ಮದುವೆ ಹೇಗಿರಬೇಕು? ಕನಸು ರಿವೀಲ್ ಮಾಡಿದ ನಾಗ ಚೈತನ್ಯ

| Updated By: ಮಂಜುನಾಥ ಸಿ.

Updated on: Aug 29, 2024 | 5:55 PM

ನಾಗ ಚೈತನ್ಯ ಇತ್ತೀಚೆಗಷ್ಟೆ ನಟಿ ಶೋಭಿತಾ ಧುಲಿಪಾಲ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ನಾಗ ಚೈತನ್ಯಗೆ ಎರಡನೇ ಮದುವೆ. ತಮ್ಮ ಎರಡನೇ ಮದುವೆಯ ಬಗ್ಗೆ ಉತ್ಸುಕರಾಗಿರುವ ನಾಗ ಚೈತನ್ಯ, ತಮ್ಮ ಮದುವೆ ಎಲ್ಲಿ ನಡೆಯಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ.

ಮದುವೆ ಹೇಗಿರಬೇಕು? ಕನಸು ರಿವೀಲ್ ಮಾಡಿದ ನಾಗ ಚೈತನ್ಯ
Follow us on

ನಾಗ ಚೈತನ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿ ಇದ್ದಾರೆ. ಅವರು ಮದುವೆ ಉಡುಗೆ ಧರಿಸಿ ಗಮನ ಸೆಳೆದರು. ಅವರು ಮದುವೆ ಆಗುತ್ತಿದ್ದಾರಾ ಎನ್ನುವ ಪ್ರಶ್ನೆ ಕಾಡಿತ್ತು. ಆದರೆ, ಜಾಹೀರಾತೊಂದರ ಕಾರಣಕ್ಕೆ ಅವರು ಈ ರೀತಿ ಬಟ್ಟೆ ಧರಿಸಿದ್ದರಂತೆ. ಅವರು ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ಸದ್ಯ ಮದುವೆ ಯಾವಾಗ ಎನ್ನುವ ಬಗ್ಗೆ ಶೀಘ್ರವೇ ಮಾಹಿತಿ ನೀಡೋದಾಗಿಯೂ ಅವರು ಒಪ್ಪಿಕೊಂಡಿದ್ದಾರೆ.

ಮಾಧ್ಯಮಗಳ ಮುಂದೆ ಮದುವೆ ಹುಡುಗನ ಗೆಟಪ್ನಲ್ಲೇ ನಾಗ ಚೈತನ್ಯ ಬಂದರು. ಮದುವೆ ಹೇಗೆ ನಡೆಯಬೇಕು ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ಮದುವೆ ಯಾವಾಗಲೂ ದೊಡ್ಡದಾಗಿ ನಡಯಬೇಕು ಎಂದಿಲ್ಲ. ಜನರು ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. ಆ ರೀತಿಯಲ್ಲಿ ಮದುವೆ ಆಗಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ ಅವರು.

ನಾಗ ಚೈತನ್ಯ ಹಾಗೂ ಶೋಭಿತಾ ಆಗಸ್ಟ್ 8ರಂದು ಎಂಗೇಜ್ಮೆಂಟ್ ಮಾಡಿಕೊಂಡರು. ಈ ಮೂಲಕ ಸಂಬಂಧವನ್ನು ಅವರು ಅಧಿಕೃತ ಮಾಡಿದರು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ ದಿನಾಂಕಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಇವರ ಎಂಗೇಜ್ಮೆಂಟ್ ವಿಚಾರವನ್ನು ಅಕ್ಕಿನೇನಿ ನಾಗಾರ್ಜುನ ಅವರು ಮೊದಲು ರಿವೀಲ್ ಮಾಡಿದ್ದರು.

ಇದನ್ನೂ ಓದಿ:ನಾಗ ಚೈತನ್ಯ ಮೊದಲ ಮದುವೆ ಗೋವಾದಲ್ಲಿ, ಎರಡನೇ ಮದುವೆ ಎಲ್ಲಿ?

ಹಳೆಯ ಮದುವೆ

ನಾಗ ಚೈತನ್ಯ ಅವರಿಗೆ ಇದು ಎರಡನೇ ಮದುವೆ. ಈ ಮೊದಲು ಸಮಂತಾ ಅವರನ್ನು ನಾಗ ಚೈತನ್ಯ ವಿವಾಹ ಆಗಿದ್ದರು. ಇಬ್ಬರ ಮದುವೆ ನಡೆದಿದ್ದು 2017ರಲ್ಲಿ. ಸರಿಯಾಗಿ ನಾಲ್ಕು ವರ್ಷ ಸಂಸಾರ ಮಾಡುವುದರೊಳಗೆ ಇಬ್ಬರೂ ಬೇರೆ ಆಗುವ ಸ್ಥಿತಿ ಬಂದೊದಗಿದೆ. 2021ರಲ್ಲಿ ಈ ಜೋಡಿ ಬೇರೆ ಆದರು.

ರಾಜಸ್ಥಾನದಲ್ಲಿ

ರಾಜಸ್ಥಾನದಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ ಆಗುತ್ತಿದ್ದಾರೆ ಎಂದು ವರದಿ ಆಗಿದೆ. ಡೆಸ್ಟಿನೇಷನ್ ವೆಡ್ಡಿಂಗ್ ಬಗ್ಗೆ ನಾಗ ಚೈತನ್ಯ ಅವರು ದೊಡ್ಡ ಮಟ್ಟದಲ್ಲಿ ಕನಸು ಕಂಡಿದ್ದಾರೆ ಎನ್ನಲಾಗುತ್ತಿದೆ. ನಾಗ ಚೈತನ್ಯ ಅವರು ರಾಜಸ್ಥಾನದಲ್ಲಿ ಮದುವೆ ಆಗುವ ಕನಸು ಕಂಡಿದ್ದಾರಂತೆ. ಈ ಮೊದಲು ನಾಗ ಚೈತನ್ಯ ಹಾಗೂ ಸಮಂತಾ ಮದುವೆ ನಡೆದಿದ್ದು ಗೋವಾದಲ್ಲಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ