ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್. ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಹೇಮಾ (Hema) ಈಗ ಜಾಮೀನು ಪಡೆದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಹೊಂದಿರುವ ನಟಿ ಹೇಮಾ ಅವರು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದು ರೇವ್ ಪಾರ್ಟಿ (Rave Party) ಮಾಡಿದ್ದರು ಎಂಬ ಆರೋಪ ಇದೆ. ಈ ಪ್ರಕರಣದಲ್ಲಿ ಅವರನ್ನು ಜೂನ್ 14ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು. ಇಂದು (ಜೂನ್ 12) ಹೇಮಾಗೆ ಜಾಮೀನು (Bail) ಮಂಜೂರು ಮಾಡಲಾಗಿದೆ
ಬೆಂಗಳೂರು ಗ್ರಾಮಾಂತರ ಎನ್ಡಿಪಿಎಸ್ ವಿಶೇಷ ಕೋರ್ಟ್‌ನಿಂದ ನಟಿ ಹೇಮಾಗೆ ಜಾಮೀನು ನೀಡಲಾಗಿದೆ. ಹೇಮಾಳಿಂದ ಯಾವುದೇ ಮಾದಕವಸ್ತು ವಶಕ್ಕೆ ಪಡೆಯಲಾಗಿಲ್ಲ. ಹಲವು ದಿನಗಳ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಹೇಮಾ ಪರ ವಕೀಲ ಮಹೇಶ್ ಕಿರಣ್ ಶೆಟ್ಟಿ ವಾದ ಮಾಡಿದ್ದಾರೆ. ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶಿಸಿದೆ.
ಕೆಲವು ದಿನಗಳ ಹಿಂದೆ ಸಿಸಿಬಿ ಪೊಲೀಸರು ಜೆ.ಆರ್. ಫಾರ್ಮ್ಹೌಸ್ ಮೇಲೆ ದಾಳಿ ನಡೆಸಿದಾಗ ತೆಲುಗು ನಟಿ ಹೇಮಾ ಸಿಕ್ಕಿಬಿದ್ದಿದ್ದರು. ಆ ಸುದ್ದಿ ಹೊರಬಿದ್ದಾಗ ಅದೇ ಫಾರ್ಮ್ಹೌಸ್ನಿಂದಲೇ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಮಾ ಹರಿಬಿಟ್ಟಿದ್ದರು. ತಾವು ಹೈದರಾಬಾದ್ನಲ್ಲಿ ಇರುವುದಾಗಿ ಬಿಂಬಿಸಲು ಆ ವಿಡಿಯೋ ಮೂಲಕ ಹೇಮಾ ಪ್ರಯತ್ನಿಸಿದ್ದರು.
ಇದನ್ನೂ ಓದಿ: ಡ್ರಗ್ಸ್ ಪಾರ್ಟಿ ಕೇಸ್ನಲ್ಲಿ ಅರೆಸ್ಟ್ ಆಗುವಾಗ ಮಾಧ್ಯಮಗಳ ಮೇಲೆ ನಟಿ ಹೇಮಾ ಗರಂ
ಅಲ್ಲದೇ ಬಂಧನ ಆಗುವಾಗಲೂ ಹೇಮಾ ಕೂಗಾಡಿದ್ದರು. ‘ನಾನೇನೂ ತಪ್ಪು ಮಾಡಿಲ್ಲ. ನಾನು ನಿಜವಾಗಿ ಹೈದರಾಬಾದ್ನಿಂದ ವಿಡಿಯೋ ಮಾಡಿದ್ದು. ಸಿಸಿಬಿಯವರು ನೋಡಿ ಹೇಗೆ ಕರೆದುಕೊಂಡು ಹೋಗ್ತಿದ್ದಾರೆ. ನಾನು ಹುಟ್ಟುಹಬ್ಬದ ಕೇಕ್ ಕತ್ತರಿಸಿ ಹೈದರಾಬಾದ್ಗೆ ಬಂದುಬಿಟ್ಟೆ. ನಮ್ಮ ಮನೆಯಿಂದ ಬಿರಿಯಾನಿ ವಿಡಿಯೋ ಹಾಕಿದ್ದೆ. ನಾನು ಡ್ರಗ್ಸ್ ತಗೊಂಡಿಲ್ಲ’ ಎಂದು ಹೇಮಾ ಹೇಳಿದ್ದರು. ಈ ರೀತಿಯಾಗಿ ಹೇಮಾ ಅವರು ಈ ಕೇಸ್ನಲ್ಲಿ ಶುರುವಿನಿಂದಲೂ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಆದರೆ ಪಾರ್ಟಿ ನಡೆದ ಜಾಗದಲ್ಲಿ ಹೇಮಾ ಇದ್ದರು ಎಂಬುದನ್ನು ಬೆಂಗಳೂರು ಪೊಲೀಸರು ಸುದ್ದಿಗೋಷ್ಠಿಯಲ್ಲಿ ಖಚಿತ ಪಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:12 pm, Wed, 12 June 24