follow us on

ಮುಂಬೈ: ದೇಶದಲ್ಲಿ ಕೊವಿಡ್ ಸಾಂಕ್ರಾಮಿಕದಿಂದ ಜನರು ಸಾವಿಗೀಡಾಗುತ್ತಿರುವ ಆತಂಕದ ಹೊತ್ತಿನಲ್ಲಿ ಖ್ಯಾತ ಗಾಯಕ, ನಟ ಲಕ್ಕಿ ಅಲಿ ಕೊರೊನಾವೈರಸ್​ನಿಂದ ಮೃತಪಟ್ಟಿದ್ದಾರೆ ಎಂಬ ಸುಳ್ಳುಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಆದರೆ ಇದು ಸುಳ್ಳುಸುದ್ದಿ ಎಂದು ಲಕ್ಕಿ ಅಲಿಯ ಆಪ್ತ ಗೆಳತಿ ನಫೀಸಾ ಅಲಿ ಹೇಳಿದ್ದಾರೆ.

ಇಟಿ ಟೈಮ್ಸ್ ಜತೆ ಮಾತನಾಡಿದ ನಫೀಸಾ ಅಲಿ, ಗಾಯಕ ಲಕ್ಕಿ ಅಲಿ ಬೆಂಗಳೂರಿನಲ್ಲಿರುವ ತೋಟದ ಮನೆಯಲ್ಲಿದ್ದಾರೆ. ಅವರು ಆರೋಗ್ಯದಿಂದಿದ್ದಾರೆ ಎಂದು ಹೇಳಿದ್ದಾರೆ. ನಾನು ಎರಡು ಮೂರು ಬಾರಿ ಲಕ್ಕಿ ಜತೆ ಮಾತನಾಡಿದ್ದೇನೆ. ಅವರು ಆರೋಗ್ಯದಿಂದಿದ್ದಾರೆ. ಅವರಿಗೆ ಕೊವಿಡ್ ಇಲ್ಲ. ಅವರಲ್ಲಿ ಪ್ರತಿರೋಧ ಶಕ್ತಿ ಇದೆ. ಅವರು ಸಂಗೀತ ಸಂಯೋಜನೆಯಲ್ಲಿ ಬ್ಯುಸಿಯಾಗಿದ್ದಾರೆ. ವರ್ಚುವಲ್ ಸಂಗೀತೋತ್ಸವದ ಬಗ್ಗೆಯೇ ನಾವು ಮಾತನಾಡಿದ್ದೆವು. ಅವರು ಅವರ ಕುಟುಂಬದೊಂದಿಗೆ ಬೆಂಗಳೂರಿನ ತೋಟದ ಮನೆಯಲ್ಲಿದ್ದಾರೆ. ನಾನು ಈಗಷ್ಟೇ ಅವರಲ್ಲಿ ಮಾತನಾಡಿದೆ. ಅವರು ಆರಾಮವಾಗಿದ್ದಾರೆ ಎಂದಿದ್ದಾರೆ.

ಲಕ್ಕಿ ಅಲಿ ಸದ್ಯ ಎಲ್ಲಿಯೂ ಸುದ್ದಿಯಲ್ಲಿಲ್ಲ. ಕಳೆದ ಬಾರಿ ವಿಡಿಯೊವೊಂದನ್ನು ಹರಿಬಿಟ್ಟು ಅಭಿಮಾನಿಗಳನ್ನು ಸಂತಸಗೊಳಿಸಿದ್ದರು. 90ರ ದಶಕದಲ್ಲಿ ಹಿಟ್ ಆಗಿದ್ದ ಓ ಸನಂ ಹಾಡನ್ನು ಗಿಟಾರ್ ನುಡಿಸಿ ಹಾಡುತ್ತಿರುವ ವಿಡಿಯೊವನ್ನು ಲಕ್ಕಿ ಅಲಿ ಕಳೆದ ವರ್ಷ ಪೋಸ್ಟಿಸಿದ್ದು, ಅದು ವೈರಲ್ ಆಗಿತ್ತು. ಈ ಹಾಡಿನಲ್ಲಿ ಮರ್ ಭೀ ಗಯೇ ತೋ ಬೂಲ್ ನ ಜಾನಾ ( ನಾನು ಸತ್ತರೂ ಮರೆಯಬೇಡ) ಎಂಬ ಸಾಲು ಬಂದಾಗ ಲಕ್ಕಿ ಹಾಡು ನಿಲ್ಲಿಸಿ ಸ್ವಲ್ಪ ಸಾವರಿಸಿಕೊಂಡು ಮುಂದಿನ ಸಾಲು ಹಾಡಿದ್ದರು. ಇದು ಅಭಿಮಾನಿಗಳನ್ನು ಭಾವುಕರನ್ನಾಗಿಸಿತ್ತು.


ಗೋವಾದಲ್ಲಿ ಲಕ್ಕಿ ಅಲಿಯ ಸಂಗೀತ ಕಾರ್ಯಕ್ರಮದ ವಿಡಿಯೊವನ್ನು ಶೇರ್ ಮಾಡಿದ ನಫೀಸಾಅಲಿ , ಅರಂಬೋಲ್ ನಲ್ಲಿ ಲಕ್ಕಿ ಅಲಿಯವರ ಲೈವ್ ಸಂಗೀತ ಕಾರ್ಯಕ್ರಮದ ವಿಡಿಯೊ ಎಂದು ಬರೆದಿದ್ದಾರೆ.

ಇದನ್ನೂ ಓದಿ: Maratha Reservation: ಮರಾಠಾ ಮೀಸಲಾತಿ ಕಾನೂನಿನ ಪ್ರಕಾರ ಇಲ್ಲ ಎಂದು ತೀರ್ಪು ನೀಡಿದ ಸರ್ವೋಚ್ಛ ನ್ಯಾಯಾಲಯ

Kichcha Sudeep: ಸುದೀಪ್​ ಗುಣಮುಖರಾದ ಬೆನ್ನಲ್ಲೇ ಕಹಿ ಸುದ್ದಿ; ಈ ವಾರವೂ ಬಿಗ್ ಬಾಸ್​ಗೆ ಕಿಚ್ಚ ಗೈರು

Published On - 1:34 pm, Wed, 5 May 21