AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂದೀಪ್​ ರೆಡ್ಡಿ ವಂಗಾ ಸಿನಿಮ್ಯಾಟಿಕ್​ ಯೂನಿವರ್ಸ್​ ಕೊನೇ ಹಂತದಲ್ಲಿ ಕ್ಯಾನ್ಸಲ್​

ಸಂದೀಪ್​ ರೆಡ್ಡಿ ವಂಗಾ ಅವರು ನಿರ್ದೇಶಿಸಿದ ಸಿನಿಮಾಗಳಲ್ಲಿನ ರಣ್​ವಿಜಯ್​ ಸಿಂಗ್​ ಮತ್ತು ಕಬೀರ್​ ಸಿಂಗ್​ ಪಾತ್ರಗಳು ‘ಅನಿಮಲ್​’ ಚಿತ್ರದಲ್ಲಿ ಮುಖಾಮುಖಿ ಆಗಬೇಕಿತ್ತು. ಆ ರೀತಿಯಲ್ಲಿ ಸ್ಕ್ರಿಪ್ಟ್​ ಕೂಡ ಸಿದ್ಧವಾಗಿತ್ತು. ಆದರೆ ಆ ದೃಶ್ಯದ ಶೂಟಿಂಗ್​ ಮಾಡಲು ಒಂದು ಸಮಸ್ಯೆ ಎದುರಾಯಿತು. ಆ ಕಾರಣದಿಂದ ಸಿನಿಮ್ಯಾಟಿಕ್​ ಯೂನಿವರ್ಸ್​ ಐಡಿಯಾ ಜಾರಿಗೆ ಬರಲಿಲ್ಲ.

ಸಂದೀಪ್​ ರೆಡ್ಡಿ ವಂಗಾ ಸಿನಿಮ್ಯಾಟಿಕ್​ ಯೂನಿವರ್ಸ್​ ಕೊನೇ ಹಂತದಲ್ಲಿ ಕ್ಯಾನ್ಸಲ್​
ಶಾಹಿದ್​ ಕಪೂರ್​, ರಣಬೀರ್​ ಕಪೂರ್​
ಮದನ್​ ಕುಮಾರ್​
|

Updated on: Jun 05, 2024 | 10:16 PM

Share

ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ (Sandeep Reddy Vanga) ಅವರು ಈವರೆಗೂ ಮಾಡಿರುವುದು ಮೂರು ಸಿನಿಮಾ ಮಾತ್ರ. ಆದರೆ ಅವರಿಗೆ ಸಿಕ್ಕಿರುವ ಯಶಸ್ಸು ಬಹಳ ದೊಡ್ಡದು. ತೆಲುಗಿನಲ್ಲಿ ಅವರು ಮಾಡಿದ ಮೊದಲ ಸಿನಿಮಾ ‘ಅರ್ಜುನ್​ ರೆಡ್ಡಿ’ ಸೂಪರ್​ ಹಿಟ್​ ಆಯಿತು. ಆ ಬಳಿಕ ಅದೇ ಸಿನಿಮಾವನ್ನು ಅವರು ಹಿಂದಿಯಲ್ಲಿ ‘ಕಬೀರ್​ ಸಿಂಗ್​’ (Kabir Singh) ಶೀರ್ಷಿಕೆಯಲ್ಲಿ ರಿಮೇಕ್​ ಮಾಡಿದರು. ನಂತರ ‘ಅನಿಮಲ್​’ ಸಿನಿಮಾಗೆ ನಿರ್ದೇಶನ ಮಾಡಿ ಭಾರಿ ಖ್ಯಾತಿ ಗಳಿಸಿದರು. ವಿಶೇಷ ಏನೆಂದರೆ, ‘ಅನಿಮಲ್​’ (Animal) ಸಿನಿಮಾದಲ್ಲಿ ‘ಸಂದೀಪ್​ ರೆಡ್ಡಿ ವಂಗಾ ಸಿನಿಮ್ಯಾಟಿಕ್​ ಯೂನಿವರ್ಸ್​’ ಮಾಡಲು ಪ್ಲ್ಯಾನ್​ ನಡೆದಿತ್ತು. ಆದರೆ ಕೊನೇ ಹಂತದಲ್ಲಿ ಅದು ಕ್ಯಾನ್ಸಲ್​ ಆಯಿತು.

ಒಬ್ಬರೇ ನಿರ್ದೇಶಕರ ಬೇರೆ ಬೇರೆ ಸಿನಿಮಾಗಳ ಪಾತ್ರಗಳು ಒಂದಕ್ಕೊಂದು ಲಿಂಕ್​ ಹೊಂದಿರುವುದನ್ನು ಸಿನಿಮ್ಯಾಟಿಕ್​ ಯೂನಿವರ್ಸ್​ ಎನ್ನುತ್ತಾರೆ. ತಮಿಳಿನ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಇದನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಕೂಡ ಆ ರೀತಿ ಒಂದು ಪ್ಲ್ಯಾನ್​ ಮಾಡಿಕೊಂಡಿದ್ದರು ಎಂಬ ಮಾಹಿತಿ ಈಗ ತಿಳಿದುಬಂದಿದೆ.

ರಣಬೀರ್​ ಕಪೂರ್​ ಮಾಡಿದ ರಣ್​ವಿಜಯ್​ ಸಿಂಗ್​ ಪಾತ್ರ ಮತ್ತು ಶಾಹಿದ್​ ಕಪೂರ್​ ಮಾಡಿದ್ದ ಕಬೀರ್​ ಸಿಂಗ್​ ಪಾತ್ರಗಳು ‘ಅನಿಮಲ್​’ ಸಿನಿಮಾದಲ್ಲಿ ಒಂದನ್ನೊಂದು ಭೇಟಿ ಮಾಡಬೇಕಿತ್ತು. ರಣ್​ವಿಜಯ್​ ಗುಂಡಿನ ದಾಳಿಗೆ ಒಳಗಾದ ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಅಲ್ಲಿ ಅವನಿಗೆ ಚಿಕಿತ್ಸೆ ನೀಡಲು ಬರುವ ವೈದ್ಯನೇ ಕಬೀರ್ ಸಿಂಗ್​ ಆಗಿರಬೇಕಿತ್ತು. ಆದರೆ ಈ ರೀತಿ ದೃಶ್ಯಕ್ಕೆ ಶಾಹಿದ್​ ಕಪೂರ್​ ಅವರ ಡೇಟ್ಸ್​ ಸಿಗಲಿಲ್ಲ. ಹಾಗಾಗಿ ಕೊನೆ ಹಂತದಲ್ಲಿ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಆ ಐಡಿಯಾವನ್ನು ಕೈ ಬಿಡಬೇಕಾಯಿತು.

ಇದನ್ನೂ ಓದಿ: ‘ಆ ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿದೆ’ ಎಂದ ನಟನಿಗೆ ಸಂದೀಪ್​ ರೆಡ್ಡಿ ವಂಗಾ ನೀಡಿದ ಉತ್ತರ ಏನು?

ಸಂದೀಪ್​ ರೆಡ್ಡಿ ವಂಗಾ ನಿರ್ದೇಶಿಸಿದ ಪ್ರತಿ ಸಿನಿಮಾಗಳು ಕೂಡ ವಿವಾದ ಮಾಡಿಕೊಂಡಿವೆ. ಅವರ ಸಿನಿಮಾದಲ್ಲಿ ಸ್ತ್ರೀ ವಿರೋಧಿ ಅಂಶಗಳು ಇವೆ ಎಂದು ಅನೇಕರು ತಕರಾರು ತೆಗೆದಿದ್ದಾರೆ. ವಿಮರ್ಶಕರು ಕೂಡ ಈ ಸಿನಿಮಾಗಳನ್ನು ತೆಗಳಿದ್ದಾರೆ. ಹಾಗಿದ್ದರೂ ಪ್ರೇಕ್ಷಕರು ‘ಅನಿಮಲ್​’ ಸಿನಿಮಾವನ್ನು ಮುಗಿಬಿದ್ದು ನೋಡಿದರು ಎಂಬುದು ಅಚ್ಚರಿ. ಈಗ ಪ್ರಭಾಸ್​ ಜೊತೆ ‘ಸ್ಪಿರಿಟ್​’ ಸಿನಿಮಾ ಮಾಡಲು ಸಂದೀಪ್​ ರೆಡ್ಡಿ ವಂಗಾ ಸಕಲ ತಯಾರಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್
ಹುಬ್ಬಳ್ಳಿಯ ಜೈನ ಮಂದಿರದಲ್ಲಿ ದರೋಡೆ: ಮುಸುಕುಧಾರಿಗಳಿಂದ ಮೂರ್ತಿ ಧ್ವಂಸ!
ಹುಬ್ಬಳ್ಳಿಯ ಜೈನ ಮಂದಿರದಲ್ಲಿ ದರೋಡೆ: ಮುಸುಕುಧಾರಿಗಳಿಂದ ಮೂರ್ತಿ ಧ್ವಂಸ!
ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ
ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ
ಬೆಂಗಳೂರು- ಹೊಸೂರು ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್ ಜಾಮ್!
ಬೆಂಗಳೂರು- ಹೊಸೂರು ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್ ಜಾಮ್!
10 ಕೆಜಿ ತೂಕದ ಪೇಟ, ಮೋಸಂಬಿ ಹಾರ: ಅರಮನೆಗೆ ಅಭಿಮನ್ಯು ಗ್ರ್ಯಾಂಡ್​​ ಎಂಟ್ರಿ
10 ಕೆಜಿ ತೂಕದ ಪೇಟ, ಮೋಸಂಬಿ ಹಾರ: ಅರಮನೆಗೆ ಅಭಿಮನ್ಯು ಗ್ರ್ಯಾಂಡ್​​ ಎಂಟ್ರಿ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ