ರಾಮನ ಭಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮನ ಗೆದ್ದ ಗಾಯಕಿ ಸ್ವಾತಿ ಮಿಶ್ರಾ

ಸ್ವಾತಿ ಮಿಶ್ರಾ ಅವರು ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ. ಹಾಡುವುದರ ಜೊತೆಗೆ ಸಾಹಿತ್ಯವನ್ನೂ ಅವರು ರಚಿಸುತ್ತಾರೆ. ಅನೇಕ ಭಕ್ತಿ ಗೀತೆಗಳನ್ನು ಅವರು ಬರೆದಿದ್ದಾರೆ. ‘ರಾಮ್​ ಆಯೆಂಗೆ..’ ಭಜನೆಯು ಯೂಟ್ಯೂಬ್​ನಲ್ಲಿ 4.4 ಕೋಟಿ​ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಇದನ್ನು ನೋಡಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.

ರಾಮನ ಭಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮನ ಗೆದ್ದ ಗಾಯಕಿ ಸ್ವಾತಿ ಮಿಶ್ರಾ
ಸ್ವಾತಿ ಮಿಶ್ರಾ, ನರೇಂದ್ರ ಮೋದಿ,

Updated on: Jan 04, 2024 | 11:36 AM

ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ಉದ್ಘಾಟನೆಗೆ ದಿನಗಣನೆ ಆರಂಭ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೋಟ್ಯಂತರ ಮಂದಿ ಕಾದಿದ್ದಾರೆ. ಈ ಸಂದರ್ಭದಲ್ಲಿ ಗಾಯಕಿ ಸ್ವಾತಿ ಮಿಶ್ರಾ (Swati Mishra) ಅವರು ಹಾಡಿರುವ ರಾಮನ ಭಜನೆ ವೈರಲ್​ ಆಗಿದೆ. ‘ರಾಮ್​ ಆಯೆಂಗೆ..’ ಎಂಬ ಈ ಭಜನೆಯನ್ನು ಕೇಳಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ‘ರಾಮ್​ ಲಲ್ಲಾನ ಸ್ವಾಗತದ ಸಮಯದಲ್ಲಿ ಸ್ವಾತಿ ಮಿಶ್ರಾ ಅವರ ಈ ಭಜನೆ ಮಂತ್ರಮುಗ್ಧಗೊಳಿಸುವ ರೀತಿಯಲ್ಲಿ ಇದೆ’ ಎಂದು ಬರೆದುಕೊಂಡಿದ್ದಾರೆ.

ಸುಮಧುರ ಕಂಠ ಹೊಂದಿರುವ ಸ್ವಾತಿ ಮಿಶ್ರಾ ಅವರು ಮುಂಬೈನವರು. ತಮ್ಮ ಹಾಡುಗಳ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿರುವ ಅವರು ಅನೇಕ ಹಾಡುಗಳನ್ನು ರಿಲೀಸ್​ ಮಾಡಿದ್ದಾರೆ. ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲೂ ಸ್ವಾತಿ ಮಿಶ್ರಾ ಆ್ಯಕ್ಟೀವ್​ ಆಗಿದ್ದಾರೆ.

ಸ್ವಾತಿ ಮಿಶ್ರಾ ಅವರು ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ. ಹಾಡುವುದರ ಜೊತೆಗೆ ಸಾಹಿತ್ಯವನ್ನೂ ಅವರು ರಚಿಸುತ್ತಾರೆ. ಅನೇಕ ಭಕ್ತಿ ಗೀತೆಗಳನ್ನು ಅವರು ಬರೆದಿದ್ದಾರೆ. ಇತ್ತೀಚೆಗೆ ಅವರು ಬಿಡುಗಡೆ ಮಾಡಿದ ‘ಜನಮ್​ ಭೂಮಿ ಕೆ ಲಾಲ್​ ರಾಮ್​ ಆಯೆ ಹೈ..’ ಹಾಡು ಕೂಡ ಫೇಮಸ್​ ಆಗಿದೆ. ‘ರಾಮ್​ ಆಯೆಂಗೆ..’ ಭಜನೆಯು ಯೂಟ್ಯೂಬ್​ನಲ್ಲಿ 44 ಮಿಲಿಯನ್​ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.

ಅನೇಕ ಕವರ್​ ಸಾಂಗ್​ಗಳಿಗೆ ಸ್ವಾತಿ ಮಿಶ್ರಾ ಧ್ವನಿ ನೀಡಿದ್ದಾರೆ. ‘ರಾಮ್ ಆಯೆಂಗೆ..’ ಭಜನೆಯನ್ನು ಅವರು 2023ರ ಅಕ್ಟೋಬರ್​ನಲ್ಲಿ ರಿಲೀಸ್​ ಮಾಡಿದ್ದರು. ಈಗ ಇದರ ಬಗ್ಗೆ ನರೇಂದ್ರ ಮೋದಿ ಟ್ವೀಟ್​ ಮಾಡಿದ ಬಳಿಕ ವೀಕ್ಷಣೆ ಹೆಚ್ಚಾಗಿದೆ. ಸ್ವಾತಿ ಮಿಶ್ರ ಅವರ ಜನಪ್ರಿಯತೆ ಕೂಡ ದುಪ್ಪಟ್ಟಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಸ್ವಾತಿ ಮಿಶ್ರಾ ಅವರನ್ನು ಏಳೂವರೆ ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:36 am, Thu, 4 January 24