
ನಟಿ ಪವಿತ್ರಾ ಲೋಕೇಶ್ (Pavitra Lokesh) ಹಾಗೂ ತೆಲುಗು ನಟ ನರೇಶ್ ಬಾಬು (Naresh Babu) ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಕಷ್ಟು ವೈರಲ್ ಆಗಿತ್ತು. ಆದರೆ, ಇದನ್ನು ಈ ಜೋಡಿ ಅಲ್ಲ ಗಳೆದಿತ್ತು. ಇದು ಕೇವಲ ವದಂತಿ ಎಂದು ಸ್ಪಷ್ಟನೆ ನೀಡುವ ಕೆಲಸವನ್ನು ಅವರು ಮಾಡಿದ್ದರು. ಆದರೆ, ಇತ್ತೀಚೆಗೆ ವೈರಲ್ ಆಗಿದ್ದ ವಿಡಿಯೋ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇಬ್ಬರೂ ಪರಸ್ಪರ ತುಟಿಗೆ ಮುತ್ತಿಟ್ಟುಕೊಳ್ಳುತ್ತಿರುವ ವಿಡಿಯೋ ಇದಾಗಿತ್ತು. ಈ ವಿಡಿಯೋ ನೋಡಿ ಈ ಜೋಡಿ ಮದುವೆ ಆಗುತ್ತಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದು ಸಿನಿಮಾ ಪ್ರಚಾರದ ಗಿಮಿಕ್ ಎಂದು ಹೇಳಲಾಗುತ್ತಿದೆ.
ಪವಿತ್ರಾ ಲೋಕೇಶ್ ಹಾಗೂ ನರೇಶ್ ಮಧ್ಯೆ ಪ್ರೀತಿ ಚಿಗುರಿದೆ ಎನ್ನಲಾಗಿತ್ತು. ಈ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ಈ ವಿಚಾರದಲ್ಲಿ ನರೇಶ್ ಹಾಗೂ ಅವರ ಪತ್ನಿ ರಮ್ಯಾ ಕಿತ್ತಾಡಿಕೊಂಡಿದ್ದರು. ಈ ವಿವಾದ ತಣ್ಣಗಾಯಿತು ಎನ್ನುವಾಗ ನರೇಶ್ ಕಡೆಯಿಂದ ದೊಡ್ಡ ಅಪ್ಡೇಟ್ ಸಿಕ್ಕಿತ್ತು. ಪವಿತ್ರಾಗೆ ಕಿಸ್ ಮಾಡುತ್ತಿರುವ ವಿಡಿಯೋನ ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ಶೇರ್ ಮಾಡಿಕೊಂಡಿದ್ದರು. ‘ಹೊಸ ವರ್ಷ, ಹೊಸ ಆರಂಭ. ನಿಮ್ಮೆಲ್ಲರ ಹಾರೈಕೆ ಬೇಕು’ ಎಂದು ಕ್ಯಾಪ್ಷನ್ ನೀಡಿದ್ದರು ನರೇಶ್. ಇವರು ಮದುವೆ ಆಗುತ್ತಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇದರ ಹಿಂದೆ ಪ್ರಚಾರದ ಗಿಮಿಕ್ ಇದೆ ಎನ್ನಲಾಗುತ್ತಿದೆ.
ಪವಿತ್ರಾ ಹಾಗೂ ನರೇಶ್ ‘ಮಲ್ಲಿ ಪೆಳ್ಳಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೆ ಮದುವೆ ಎನ್ನುವ ಅರ್ಥವನ್ನು ಈ ಟೈಟಲ್ ನೀಡುತ್ತದೆ. ಈಗ ವೈರಲ್ ಆಗಿರುವ ವಿಡಿಯೋ ಈ ಸಿನಿಮಾದ್ದೇ ಎಂದು ಹೇಳಲಾಗುತ್ತಿದೆ. ಶೀಘ್ರವೇ ಈ ಸಿನಿಮಾ ರಿಲೀಸ್ ಆಗಲಿದೆ. ಇದರ ಪ್ರಚಾರಕ್ಕಾಗಿ ಈ ಜೋಡಿ ಹೀಗೆ ಮಾಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ನರೇಶ್ ಹಾಗೂ ಪವಿತ್ರಾ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.
ಇದನ್ನೂ ಓದಿ: ಪವಿತ್ರಾ ಲೋಕೇಶ್ ತುಟಿಗೆ ಮುತ್ತಿಟ್ಟು ಮದುವೆ ನ್ಯೂಸ್ ತಿಳಿಸಿದ ನರೇಶ್; ವಿಡಿಯೋ ವೈರಲ್
ಹಲವು ತಿಂಗಳುಗಳಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಜೊತೆಯಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಅವರ ಸಂಬಂಧದ ವಿರುದ್ಧ ನರೇಶ್ ಪತ್ನಿ ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದರೂ ಕೂಡ ಈ ಜೋಡಿ ತಲೆ ಕೆಡಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:59 am, Wed, 4 January 23