ನೆರವೇರಿತು ನಾಗ ಚೈತನ್ಯ-ಶೋಭಿತಾ ಮದುವೆ; ಶುಭಕೋರಿದ ಸೆಲೆಬ್ರಿಟಿಗಳು

|

Updated on: Dec 04, 2024 | 11:14 PM

ನಾಗ ಚೈತನ್ಯ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಪ್ರೇಯಸಿ ಶೋಭಿತಾ ಜೊತೆ ಅವರು ಹಸೆಮಣೆ ಏರಿದ್ದಾರೆ. ಹೈದರಾಬಾದ್​ನಲ್ಲಿ ಇಂದು (ಡಿ.4) ಈ ಮದುವೆ ನಡೆದಿದೆ. ಆಪ್ತರು, ಕುಟುಂಬದರು ಈ ವಿವಾಹ ಸಮಾರಂಭದಲ್ಲಿ ಭಾಗಿ ಆಗಿದ್ದರು. ಅಕ್ಕಿನೇನಿ ನಾಗಾರ್ಜುನ ಅವರು ಮಗನ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಕೋರಿದ್ದಾರೆ.

ನೆರವೇರಿತು ನಾಗ ಚೈತನ್ಯ-ಶೋಭಿತಾ ಮದುವೆ; ಶುಭಕೋರಿದ ಸೆಲೆಬ್ರಿಟಿಗಳು
ನಾಗ ಚೈತನ್ಯ, ನಾಗಾರ್ಜುನ, ಶೋಭಿತಾ
Follow us on

ನಟಿ ಸಮಂತಾಗೆ ವಿಚ್ಛೇದನ ನೀಡಿದ್ದ ನಾಗ ಚೈತನ್ಯ ಅವರು ಈಗ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಹಸೆಮಣೆ ಏರಿದ್ದಾರೆ. ಇಂದು (ಡಿಸೆಂಬರ್​ 4) ಹೈದರಾಬಾದ್​ನಲ್ಲಿ ಈ ಮದುವೆ ನಡೆದಿದೆ. ಕೆಲವು ಗಣ್ಯರು ಮದುವೆಗೆ ಸಾಕ್ಷಿ ಆಗಿದ್ದಾರೆ. ನಾಗ ಚೈತನ್ಯ ತಂದೆ, ಹಿರಿಯ ನಟ ನಾಗಾರ್ಜುನ ಅವರು ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ಜೀವನ ಆರಂಭಿಸುತ್ತಿರುವ ಮಗನಿಗೆ ಅವರು ಆಶೀರ್ವಾದ ಮಾಡಿದ್ದಾರೆ. ನಾಗ ಚೈತನ್ಯ ಮತ್ತು ಶೋಭಿತಾ ಅವರ ಮದುವೆಯ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

‘ನಾಗ ಚೈತನ್ಯ ಮತ್ತು ಶೋಭಿತಾ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಇದು ನನಗೆ ಒಂದು ಭಾವನಾತ್ಮಕ ಕ್ಷಣ. ನಾಗ ಚೈತನ್ಯಗೆ ಅಭಿನಂದನೆಗಳು. ನಮ್ಮ ಕುಟುಂಬಕ್ಕೆ ಶೋಭಿತಾಗೆ ಸ್ವಾಗತ. ನೀನು ಈಗಾಗಲೇ ನಮ್ಮ ಬದುಕಿನಲ್ಲಿ ಸಾಕಷ್ಟು ಖುಷಿ ತಂದಿರುವೆ’ ಎಂದು ಅಕ್ಕಿನೇನಿ ನಾಗಾರ್ಜುನ ಅವರು ಮದುವೆಯ ಈ ಫೋಟೋಗಳ ಜೊತೆ ಕ್ಯಾಪ್ಷನ್ ನೀಡಿದ್ದಾರೆ.

ಹೈದರಾಬಾದ್​ನ ‘ಅನ್ನಪೂರ್ಣ ಸ್ಟುಡಿಯೋ’ದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಅವರ ಮದುವೆ ನಡೆದಿದೆ. ಕುಟುಂಬದ ಸದಸ್ಯರು ಮತ್ತು ಆಪ್ತ ಬಳಗದವರು ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೂರ್ತಿಯ ಕೆಳಗೆ ಮದುವೆ ನಡೆದಿರುವುದು ವಿಶೇಷ ಎಂದು ನಾಗಾರ್ಜುನ ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಹೊಸ ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

‘ಅಕ್ಕಾ ನೀನು ಅತ್ಯಂತ ಸುಂದರ ವಧು’; ಶೋಭಿತಾ ಬಗ್ಗೆ ಕಮೆಂಟ್ ಮಾಡಿದ ಸಮಂತಾ

ತೆಲುಗು ಚಿತ್ರರಂಗದಲ್ಲಿ ನಾಗ ಚೈತನ್ಯ ಅವರು ಬೇಡಿಕೆ ಹೊಂದಿದ್ದಾರೆ. ವೆಬ್ ಸಿರೀಸ್​ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು. 2017ರಲ್ಲಿ ಅವರಿಬ್ಬರ ಮದುವೆ ನಡೆದಿತ್ತು. ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಅವರು 2021ರಲ್ಲಿ ವಿಚ್ಛೇದನ ಪಡೆದಿದ್ದರು. ಈಗಲೂ ಸಮಂತಾ ಅವರು ಸಿಂಗಲ್ ಆಗಿದ್ದಾರೆ. ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ಶೋಭಿತಾ ಜೊತೆ ನಾಗ ಚೈತನ್ಯ ಡೇಟಿಂಗ್ ಮಾಡಲು ಆರಂಭಿಸಿದ್ದರು. ಈಗ ಅವರಿಬ್ಬರು ಪತಿ-ಪತ್ನಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.