ನಾಗ ಚೈತನ್ಯ ಮೊದಲ ಮದುವೆ ಗೋವಾದಲ್ಲಿ, ಎರಡನೇ ಮದುವೆ ಎಲ್ಲಿ?
Naga Chaitanya: ನಾಗ ಚೈತನ್ಯ ಹಾಗೂ ಸಮಂತಾ ಋತ್ ಪ್ರಭು ಗೋವಾನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ನಾಗ ಚೈತನ್ಯ ಎರಡನೇ ಮದುವೆ ಆಗಲು ಮುಂದಾಗಿದ್ದಾರೆ. ಅವರ ಎರಡನೇ ಮದುವೆ ಎಲ್ಲಿ ನಡೆಯಲಿದೆ?
ಶೋಭಿತಾ ದುಲಿಪಾಲ್ ಹಾಗೂ ನಾಗ ಚೈತನ್ಯ ಅವರು ಇತ್ತಿಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂಬಂಧ ಒಪ್ಪಿಕೊಳ್ಳುವ ಮೂಲಕ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಅವರ ನಿಶ್ಚಿತಾರ್ಥದ ಬಳಿಕ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ. ಇಬ್ಬರೂ ಡೆಸ್ಟಿನೇಷನ್ ಮದುವೆ ಆಗುವ ಆಲೋಚನೆಯಲ್ಲಿ ಇದ್ದಾರೆ. ಈ ಮೊದಲು ನಾಗ ಚೈತನ್ಯ ಗೋವಾದಲ್ಲಿ ವಿವಾಹ ಆಗಿದ್ದರು. ಈಗ ಅವರು ರಾಜಸ್ಥಾನದಲ್ಲಿ ವಿವಾಹ ಆಗಲಿದ್ದಾರೆ ಎನ್ನಲಾಗಿದೆ. ಈ ವರ್ಷಾಂತ್ಯಕ್ಕೆ ಅಥವಾ 2025ರ ಆರಂಭದಲ್ಲಿ ಮದುವೆ ಜರುಗಲಿದೆ ಎನ್ನಲಾಗಿದೆ.
ಬಟ್ಟೆ ಬ್ರ್ಯಾಂಡ್ ಒಂದರ ಪ್ರಚಾರದಲ್ಲಿ ನಾಗ ಚೈತನ್ಯ ಭಾಗಿ ಆಗಿದ್ದರು. ಅವರು ಮದುವೆ ಗೆಟಪ್ನಲ್ಲಿ ಗಮನ ಸೆಳೆದಿದ್ದಾರೆ. ಮಾಧ್ಯನಗಳ ಜೊತೆಗೆ ಅವರು ಮಾತನಾಡಿದ್ದಾರೆ. ‘ನಾನು ನನ್ನ ಪಾರ್ಟ್ನರ್ನ ಭೇಟಿ ಮಾಡಿದೆ ಎನ್ನುವ ಖುಷಿ ಇದೆ. ಮದುವೆ ವಿವರವನ್ನು ಶೀಘ್ರವೇ ತಿಳಿಸುತ್ತೇವೆ’ ಎಂದು ನಾಗ ಚೈತನ್ಯ ಅವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ ನಾಗ ಚೈತನ್ಯ ಮದುವೆ ಬಗ್ಗೆ ಚರ್ಚೆ ನಿಂತಿಲ್ಲ.
ನಾಗ ಚೈತನ್ಯ ಅವರು ರಾಜಸ್ಥಾನದಲ್ಲಿ ಮದುವೆಗೆ ಪ್ಲ್ಯಾನ್ ಮಾಡಿದ್ದಾರಂತೆ. ರಾಜಸ್ಥಾನದಲ್ಲಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ವಿವಾಹ ಆಗಿದ್ದಾರೆ. 5 ಸ್ಟಾರ್ ಹೋಟೆಲ್ ಒಂದನ್ನು ಬುಕ್ ಮಾಡಲು ಈ ಜೋಡಿ ಚಿಂತನೆ ನಡೆಸಿದೆ. ರಾಜಸ್ಥಾನದಲ್ಲಿ ಹಲವು ಐಷಾರಾಮಿ ಹೋಟೆಲ್ಗಳು ಇವೆ. ಎಲ್ಲವೂ ರಾಜಸ್ಥಾನಿ ಸ್ಟೈಲ್ನಲ್ಲೇ ಇದೆ. ಈ ಮೊದಲು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಲ್ಲಿ ವಿವಾಹ ಆಗಿದ್ದರು.
ಇದನ್ನೂ ಓದಿ:ಮತ್ತಷ್ಟು ತೆಳ್ಳಗಾದ ನಟಿ ಸಮಂತಾ; ಫ್ಯಾನ್ಸ್ಗೆ ಆತಂಕ
ನಾಗ ಚೈತನ್ಯ ಅವರ ಬಳಿ ಸಾಕಷ್ಟು ಹಣ ಇದೆ. ಅವರು ಬೇರೆ ದೇಶಕ್ಕೆ ಹೋಗಿ ಮದುವೆ ಆಗುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ರಾಜಸ್ಥಾನವನ್ನು ತಮ್ಮ ಮದುವೆ ಸ್ಥಳವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ.
ಇತ್ತೀಚೆಗೆ ನಾಗಾರ್ಜುನ ಅವರು ಈ ಜೋಡಿಯ ಬಗ್ಗೆ ಮಾತನಾಡಿದ್ದರು. ನಿಶ್ಚಿತಾರ್ಥ ತಕ್ಷಣಕ್ಕೆ ಆದ ನಿರ್ಧಾರ ಎಂದಿದ್ದ ಅವರು, ಮದುವೆ ಬಗ್ಗೆ ಸದ್ಯಕ್ಕೆ ಚಿಂತನೆ ಎಲ್ಲ ಎಂದು ಹೇಳಿದ್ದರು. ಈ ಬಗ್ಗೆ ಅಕ್ಕಿನೇನಿ ಕುಟುಂಬದ ಕಡೆಯಿಂದ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ