ಮದುವೆಗೂ ಮೊದಲೇ ಸ್ಟಾರ್​ ನಟಿಯ ತಂದೆ ಆಸ್ಪತ್ರೆಗೆ ದಾಖಲು   

| Updated By: ರಾಜೇಶ್ ದುಗ್ಗುಮನೆ

Updated on: Jul 09, 2021 | 10:32 PM

ಕುರಿಯನ್​ ಅವರಿಗೆ ಕಳೆದ ಕೆಲ ತಿಂಗಳಿಂದ ಅನಾರೋಗ್ಯ ಕಾಡುತ್ತಲೇ ಇದೆ. ಈಗ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಮದುವೆಗೂ ಮೊದಲೇ ಸ್ಟಾರ್​ ನಟಿಯ ತಂದೆ ಆಸ್ಪತ್ರೆಗೆ ದಾಖಲು   
ಮದುವೆಗೂ ಮೊದಲೇ ಸ್ಟಾರ್​ ನಟಿಯ ತಂದೆ ಆಸ್ಪತ್ರೆಗೆ ದಾಖಲು   
Follow us on

ಲೇಡಿ ಸೂಪರ್​ಸ್ಟಾರ್​ ಖ್ಯಾತಿಯ ನಯನತಾರಾ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಹೀಗಿರುವಾಗಲೇ ಅವರ ತಂದೆ ಕುರಿಯನ್​ ಕೊಡಿಯಾಟ್ಟು ಕೇರಳದ ಕೊಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂದೆ ಜತೆ ನಯನತಾರಾ ಕೂಡ ಆಸ್ಪತ್ರೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಕುರಿಯನ್​ ಅವರಿಗೆ ಕಳೆದ ಕೆಲ ತಿಂಗಳಿಂದ ಅನಾರೋಗ್ಯ ಕಾಡುತ್ತಲೇ ಇದೆ. ಈಗ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ, ಅವರನ್ನು ಐಸಿಯುಗೆ ದಾಖಲು ಮಾಡಲಾಗಿದೆ.

ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್​ ಶಿವನ್​ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಇದನ್ನು ಒಪ್ಪಿಕೊಂಡಿದ್ದು ಮಾತ್ರವಲ್ಲ ಬೇರೆ ಬೇರೆ ಕಡೆಗಳಿಗೆ ಸುತ್ತಾಡಲು ತೆರಳಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈವರೆಗೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿರಲಿಲ್ಲ. ಇತ್ತೀಚೆ ಇಬ್ಬರೂ ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 2015 ರಲ್ಲಿ ತೆರೆಗೆ ಬಂದ ವಿಘ್ನೇಶ್ ನಿರ್ದೇಶನದ ನಾನಮ್ ರೌಡಿಧಾನ್ ಚಿತ್ರದಲ್ಲಿ ನಯನತಾರಾ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಇವರಿಗೆ ಉಂಟಾದ ಪರಿಚಯ ಪ್ರೀತಿಗೆ ತಿರುಗಿತ್ತು.

ದೇಶಾದ್ಯಂತ ಕೊರೊನಾ ವೈರಸ್​ ಎರಡನೇ ಅಲೆ ಮಿತಿ ಮೀರಿ ಹಬ್ಬುತ್ತಿದೆ. ಸೆಲೆಬ್ರಿಟಿಗಳ ವಲಯದಲ್ಲೂ ಅನೇಕರು ಈ ಮಹಾಮಾರಿಗೆ ಬಲಿ ಆಗಿದ್ದಾರೆ. ಇಂಥ ಸಂದರ್ಭದಲ್ಲಿ ಎಲ್ಲರೂ ವ್ಯಾಕ್ಸಿನ್​ಗಾಗಿ ಮುಗಿಬೀಳುತ್ತಿದ್ದಾರೆ. ಕೊವಿಡ್​ನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವುದು ಸೂಕ್ತ ಮಾರ್ಗ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಸೆಲೆಬ್ರಿಟಿಗಳು ಕೂಡ ಹರಿಬರಿಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ. ಬಹುಭಾಷಾ ನಟಿ ನಯನತಾರಾ ಕೂಡ ಇತ್ತೀಚೆಗೆ ಲಸಿಕೆ ಪಡೆದುಕೊಂಡರು.

ಇದನ್ನೂ ಓದಿ: ಕೊವಿಡ್​ ಲಸಿಕೆ ವಿಚಾರದಲ್ಲಿ ಗೋಲ್​ಮಾಲ್​ ಮಾಡಿದ್ರಾ ನಯನತಾರಾ? ಫೋಟೋ ತೆರೆದಿಟ್ಟ ಅಸಲಿ ಕಥೆ ಇಲ್ಲಿದೆ

Published On - 10:31 pm, Fri, 9 July 21