‘ದಿ ಎಲಿಫೆಂಟ್​ ವಿಸ್ಪರರ್ಸ್​’ ಖ್ಯಾತಿಯ ಬೆಳ್ಳಿ-ಬೊಮ್ಮನ್​ ದಂಪತಿಯನ್ನು ಭೇಟಿ ಮಾಡಲಿರುವ ಮೋದಿ

The Elephant Whisperers: ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಬುಡಕಟ್ಟು ಪ್ರದೇಶದ ರಸ್ತೆಗಳನ್ನು ನವೀಕರಣ ಮಾಡಲಾಗಿದೆ. 30ಕ್ಕೂ ಅಧಿಕ ಕಂಬಗಳನ್ನು ನಿಲ್ಲಿಸಿ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ.

‘ದಿ ಎಲಿಫೆಂಟ್​ ವಿಸ್ಪರರ್ಸ್​’ ಖ್ಯಾತಿಯ ಬೆಳ್ಳಿ-ಬೊಮ್ಮನ್​ ದಂಪತಿಯನ್ನು ಭೇಟಿ ಮಾಡಲಿರುವ ಮೋದಿ
ಬೆಳ್ಳಿ, ಬೊಮ್ಮನ್, ನರೇಂದ್ರ ಮೋದಿ

Updated on: Apr 04, 2023 | 5:48 PM

ಭಾರತಕ್ಕೆ ಆಸ್ಕರ್​ ಪ್ರಶಸ್ತಿ ತಂದುಕೊಟ್ಟು ‘ದಿ ಎಲಿಫೆಂಟ್​ ವಿಸ್ಪರರ್ಸ್​’ (The Elephant Whisperers) ಸಾಕ್ಷ್ಯಚಿತ್ರ ಸಾಕಷ್ಟು ಫೇಮಸ್​ ಆಗಿದೆ. ಈ ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡ ಬೆಳ್ಳಿ ಮತ್ತು ಬೊಮ್ಮನ್​ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭೇಟಿ ಮಾಡಲಿದ್ದಾರೆ. ಅನಾಥ ಆನೆಗಳನ್ನು ಸಾಕುವ ಕಾಯಕದಲ್ಲಿ ಈ ದಂಪತಿ ತೊಡಗಿಕೊಂಡಿದ್ದಾರೆ. ಅವರ ಜೀವನದ ಕಥೆಯನ್ನು ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ. ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರಕ್ಕೆ ಮೋದಿ ಅವರು ಏಪ್ರಿಲ್​ 9ರಂದು ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಬೆಳ್ಳಿ ಮತ್ತು ಬೊಮ್ಮನ್​ (Bellie and Bomman) ದಂಪತಿ ಜೊತೆ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಮಾಡಲಾಗುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿರುವ ಪ್ರದೇಶಗಳಲ್ಲಿ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಏಪ್ರಿಲ್​ 7ರಿಂದ ಏಪ್ರಿಲ್​ 9ರವರೆಗೆ ಹೋಟೆಲ್​, ಆನೆ ಸಫಾರಿಯನ್ನು ನಿರ್ಬಂಧಿಸಲಾಗಿದೆ. ಪ್ರವಾಸಿ ವಾಹನಗಳ ಪ್ರವೇಶವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಮೋದಿ ಆಗಮಿಸುವ ಹೆಲಿಕಾಪ್ಟರ್​ ನಿಲುಗಡೆಗಾಗಿ ಹೆಲಿಪ್ಯಾಡ್​ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: Bomman and Bellie: ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡ ಮಾವುತರಿಗೆ ತಮಿಳುನಾಡು ಸಿಎಂ ಬಂಪರ್​ ಕೊಡುಗೆ

ಇದನ್ನೂ ಓದಿ
Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 
Ram Charan: ‘ಭಾರತೀಯರಿಗೆ ಆಸ್ಕರ್​ ಪ್ರಶಸ್ತಿ ಅಂದ್ರೆ ಒಲಂಪಿಕ್ಸ್​ ಗೋಲ್ಡ್​ ಮೆಡಲ್​ ಇದ್ದಂಗೆ’: ರಾಮ್​ ಚರಣ್​

ಮೋದಿ ಆಗಮನದ ಹಿನ್ನೆಲೆಯಲ್ಲಿ ಬುಡಕಟ್ಟು ಪ್ರದೇಶದ ರಸ್ತೆಗಳನ್ನು ನವೀಕರಣ ಮಾಡಲಾಗಿದೆ. 30ಕ್ಕೂ ಅಧಿಕ ಕಂಬಗಳನ್ನು ನಿಲ್ಲಿಸಿ, ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ತಮಿಳುನಾಡು ಅರಣ್ಯ ಇಲಾಖೆಯ ಭಾಗವಾಗಿ ಆನೆಗಳನ್ನು ಸಾಕುವ ಮಾವುತರಾಗಿ ಬೊಮ್ಮನ್​ ಮತ್ತು ಬೆಳ್ಳಿ ದಂಪತಿ ಕೆಲಸ ಮಾಡುತ್ತಿದ್ದಾರೆ. ಅವರ ಕುರಿತಾದ ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಕ್ಕೆ ಆಸ್ಕರ್​ ಪ್ರಶಸ್ತಿ ಬಂದ ಬಳಿಕ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಕೂಡ ಭೇಟಿ ಮಾಡಿದ್ದರು.

ಇದನ್ನೂ ಓದಿ: The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 

ಕಾರ್ತಿಕಿ​ ಗೋನ್ಸಾಲ್ವಿಸ್​​ ಅವರು ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಅವರಿಗೆ ಆಸ್ಕರ್​ ಪ್ರಶಸ್ತಿ ಸಿಕ್ಕಿರುವುದು ವಿಶೇಷ. ಬೊಮ್ಮನ್​ ಮತ್ತು ಬೆಳ್ಳಿ ದಂಪತಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರು ಸನ್ಮಾನಿಸಿರುವುದಕ್ಕೆ ಕಾರ್ತಿಕಿ​ ಗೋನ್ಸಾಲ್ವಿಸ್​ ಸಂತಸ ವ್ಯಕ್ತಪಡಿಸಿದ್ದರು. ಆ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಅನಾಥ ಆನೆ ಮರಿಗಳನ್ನು ಬೊಮ್ಮನ್​ ಮತ್ತು ಬೆಳ್ಳಿ ಸಾಕುತ್ತಾರೆ. ಆದರೆ ಆನೆಗಳು ದೊಡ್ಡದಾದ ಬಳಿಕ ಅವುಗಳನ್ನು ಬೇರೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಸ್ವಂತ ಮಕ್ಕಳಂತೆ ಸಾಕಿದ ಆನೆಗಳನ್ನು ದೂರ ಮಾಡುವ ಸಂದರ್ಭ ಬೊಮ್ಮನ್​ ಮತ್ತು ಬೆಳ್ಳಿಗೆ ತುಂಬ ಭಾವುಕವಾಗಿರುತ್ತದೆ. ಈ ಎಲ್ಲ ಅಂಶಗಳನ್ನು ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:48 pm, Tue, 4 April 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us