‘ಡ್ಯೂಪ್​ ಇಲ್ಲದೇ ನಾನು ಗಾಜು ಒಡೆದಿದ್ದೆ’: ‘ಲೆಜೆಂಡ್​’ ಬಗ್ಗೆ ಬಾಲಯ್ಯ ಮಾತು

ಮಾರ್ಚ್​ 30ರಂದು ‘ಲೆಜೆಂಡ್’ ಸಿನಿಮಾ ಮರು ಬಿಡುಗಡೆ ಆಗಲಿದೆ. 2014ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ 10 ವರ್ಷಗಳನ್ನು ಪೂರೈಸಿದೆ. ಈಗಲೂ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣಲಿದೆ ಎಂಬ ಭರವಸೆ ಇಡೀ ತಂಡದಲ್ಲಿದೆ. ಮರು ಬಿಡುಗಡೆ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಬಾಲಕೃಷ್ಣ ಅವರು ಮಾತನಾಡಿದರು. ಆ ದಿನಗಳ ನೆನಪನ್ನು ಅವರು ಮೆಲುಕು ಹಾಕಿದರು.

‘ಡ್ಯೂಪ್​ ಇಲ್ಲದೇ ನಾನು ಗಾಜು ಒಡೆದಿದ್ದೆ’: ‘ಲೆಜೆಂಡ್​’ ಬಗ್ಗೆ ಬಾಲಯ್ಯ ಮಾತು
ನಂದಮೂರಿ ಬಾಲಕೃಷ್ಣ

Updated on: Mar 29, 2024 | 10:14 PM

ಟಾಲಿವುಡ್​ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಹಾಗೂ ನಿರ್ದೇಶಕ ಬೋಯಪತಿ ಶ್ರೀನು ಕಾಂಬಿನೇಷನ್​ನ ಬ್ಲಾಕ್‌ಬಸ್ಟರ್ ಸಿನಿಮಾ ‘ಲೆಜೆಂಡ್’ ಬಿಡುಗಡೆಯಾಗಿ ಈಗ 10 ವರ್ಷಗಳನ್ನು ಪೂರೈಸಿದೆ. ಮಾರ್ಚ್​ 30ರಂದು ಈ ಸಿನಿಮಾ ರೀ-ರಿಲೀಸ್​ ಆಗಲಿದೆ ಎಂಬುದು ವಿಶೇಷ. ಈ ಪ್ರಯುಕ್ತ ‘ಲೆಜೆಂಡ್​’ (Legend Movie) ಚಿತ್ರತಂಡದವರು ಹೈದರಾಬಾದ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಲ್ಲದೇ, ಸಿನಿಮಾದ 10 ವರ್ಷಗಳ ಸಂಭ್ರಮವನ್ನು ಆಚರಿಸಲಾಯಿತು. ಸ್ವಿಟ್ಜರ್ಲೆಂಡ್‌ನಲ್ಲಿ ಬೇರೊಂದು ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿರುವ ನಟಿ ಸೋನಾಲ್ ಚೌಹಾನ್ ಅವರು ‘ಲೆಜೆಂಡ್’ ಈವೆಂಟ್‌ನಲ್ಲಿ ಭಾಗವಹಿಸಲು ಅಲ್ಲಿಂದ ಬಂದಿದ್ದಾರೆ ಎಂಬುದನ್ನು ನಿರ್ದೇಶಕ ಬೋಯಪತಿ ಶ್ರೀನು ತಿಳಿಸಿದರು.

‘ನಮ್ಮ ಲೆಜೆಂಡ್ ಸಿನಿಮಾ 3 ವರ್ಷಗಳ ಕಾಲ ಓಡಿತು. ನಮ್ಮ ಕಾಂಬಿನೇಷನ್‌ನ ಸಿಂಹ, ಲೆಜೆಂಡ್ ಮತ್ತು ಅಖಂಡ ಮೂರು ಚಿತ್ರಗಳು ಹಲವು ದಾಖಲೆಗಳನ್ನು ಮುರಿದಿವೆ. ಒಂದು ಸಿನಿಮಾ ಹಿಟ್ ಆದಲ್ಲಿ ಮುಂದಿನ ಸಿನಿಮಾದ ಜವಾಬ್ದಾರಿ ಹೆಚ್ಚುತ್ತದೆ. ನಮ್ಮ ಮುಂದಿನ ಸಿನಿಮಾಗೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುತ್ತೇವೆ. ಸಿಂಹ ಶೀಘ್ರದಲ್ಲೇ 15 ವರ್ಷಗಳನ್ನು ಪೂರೈಸಲಿದ್ದಾರೆ’ ಎಂದು ಬೋಯಪತಿ ಅವರು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡುವಂತೆ ಅವರು ಜಾಗೃತಿ ಮೂಡಿಸಿದರು.

ಇದನ್ನೂ ಓದಿ: ಬಾಲಯ್ಯ ಶೋನಲ್ಲಿ ರಶ್ಮಿಕಾ ಮಂದಣ್ಣ ಲವ್ ವಿಚಾರ ಲೀಕ್; ಇದೆಲ್ಲ ರಣಬೀರ್ ಕೆಲಸ

ನಟ ಬಾಲಯ್ಯ ಅವರು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ‘ಲೆಜೆಂಡ್ ಅನೇಕ ದಾಖಲೆಗಳನ್ನು ಸೃಷ್ಟಿಸಿತು. ಚಿತ್ರವು 2 ಕೇಂದ್ರಗಳಲ್ಲಿ 4 ಶೋಗಳೊಂದಿಗೆ 400 ದಿನಗಳ ಪ್ರದರ್ಶನ ಕಂಡಿತು. 1116 ದಿನಗಳ ಕಾಲ 4 ಶೋಗಳೊಂದಿಗೆ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡ ದಕ್ಷಿಣ ಭಾರತದ ಏಕೈಕ ಸಿನಿಮಾ ಇದು. ನನ್ನ ಸಿನಿಮಾಗಳಲ್ಲಿ ಒಳ್ಳೆಯ ಸಂದೇಶವೂ ಇರುತ್ತದೆ’ ಎಂದು ಬಾಲಕೃಷ್ಣ ಹೇಳಿದರು.

ಇದನ್ನೂ ಓದಿ: ‘ಹನುಮಾನ್​’ ಸಿನಿಮಾ ನೋಡಿ ಭೇಷ್​ ಎಂದ ಬಾಲಯ್ಯ; ಹೆಚ್ಚಿತು ಚಿತ್ರತಂಡದ ಬಲ

‘ನಾನು ವಿಶೇಷವಾಗಿ ಜಗಪತಿ ಬಾಬು ಅವರಿಗೆ ಧನ್ಯವಾದ ಹೇಳಬೇಕು. ಅವರು ನಾಯಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಲೆಜೆಂಡ್ ನಂತರ ವಿಭಿನ್ನ ಪಾತ್ರಗಳನ್ನು ಮಾಡಲು ಪ್ರಾರಂಭಿಸಿದರು. ಚಿತ್ರದಲ್ಲಿ ಕುದುರೆಯೊಂದಿಗೆ ಗಾಜು ಒಡೆಯುವ ದೃಶ್ಯವನ್ನು ಡ್ಯೂಪ್ ಇಲ್ಲದೇ ನಾನು ಮಾಡಿದ್ದೆ. ಬೋಯಪತಿ ಶ್ರೀನು ಅವರು ಡ್ಯೂಪ್ ಬಳಸಲು ಬಯಸಿದ್ದರೂ ನಾನು ಬೇಡ ಎಂದು ಹೇಳಿದ್ದೆ. ಅದನ್ನು ನನ್ನದೇ ರೀತಿಯಲ್ಲಿ ಮಾಡಿದೆ. ನಾನು ಯಾವಾಗಲೂ ನನ್ನ ಪ್ರತಿ ಸಿನಿಮಾವನ್ನು ಮೊದಲನೆಯದು ಎಂದು ಪರಿಗಣಿಸುತ್ತೇನೆ’ ಎಂದು ನಂದಮೂರಿ ಬಾಲಕೃಷ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:11 pm, Fri, 29 March 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us