ಹನ್ಸಿಕಾ ಅವರಿಂದ ನಯನತಾರಾವರೆಗೆ; ಖಾಸಗಿ ಫೋಟೋ ಲೀಕ್ ಆಗಿ ಸಂಕಷ್ಟ ಅನುಭವಿಸಿದ್ದ ದಕ್ಷಿಣದ ನಟಿಯರಿವರು

ಖಾಸಗಿ ಫೋಟೋ,ವಿಡಿಯೋ ಕೂಡ ಲೀಕ್ ಆಗಿ ಸಂಕಷ್ಟ ಅನುಭವಿಸಿದ ಅನೇಕರಿದ್ದಾರೆ. ಈ ಸಾಲಿನಲ್ಲಿ ನಯನತಾರಾ , ಅಕ್ಷರಾ ಹಾಸನ್ ಮೊದಲಾದವರು ಇದ್ದಾರೆ. ಈ ರೀತಿ ಫೋಟೋಗಳು ವೈರಲ್ ಆದಾಗ ಅವರು ಸಾಕಷ್ಟು ಮುಜುಗರ ಅನುಭವಿಸಿದ್ದಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ಸಂಪೂರ್ಣ ಮಾಹಿತಿ.

ಹನ್ಸಿಕಾ ಅವರಿಂದ ನಯನತಾರಾವರೆಗೆ; ಖಾಸಗಿ ಫೋಟೋ ಲೀಕ್ ಆಗಿ ಸಂಕಷ್ಟ ಅನುಭವಿಸಿದ್ದ ದಕ್ಷಿಣದ ನಟಿಯರಿವರು
ಖಾಸಗಿ ಫೋಟೋ ಲೀಕ್ ಆಗಿ ಸಂಕಷ್ಟ ಅನುಭವಿಸಿದ್ದ ದಕ್ಷಿಣದ ನಟಿಯರಿವರು
Edited By:

Updated on: Sep 17, 2023 | 7:59 AM

ಕೆಲವೊಮ್ಮೆ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ತೊಂದರೆ ಅನುಭವಿಸುತ್ತಾರೆ. ಕೆಲವರು ಬೇಕಾಬಿಟ್ಟಿ ಟ್ರೋಲ್ ಕೂಡ ಆಗುತ್ತಾರೆ. ಖಾಸಗಿ ಫೋಟೋ,ವಿಡಿಯೋ ಕೂಡ ಲೀಕ್ ಆಗುತ್ತದೆ. ಈ ರೀತಿ ಫೋಟೋ ಲೀಕ್ ಆಗಿ ಸಂಕಷ್ಟ ಅನುಭವಿಸಿದ ಅನೇಕರಿದ್ದಾರೆ. ಈ ಸಾಲಿನಲ್ಲಿ ನಯನತಾರಾ (Nayanthara), ಅಕ್ಷರಾ ಹಾಸನ್ ಮೊದಲಾದವರು ಇದ್ದಾರೆ. ಈ ರೀತಿ ಫೋಟೋಗಳು ವೈರಲ್ ಆದಾಗ ಅವರು ಸಾಕಷ್ಟು ಮುಜುಗರ ಅನುಭವಿಸಿದ್ದಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ಸಂಪೂರ್ಣ ಮಾಹಿತಿ.

ಅಕ್ಷರಾ ಹಾಸನ್

ಅಕ್ಷರಾ ಹಾಸನ್ ಅವರು ಕಮಲ್ ಹಾಸನ್ ಮಗಳು ಎನ್ನುವ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಅವರು 2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, ಸಿನಿಮಾದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರ ಖಾಸಗಿ ಫೋಟೋಗಳು ಲೀಕ್ ಆಗಿ ಸಾಕಷ್ಟು ಸುದ್ದಿ ಆಗಿತ್ತು. ಹಾಗಂತ ಇದು ಒಂದಕ್ಕೆ ನಿಂತಿಲ್ಲ. ಅನೇಕ ಬಾರಿ ಈ ಘಟನೆ ಮರುಕಳಿಸಿತ್ತು.

ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಮೋಟ್ವಾನಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2001ರಲ್ಲಿ. ಪುನೀತ್ ರಾಜ್​ಕುಮಾರ್ ನಟನೆಯ ‘ಬಿಂದಾಸ್’ ಸಿನಿಮಾದಲ್ಲೂ ಅವರು ನಟಿಸಿದ್ದರು. ಅವರ ಖಾಸಗಿ ಫೋಟೋಗಳು ಲೀಕ್ ಆಗಿದ್ದವು. ಅವರ ಫೋನ್​ನಿಂದಲೇ ಈ ಫೋಟೋ ಸೋರಿಕೆ ಆಗಿತ್ತು ಎನ್ನಲಾಗಿದೆ. ಸಿಂಬು ಜೊತೆ ಅವರು ರಿಲೇಶನ್​ಶಿಪ್​ನಲ್ಲಿ ಇದ್ದರು ಎನ್ನಲಾಗಿದೆ.

ಆ್ಯಂಡ್ರಿಯಾ ಜೆರೆಮಿಯಾ-ಅನಿರುದ್ಧ್​ ರವಿಚಂದರ್

ಆ್ಯಂಡ್ರಿಯಾ ಅವರು ಆಂಗ್ಲೋ ಇಂಡಿಯನ್ ನಟಿ. ಅವರು ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ರವಿಚಂದರ್ ಅನಿರುದ್ಧ್​ ಜೊತೆ ಅವರು ರಿಲೇಶನ್​ಶಿಪ್​ನಲ್ಲಿದ್ದರು ಎನ್ನಲಾಗಿದೆ. ಅವರಿಬ್ಬರ ಖಾಸಗಿ ಕ್ಷಣದ ಫೋಟೋ ವೈರಲ್ ಆಗಿತ್ತು. ಇದು ಸಾಕಷ್ಟು ಸುದ್ದಿ ಆಗಿತ್ತು. ಅನಿರುದ್ಧ್ ಅವರು ಮ್ಯೂಸಿಕ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಜವಾನ್’ ಹಾಗೂ ‘ಜೈಲರ್’ ಚಿತ್ರಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ತ್ರಿಶಾ ಕೃಷ್ಣನ್

ತ್ರಿಶಾ ಅವರು ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಹೊಂದಿದ್ದಾರೆ. ಅವರು ರಾಣಾ ದಗ್ಗುಬಾಟಿ ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದರು ಎನ್ನಲಾಗಿದೆ. ಧನುಷ್ ಜೊತೆಯೂ ತ್ರಿಷಾ ಪ್ರೀತಿಯಲ್ಲಿದ್ದರು. ಇಬ್ಬರ ಜೊತೆ ಕ್ಲೋಸ್ ಆಗಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿತ್ತು. ಇದನ್ನು ತಮಿಳು ಸಿಂಗರ್ ಸುಚಿತ್ರಾ ಅವರು ಲೀಕ್ ಮಾಡಿದ್ದರು ಎನ್ನಲಾಗಿದೆ.

ವಸುಧರಾ ಕಶ್ಯಪ್

ತಮಿಳು ನಟಿ ವಸುಧರಾ ಕಶ್ಯಪ್ ಅವರ ಖಾಸಗಿ ಫೋಟೋಗಳು ವೈರಲ್ ಆಗಿತ್ತು. ಬಾಯ್​ಫ್ರೆಂಡ್ ಜೊತೆ ಇರುವ ಫೋಟೋಗಳು ಇದಾಗಿತ್ತು. ಇದು ಸಾಕಷ್ಟು ಸುದ್ದಿ ಆಗಿತ್ತು.

ಶ್ರೀರೆಡ್ಡಿ

ತೆಲುಗು ಹಾಗೂ ತಮಿಳು ನಟಿ ಶ್ರೀ ರೆಡ್ಡಿ ಅವರು ಆಗಾಗ ಸುದ್ದು ಆಗುತ್ತಲೇ ಇರುತ್ತಾರೆ. ಅವರು ಅಭಿರಾಮ ದಗ್ಗುಬಾಟಿ ಜೊತೆ ಸುತ್ತಾಟ ನಡೆಸಿದ್ದರು. ತುಟಿಗೆ ತುಟಿ ಒತ್ತಿಕೊಂಡಿರುವ ಫೋಟೋ ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆ ಆಗಿತ್ತು.

ಇದನ್ನೂ ಓದಿ: ಜವಾನ್ ಸಕ್ಸಸ್ ಮೀಟ್​ಗೂ ನಯನತಾರಾ ಗೈರು: ಕಾರಣ ತಿಳಿಸಿದ ಶಾರುಖ್ ಖಾನ್

ರಂಜಿತಾ

ತಮಿಳು ನಟಿ ರಂಜಿತಾ ಬಗ್ಗೆ ಅನೇಕರಿಗೆ ಗೊತ್ತಿದೆ. ಅವರು ನಿತ್ಯಾನಂದ ಸ್ವಾಮಿಜಿ ಅವರ ಜೊತೆ ಆಪ್ತವಾಗಿದ್ದ ಫೋಟೋ, ವಿಡಿಯೋ ವೈರಲ್ ಆಗಿದ್ದವು. ನಂತರ ನಟಿ ದೂರು ದಾಖಲು ಮಾಡಿದ್ದರು. ಆ ವಿಡಿಯೋದಲ್ಲಿ ಇರುವ ವ್ಯಕ್ತಿ ನಾನಲ್ಲ ಎಂದು ಅವರು ವಾದಿಸಿದ್ದರು.

ನಯನತಾರಾ

‘ಜವಾನ್’ ನಟಿ ನಯನತಾರಾ ಕೂಡ ಈ ವಿಚಾರದಲ್ಲಿ ಸಾಕಷ್ಟು ಸುದ್ದಿ ಆಗಿದ್ದರು. ಅವರು ಸಿಂಬು ಜೊತೆ ಆಪ್ತವಾಗಿದ್ದರು. ಸಿಂಬುಗೆ ಕಿಸ್ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಸುದ್ದಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 7:56 am, Sun, 17 September 23

Loading...
Unable to load recommendations.
Follow Us