ದರ್ಶನ್ ಕೇಸ್​ನಲ್ಲಿ 13 ಜನ ಮಾತ್ರವಲ್ಲ, ಬರೋಬ್ಬರಿ 17 ಆರೋಪಿಗಳು; 4 ಮಂದಿ ನಾಪತ್ತೆ

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್​, ಪವಿತ್ರಾ ಗೌಡ ಹಾಗೂ ಇತರ 13 ಆರೋಪಿಗಳ ಜೊತೆ ಹೊಸದಾಗಿ ಜಗದೀಶ್ ಅಲಿಯಾಸ್ ಜಗ್ಗ, ಅನು, ರವಿ, ರಾಜು ಎಂಬ ನಾಲ್ಕು ಜನರ ಹೆಸರಗಳು ಕೇಳಿಬಂದಿವೆ. ಇವರೆಲ್ಲ ಸದ್ಯಕ್ಕೆ ನಾಪತ್ತೆ ಆಗಿದ್ದಾರೆ. ತಲೆ ತಪ್ಪಿಸಿಕೊಂಡಿರುವ ಈ 4 ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಶುರು ಮಾಡಿದ್ದಾರೆ. ಈ ಆರೋಪಿಗಳು ಸಿಕ್ಕ ನಂತರ ಇನ್ನಷ್ಟು ಹೊಸ ಮಾಹಿತಿಗಳು ಹೊರಬರಲಿದೆ.

ದರ್ಶನ್ ಕೇಸ್​ನಲ್ಲಿ 13 ಜನ ಮಾತ್ರವಲ್ಲ, ಬರೋಬ್ಬರಿ 17 ಆರೋಪಿಗಳು; 4 ಮಂದಿ ನಾಪತ್ತೆ
ದರ್ಶನ್​, ಪವಿತ್ರಾ ಗೌಡ, ಕೊಲೆಯಾದ ರೇಣುಕಾ ಸ್ವಾಮಿ
Follow us
Prajwal Kumar NY
| Updated By: ಮದನ್​ ಕುಮಾರ್​

Updated on: Jun 12, 2024 | 5:36 PM

ನಟ ದರ್ಶನ್​ (Darshan) ಮಾಡಿಕೊಂಡ ವಿವಾದ ದೊಡ್ಡದಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆತಂದು ಸಾಯಿಸಿದ ಆರೋಪ ದರ್ಶನ್​ ಮೇಲಿದೆ. ಅಲ್ಲದೇ ಈ ಕೃತ್ಯದಲ್ಲಿ ಅನೇಕರು ಅರೆಸ್ಟ್​ ಮಾಡಲಾಗಿದ್ದು, ವಿಚಾರಣೆ ಕೂಡ ತೀವ್ರವಾಗಿದೆ. ಮಂಗಳವಾರ (ಜೂನ್​ 11) ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಈ ಕೇಸ್​ನಲ್ಲಿ (Darshan Case) ಭಾಗಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು (ಜೂನ್​ 12) ಲಭ್ಯವಾದ ಮಾಹಿತಿ ಪ್ರಕಾರ ಒಟ್ಟು 17 ಜನರು ಈ ಕೇಸ್​ನಲ್ಲಿ ಆರೋಪಿಗಳಾಗಿದ್ದಾರೆ. ಆ ಪೈಕಿ ನಾಲ್ಕು ಜನರು ನಾಪತ್ತೆ ಆಗಿದ್ದಾರೆ!

ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕಾಗಿ ರೇಣುಕಾ ಸ್ವಾಮಿಯನ್ನು ಅಪಹರಿಸಲಾಗಿತ್ತು. ಬಳಿಕ ಬೆಂಗಳೂರಿನಲ್ಲಿ ಆತನ ಮೇಲೆ ಹಲ್ಲೆ ಮಾಡಲಾಯಿತು. ಕೊಲೆ ನಡೆದ ಬಳಿಕ ರೇಣುಕಾ ಸ್ವಾಮಿಯ ಶವವನ್ನು ರಾಜಕಾಲುವೆಗೆ ಎಸೆಯಲಾಯಿತು. ಒಟ್ಟಾರೆ ಈ ಪ್ರಕರಣದಲ್ಲಿ ಹಲವರು ಕೈ ಜೋಡಿಸಿದ್ದು ಬೆಳಕಿಗೆ ಬಂದಿದೆ. ತನಿಖೆ ಚುರುಕಾದಂತೆಲ್ಲ ಬೇರೆ ಬೇರೆ ಹೆಸರುಗಳು ಹೊರಬರುತ್ತಿವೆ.

ಈ ಕೇಸ್​ನಲ್ಲಿ ಹೊಸದಾಗಿ ಜಗದೀಶ್ ಅಲಿಯಾಸ್ ಜಗ್ಗ, ಅನು, ರವಿ, ರಾಜು ಎಂಬ ನಾಲ್ಕು ಜನರ ಹೆಸರಗಳು ಕೇಳಿಬಂದಿವೆ. ಸದ್ಯಕ್ಕೆ ಇವರೆಲ್ಲ ನಾಪತ್ತೆ ಆಗಿದ್ದಾರೆ. ತಲೆ ತಪ್ಪಿಸಿಕೊಂಡಿರುವ ಈ ನಾಲ್ಕು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಈ ನಾಲ್ವರು ಸಿಕ್ಕ ಬಳಿಕ ಇನ್ನಷ್ಟು ಹೊಸ ಮಾಹಿತಿಗಳು ಹೊರಬರುವುದು ಖಚಿತ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ರೇಣುಕಾ ಸ್ವಾಮಿ ಕುಟುಂಬದವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಠಾಣೆಯಲ್ಲಿರುವ ಕೊಲೆ ಆರೋಪಿ ದರ್ಶನ್​ಗೆ ದೊನ್ನೆ ಬಿರಿಯಾನಿ ತರಿಸಿದ ಪೊಲೀಸರು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾಳೆ. ದರ್ಶನ್​ ಎ2 ಹಾಗೂ ಕೆ.ಪವನ್ ಎ3 ಆಗಿದ್ದಾನೆ. ರಾಘವೇಂದ್ರ ಎ4, ನಂದೀಶ್ ಎ5, ಜಗದೀಶ್ ಅಲಿಯಾಸ್ ಜಗ್ಗ ಎ6, ಅನು ಎ7, ರವಿ ಎ8, ರಾಜು ಎ9, ವಿನಯ್ ಎ10, ನಾಗರಾಜ್ ಎ11, ಲಕ್ಷ್ಮಣ್ ಎ12, ದೀಪಕ್ ಎ13, ಪ್ರದೋಶ್​ ಎ14, ಕಾರ್ತಿಕ್ ಎ15, ಕೇಶವ ಮೂರ್ತಿ ಎ16, ನಿಖಿಲ್ ನಾಯಕ್ ಎ17 ಎಂದು ಕೇಸ್​ ದಾಖಲಾಗಿದೆ. 13 ಮಂದಿ ಈಗ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.