Nayanthara: ‘ಅನ್ನಪೂರ್ಣಿ’ ಟೀಸರ್​ ಬಿಡುಗಡೆ; ಇದು ನಯನತಾರಾ ನಟನೆಯ 75ನೇ ಸಿನಿಮಾ

| Updated By: ಮದನ್​ ಕುಮಾರ್​

Updated on: Oct 25, 2023 | 7:26 PM

Annapoorani Teaser: ನಯನತಾರಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ‘ಅನ್ನಪೂರ್ಣಿ’ ಸಿನಿಮಾದ ಟೀಸರ್​ ಹಂಚಿಕೊಂಡಿದ್ದಾರೆ. ಟೀಸರ್​ ನೋಡಿ ಅಭಿಮಾನಿಗಳಿಂದ ಪಾಸಿಟಿವ್​ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ನಯನತಾರಾ ಗೆಟಪ್​ ಗಮನ ಸೆಳೆಯುತ್ತಿದೆ. ಇದು ಅವರ 75ನೇ ಸಿನಿಮಾ ಆದ್ದರಿಂದ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Nayanthara: ‘ಅನ್ನಪೂರ್ಣಿ’ ಟೀಸರ್​ ಬಿಡುಗಡೆ; ಇದು ನಯನತಾರಾ ನಟನೆಯ 75ನೇ ಸಿನಿಮಾ
ನಯನತಾರಾ
Follow us on

ಚಿತ್ರರಂಗದಲ್ಲಿ ನಟಿ ನಯನತಾರಾ (Nayanthara) ಅವರಿಗೆ ಇರುವ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ವರ್ಷ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ. ಶಾರುಖ್​ ಖಾನ್​ ಜೊತೆ ನಯನತಾರಾ ನಟಿಸಿದ ‘ಜವಾನ್​’ ಸಿನಿಮಾ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಸಿನಿಮಾದಲ್ಲಿ ಅವರು ಲೇಡಿ ಕಾಪ್​ ಪಾತ್ರ ಮಾಡಿದ್ದರು. ಆ್ಯಕ್ಷನ್​ ದೃಶ್ಯಗಳನ್ನೂ ಅಭಿನಯಿಸಿದ್ದರು. ಆ ಪಾತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿತು. ಹಾಗಂತ ಅದೇ ರೀತಿಯ ಪಾತ್ರಕ್ಕೆ ನಯನತಾರಾ ಅವರು ಗಂಟು ಬಿದ್ದಿಲ್ಲ. ಹೊಸ ಸಿನಿಮಾದಲ್ಲಿ ಅವರು ಸಂಪೂರ್ಣ ಬೇರೆಯದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಝಲಕ್​ ಹೇಗಿರಲಿದೆ ಎಂಬುದು ಈಗ ಗೊತ್ತಾಗಿದೆ. ಹೌದು, ನಯನತಾರಾ ನಟನೆಯ 75ನೇ ಸಿನಿಮಾದ (Nayanthara 75th Movie) ಟೀಸರ್​ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ‘ಅನ್ನಪೂರ್ಣಿ’ (Annapoorani) ಎಂದು ಹೆಸರು ಇಡಲಾಗಿದೆ.

‘ಅನ್ನಪೂರ್ಣಿ’ ಸಿನಿಮಾದಲ್ಲಿ ನಯನತಾರಾ ಅವರು ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮನೆ ಹೇಗಿರುತ್ತದೆ ಎಂಬುದನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ಇದು ಅವರ 75ನೇ ಸಿನಿಮಾ ಆದ್ದರಿಂದ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಸದ್ಯ ಬಿಡುಗಡೆ ಆಗಿರುವ ಟೀಸರ್​ ಗಮನ ಸೆಳೆಯುತ್ತಿದೆ. ಅಭಿಮಾನಿಗಳ ವಲಯದಲ್ಲಿ ಇದು ವೈರಲ್​ ಆಗಿದೆ. ಟೀಸರ್​ನಲ್ಲಿ ಹೆಚ್ಚೇನೂ ಮಾಹಿತಿ ರಿವೀಲ್​ ಆಗಿಲ್ಲವಾದರೂ ಕಥೆಯ ಬಗ್ಗೆ ಕೌತುಕ ಮೂಡಿರುವುದಂತೂ ನಿಜ.

ಮದುವೆ, ಮಕ್ಕಳು ಆದ ಬಳಿಕವೂ ನಯನತಾರಾ ಅವರು ಲೇಡಿ ಸೂಪರ್​ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಅನೇಕ ನಟಿಯರಿಗೆ ಅವರು ಮಾದರಿ ಆಗಿದ್ದಾರೆ. 75 ಸಿನಿಮಾಗಳಲ್ಲಿ ನಟಿಸುವುದು ಎಂದರೆ ಸಣ್ಣ ಮಾತಲ್ಲ. ನಾಯಕಿ ಪ್ರಧಾನ ಸಿನಿಮಾಗಳಲ್ಲೂ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ‘ಅನ್ನಪೂರ್ಣಿ’ ಸಿನಿಮಾ ಕೂಡ ನಾಯಕಿ ಪ್ರಧಾನ ಕಥೆಯನ್ನು ಹೊಂದಿರಲಿದೆ ಎಂಬುದು ಗೊತ್ತಾಗಿದೆ. ಈ ಸಿನಿಮಾದಲ್ಲಿ ನಯನತಾರಾ ಅವರ ಜೊತೆ ಅನೇಕ ಫೇಮಸ್​ ಕಲಾವಿದರು ನಟಿಸಲಿದ್ದಾರೆ.

ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸೋಕೆ ರೆಡಿ ಆದ ನಯನತಾರಾ    

ನಯನತಾರಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ‘ಅನ್ನಪೂರ್ಣಿ’ ಸಿನಿಮಾದ ಟೀಸರ್​ ಹಂಚಿಕೊಂಡಿದ್ದಾರೆ. ಅಚ್ಯುತ್ ಕುಮಾರ್​, ಸತ್ಯರಾಜ್​, ಕಾರ್ತಿಕ್​ ಕುಮಾರ್​, ಸುರೇಶ್​ ಚಕ್ರವರ್ತಿ, ಕೆ.ಎಸ್​. ರವಿಕುಮಾರ್​, ರೇಣುಕಾ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ನೀಲೇಶ್​ ಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಥಮನ್​ ಎಸ್​. ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸತ್ಯನ್​ ಸೂರ್ಯನ್​ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಟೀಸರ್​ ನೋಡಿ ಅಭಿಮಾನಿಗಳಿಂದ ಪಾಸಿಟಿವ್​ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.