ಡ್ರಗ್ಸ್​ ಪಾರ್ಟಿ ಮಾಡಿದ ನಟಿ ಹೇಮಾಗೆ ಬುದ್ಧಿ ಕಲಿಸಲು ಮುಂದಾದ ತೆಲುಗು ಸಿನಿಮಂದಿ?

ತೆಲುಗು ನಟಿ ಹೇಮಾ ಅವರನ್ನು ಸಿನಿಮಾ ಕಲಾವಿದರ ಸಂಘದಿಂದ ಅಮಾನತು ಮಾಡುವ ಬಗ್ಗೆ ಸಂಘದ ಮುಖ್ಯಸ್ಥರು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ. ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯ ಜಿ.ಆರ್​. ಫಾರ್ಮ್​ ಹೌಸ್​ನಲ್ಲಿ ರೇವ್​ ಪಾರ್ಟಿ ಮಾಡಿದ ಆರೋಪ ಹೇಮಾ ಅವರ ಮೇಲಿದೆ.

ಡ್ರಗ್ಸ್​ ಪಾರ್ಟಿ ಮಾಡಿದ ನಟಿ ಹೇಮಾಗೆ ಬುದ್ಧಿ ಕಲಿಸಲು ಮುಂದಾದ ತೆಲುಗು ಸಿನಿಮಂದಿ?
ಹೇಮಾ
Follow us
ಮದನ್​ ಕುಮಾರ್​
|

Updated on: Jun 05, 2024 | 9:24 PM

ಟಾಲಿವುಡ್​ ನಟಿ ಹೇಮಾ (Hema) ಅವರು ಬೆಂಗಳೂರಿನಲ್ಲಿ ರೇವ್​ ಪಾರ್ಟಿ (Rave Party) ಮಾಡಿ ಈಗ ಪೊಲೀಸರ ಅತಿಥಿ ಆಗಿದ್ದಾರೆ. ಸಿಸಿಬಿ ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಜೂನ್​ 14ರ ತನಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ, ಇಂದು (ಜೂನ್​ 5) ಅವರನ್ನು 24 ಗಂಟೆಗಳ ಕಾಲ ಸಿಸಿಬಿ (CCB) ಕಸ್ಟಡಿಗೆ ನೀಡುವಂತೆ ಆನೇಕಲ್​ ಜೆಎಂಎಫ್​ಸಿ ನ್ಯಾಯಾಲಯ ಆದೇಶಿಸಿದೆ. ಇಷ್ಟೆಲ್ಲ ಕಾನೂನಿನ ಸಂಕಷ್ಟ ಎದುರಿಸುತ್ತಿರುವ ಹೇಮಾ ಅವರಿಗೆ ಬುದ್ಧಿ ಕಲಿಸಲು ತೆಲುಗು ಚಿತ್ರರಂಗದ ಕಲಾವಿದರು ಕೂಡ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಆರಂಭದಲ್ಲಿ ಹೇಮಾ ಮೇಲೆ ರೇವ್​ ಪಾರ್ಟಿ ಆರೋಪ ಕೇಳಿಬಂದಾಗ ಅದನ್ನು ಅವರು ತಳ್ಳಿ ಹಾಕಿದ್ದರು. ತಾವು ಬೆಂಗಳೂರಿಗೆ ಹೋಗಿಲ್ಲ, ಹೈದರಾಬಾದ್​ನಲ್ಲೇ ಇರುವುದಾಗಿ ವಿಡಿಯೋ ಮೂಲಕ ಜನರನ್ನು ಮತ್ತು ಮಾಧ್ಯಮದವರನ್ನು ಯಾಮಾರಿಸಲು ಅವರು ಪ್ರಯತ್ನಿಸಿದ್ದರು. ಆದರೆ ಟಾಲಿವುಡ್​ನ ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಅವರು ಹೇಮಾ ಪರ ಹೇಳಿಕೆ ನೀಡಿದ್ದರು. ಆದರೆ ಈಗ ಸಂಘದಿಂದ ಹೇಮಾ ಅವರನ್ನು ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ.

ಈ ಮೊದಲು ಮಾತನಾಡಿದ್ದ ಮಂಚು ವಿಷ್ಣು ಅವರು, ‘ಹೇಮಾ ಅವರು ತಪ್ಪು ಮಾಡಿದ್ದನ್ನು ಪೊಲೀಸರು ಸಾಬೀತುಪಡಿಸಿದರೆ ಖಂಡಿತಾ ಕಲಾವಿದರ ಸಂಘದಿಂದ ಹೇಮಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದರು. ಸದ್ಯದ ಮಾಹಿತಿ ಪ್ರಕಾರ ಹೇಮಾ ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಡ್ರಗ್ಸ್​ ಸೇವನೆ ಸಾಬೀತಾಗಿದೆ. ಆ ಕಾರಣದಿಂದಲೇ ಹೇಮಾ ಅವರನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೇಮಾರನ್ನು ಕಲಾವಿದರ ಸಂಘದಿಂದ ಅಮಾನತು ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಡ್ರಗ್ಸ್​ ಪಾರ್ಟಿ ಕೇಸ್​ನಲ್ಲಿ ಅರೆಸ್ಟ್​ ಆಗುವಾಗ ಮಾಧ್ಯಮಗಳ ಮೇಲೆ ನಟಿ ಹೇಮಾ ಗರಂ

ಸಿನಿಮಾ ಕಲಾವಿದರ ಸಂಘದಿಂದ ಹೇಮಾ ಅವರನ್ನು ಅಮಾನತು ಮಾಡುವ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇಂದು (ಜೂನ್​ 5) ಹೇಮಾರನ್ನು ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ಈ ಹಂತದಲ್ಲೂ ಕೂಡ ತಾವು ನಿರಪರಾಧಿ ಎಂದೇ ಅವರು ವಾದಿಸುತ್ತಿದ್ದಾರೆ. ಸದ್ಯ ತನಿಖೆ ಚುರುಕುಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.