ಅಭಿಮಾನಿಗಳಿಗೆ ಗುಟ್ಟಾಗಿ ಸಿಹಿ ಸುದ್ದಿ ನೀಡಿದ ನಯನತಾರಾ-ವಿಘ್ನೇಶ್​ ಶಿವನ್​!

ನಯನತಾರಾ ಕೈಯಲ್ಲಿ ಉಂಗುರ ಇದೆ. ಈ ಉಂಗರ ನೋಡಿದ ಅಭಿಮಾನಿಗಳು ವಿಘ್ನೇಶ್​-ನಯನಾ ಗುಟ್ಟಾಗಿ ಎಂಗೇಜ್​ ಆಗಿದ್ದಾರೆ ಎನ್ನುತ್ತಿದ್ದಾರೆ.

ಅಭಿಮಾನಿಗಳಿಗೆ ಗುಟ್ಟಾಗಿ ಸಿಹಿ ಸುದ್ದಿ ನೀಡಿದ ನಯನತಾರಾ-ವಿಘ್ನೇಶ್​ ಶಿವನ್​!
ವಿಘ್ನೇಶ್​ ಶಿವನ್​ -ನಯನತಾರಾ
Edited By:

Updated on: Mar 25, 2021 | 3:55 PM

ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್​ ಶಿವನ್​ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಇದನ್ನು ಒಪ್ಪಿಕೊಂಡಿದ್ದು ಮಾತ್ರವಲ್ಲ ಬೇರೆ ಬೇರೆ ಕಡೆಗಳಿಗೆ ಸುತ್ತಾಡಲು ತೆರಳಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈವರೆಗೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿರಲಿಲ್ಲ. ಈಗ ಕೇಳಿ ಬರುತ್ತಿರುವ ಅಚ್ಚರಿ ವಿಚಾರ ಎಂದರೆ, ಇಬ್ಬರೂ ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರಂತೆ.

ವಿಘ್ನೇಶ್​ ಶಿವನ್​ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಾಕಿದ್ದಾರೆ. ಈ ಫೋಟೊದಲ್ಲಿ ವಿಘ್ನೇಶ್​ ಅವರ ಎದೆಯ ಮೇಲೆ ನಯನತಾರಾ ಕೈ ಇಟ್ಟುಕೊಂಡಿದ್ದಾರೆ. ಇಷ್ಟೇ ಅಲ್ಲ, ನಯನತಾರಾ ಕೈಯಲ್ಲಿ ಉಂಗುರ ಕೂಡ ಇದೆ. ಈ ಉಂಗರ ನೋಡಿದ ಅಭಿಮಾನಿಗಳು ವಿಘ್ನೇಶ್​-ನಯನಾ ಗುಟ್ಟಾಗಿ ಎಂಗೇಜ್​ ಆಗಿದ್ದಾರೆ ಎನ್ನುತ್ತಿದ್ದಾರೆ.

ಅಂದಹಾಗೆ, ನಯನತಾರಾ ಧರಿಸಿರುವುದು ಎಂಗೇಜ್​​ಮೆಂಟ್ ರಿಂಗೋ ಅಥವಾ ನಿತ್ಯ ಧರಿಸುವ ಉಂಗುರವೋ ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ಈ ಜೋಡಿ ಕಡೆಯಿಂದ ಉತ್ತರ ಬರಬೇಕಿದೆ.

ಇನ್ನು, ನಯನಾ ಮತ್ತು ವಿಘ್ನೇಶ್ ಅವರ ಅಭಿಮಾನಿಗಳು ಇವರನ್ನು ಅಭಿನಂದಿಸುತ್ತಿದ್ದಾರೆ. ಕಾಮೆಂಟ್​ ಬಾಕ್ಸ್​ನಲ್ಲಿ ಶುಭಾಶಯಗಳು ಸುರಿ ಮಳೆ ಹರಿದು ಬಂದಿದೆ. ಅನೇಕರು ಇವರ ವಿವಾಹದ ಡೇಟ್​ ತಿಳಿದುಕೊಳ್ಳಲು ಆಸಕ್ತಿ ತೋರಿದ್ದಾರೆ. 2015 ರಲ್ಲಿ ತೆರೆಗೆ ಬಂದ ವಿಘ್ನೇಶ್ ನಿರ್ದೇಶನದ ನಾನಮ್ ರೌಡಿಧಾನ್ ಚಿತ್ರದಲ್ಲಿ ನಯನತಾರಾ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಇವರಿಗೆ ಉಂಟಾದ ಪರಿಚಯ ಪ್ರೀತಿಗೆ ತಿರುಗಿತ್ತು.

ಇದನ್ನೂ ಓದಿ: BBK8: ಬಿಗ್​ ಬಾಸ್ ಮನೆಯಲ್ಲಿ ರಹಸ್ಯವಾಗಿ ಸಿಗುವ ಸೌಲಭ್ಯಗಳೇನು? ಮಾತಿನ ಮಧ್ಯೆ ಸತ್ಯ ಬಾಯಿಬಿಟ್ಟ ರಘು!