‘ಬಜರಂಗಿ ಭಾಯಿಜಾನ್’ ಚಿತ್ರಕ್ಕೆ ಬರಲಿದೆ ಸೀಕ್ವೆಲ್? ಅಪ್ಡೇಟ್ ಕೊಟ್ಟ ಕಬಿರ್ ಖಾನ್
‘ಬಜರಂಗಿ ಭಾಯಿಜಾನ್’ ಸಿನಿಮಾ 2015ರ ಜುಲೈ 17ರಂದು ಬಿಡುಗಡೆ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಅಂದಿನ ಕಾಲಕ್ಕೆ ಈ ಮೊತ್ತ ತುಂಬಾನೇ ದೊಡ್ಡದು. ಈ ಚಿತ್ರಕ್ಕೆ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ.
ಕಬಿರ್ ಖಾನ್ (Kabir Khan) ನಿರ್ದೇಶನದ ‘ಬಜರಂಗಿ ಭಾಯಿಜಾನ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ಕನ್ನಡದ ರಾಕ್ಲೈನ್ ವೆಂಕಟೇಶ್, ನಟ ಸಲ್ಮಾನ್ ಖಾನ್, ಕಬೀರ್ ಖಾನ್ ಒಟ್ಟಾಗಿ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಕರೀನಾ ಕಪೂರ್, ನವಾಜುದ್ದೀನ್ ಸಿದ್ಧಿಕಿ, ಹರ್ಷಾಲಿ ಮಲ್ಹೋತ್ರಾ ನಟಿಸಿದ್ದರು. ಭಾರತದಲ್ಲಿ ಬಂದು ಸಿಲುಕೋ ಪಾಕಿಸ್ತಾನದ ಬಾಲಕಿಯನ್ನು ಆಕೆಯ ಹುಟ್ಟೂರಿಗೆ ತಲುಪಿಸುತ್ತಾನೆ ಕಥಾ ನಾಯಕ. ಈ ಚಿತ್ರಕ್ಕೆ ಸೀಕ್ವೆಲ್ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಬಗ್ಗೆ ಕಬಿರ್ ಖಾನ್ ಅವರು ಉತ್ತರಿಸಿದ್ದಾರೆ.
‘ಬಜರಂಗಿ ಭಾಯಿಜಾನ್’ ಸಿನಿಮಾ 2015ರ ಜುಲೈ 17ರಂದು ಬಿಡುಗಡೆ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಅಂದಿನ ಕಾಲಕ್ಕೆ ಈ ಮೊತ್ತ ತುಂಬಾನೇ ದೊಡ್ಡದು. ಈ ಚಿತ್ರಕ್ಕೆ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ 9 ವರ್ಷಗಳು ಕಳೆದಿವೆ. ಈ ಚಿತ್ರಕ್ಕೆ ಸೀಕ್ವೆಲ್ ಬರಲಿ ಎನ್ನುವ ಬೇಡಿಕೆ ಈಗಲೂ ಇದೆ. ಈ ಬಗ್ಗೆ ಕಬಿರ್ ಖಾನ್ಗೆ ಪ್ರಶ್ನೆ ಮಾಡಲಾಗಿದೆ.
‘ಬಜರಂಗಿ ಭಾಯಿಜಾನ್ ಚಿತ್ರದ ಸೀಕ್ವೆಲ್ಗೆ ಸ್ಕ್ರಿಪ್ಟ್ ರೆಡಿ ಇದೆಯೇ ಎಂದು ಕೇಳಿದರೆ ಇಲ್ಲ ಎಂಬುದು ನನ್ನ ಉತ್ತರ. ಈ ಸಿನಿಮಾನ ಮುಂದುವರಿಸಲು ಕೆಲವು ಆಲೋಚನೆಗಳು ಇವೆ’ ಎಂದಿದ್ದಾರೆ ಅವರು. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ‘ಬಜರಂಗಿ ಭಾಯಿಜಾನ್’ ಚಿತ್ರದಲ್ಲಿ ನಟಿಸಿದ ಬಾಲಕಿಯ 10ನೇ ತರಗತಿ ಅಂಕ ಎಷ್ಟು?
ಈ ಸಿನಿಮಾದ ಸೀಕ್ವೆಲ್ ಎಂದು ಬೇರೆ ಯಾವುದೋ ಕಥೆ ಆರಂಭಿಸಲು ಸಾಧ್ಯವಿಲ್ಲ. ಪಾತ್ರವರ್ಗ ಅದೇ ಇರಬೇಕು. ಹಳೆಯ ಕಥೆಗೂ, ಈಗ ನಡೆಯುವ ಕಥೆಗೂ ಲಿಂಕ್ ಕೊಡಬೇಕು. ಹೀಗಾಗಿ ಯಾವ ರೀತಿಯಲ್ಲಿ ಸಿನಿಮಾ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರದಲ್ಲಿ ಮುನ್ನಿ ಪಾತ್ರ ಮಾಡಿದ್ದ ಹರ್ಷಾಲಿ ಮಲ್ಹೋತ್ರಾಗೆ ಈಗ 16 ವರ್ಷ ವಯಸ್ಸು. ಹೀಗಾಗಿ, ಅವಳು ಬೆಳೆದು ದೊಡ್ಡವಳಾಗಿದ್ದಾಳೆ ಎಂಬ ರೀತಿಯಲ್ಲೇ ಕಥೆಯನ್ನು ತೆಗೆದುಕೊಂಡು ಹೋಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.