ಭಾರತದಲ್ಲಿ ಜನಪ್ರಿಯವಾಗಿರುವ ಬಹುಪಾಲು ಒಟಿಟಿಗಳಲ್ಲಿ (OTT) ದುಬಾರಿ ಒಟಿಟಿ ಫ್ಲಾಟ್ಪಾರಂ ನೆಟ್ಫ್ಲಿಕ್ಸ್ (Netflix). ಅಮೆಜಾನ್ ಪ್ರೈಂ (Amazon Prime), ಸೋನಿ ಲಿವ್, ಡಿಸ್ನಿ ಪ್ಲಸ್ ಹಾಟ್ಸ್ಟಾರ್, ಜೀ5 ಇನ್ನಿತರೆ ಒಟಿಟಿಗಳು ಚಂದಾದಾರರಿಂದ ವಾರ್ಷಿಕ ಶುಲ್ಕ ಪಡೆದರೆ ನೆಟ್ಫ್ಲಿಕ್ಸ್ ಮಾತ್ರ ದೊಡ್ಡ ಮೊತ್ತದ ಮಾಸಿಕ ಶುಲ್ಕ ಪಡೆಯುತ್ತದೆ. ವಿಶ್ವದಾದ್ಯಂತ ನೆಟ್ಫ್ಲಿಕ್ಸ್ನ ಶುಲ್ಕ ನೀತಿ ಹೀಗೆಯೇ ಇದೆ. ಆದರೆ ಇತ್ತೀಚೆಗೆ ಚಂದಾದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿರುವ ನೆಟ್ಫ್ಲಿಕ್ಸ್ ಇದೀಗ ತನ್ನ ಶುಲ್ಕವನ್ನು ಕಡಿತಗೊಳಿಸಿದೆ.
ವಿಶ್ವದ ಹಲವು ರಾಷ್ಟ್ರಗಳಲ್ಲಿ ಸೇವೆ ಒದಗಿಸುತ್ತಿರುವ ನೆಟ್ಫ್ಲಿಕ್ಸ್ 30 ರಾಷ್ಟ್ರಗಳಲ್ಲಿ ತನ್ನ ಮಾಸಿಕ ಶುಲ್ಕವನ್ನು ಇಳಿಕೆ ಮಾಡಿದೆ. ಶುಲ್ಕ ಇಳಿಸಿರುವ ಜೊತೆಗೆ ಪಾಸ್ವರ್ಡ್ ಶೇರಿಂಗ್ ಅಥವಾ ಪ್ರೊಫೈಲ್ ಶೇರಿಂಗ್ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಿದೆ.
ನೆಟ್ಫ್ಲಿಕ್ಸ್, ಪ್ರಸ್ತುತ, ಈಜಿಫ್ಟ್, ಎಮನ್, ಜೋರ್ಡನ್, ಲಿಬಿಯಾ, ಇರಾನ್, ಕಿನ್ಯಾ, ಕ್ರೊಯೇಶಿಯಾ, ಸ್ಲೊವೇನಿಯಾ, ಬಲ್ಗೇರಿಯಾ, ಈಕ್ವೆಡಾರ್, ವೆನುಜುವೆಲ್ಲಾ, ಇಂಡೋನೇಶಿಯಾ, ವಿಯೆಟ್ನಾಂ, ಥಾಯ್ಲೆಂಡ್, ಫಿಲಿಫೀನ್ಸ್, ಬೋಸ್ನಿಯಾ, ಮೆಕೆಡೋನಿಯಾ, ಇನ್ನೂ ಕೆಲವು ದೇಶಗಳಲ್ಲಿ ತನ್ನ ಮಾಸಿಕ ಶುಲ್ಕದಲ್ಲಿ ಕಡಿತ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಭಾರತ ಇಲ್ಲ. ಕಳೆದ ವರ್ಷವಷ್ಟೆ ಭಾರತದಲ್ಲಿ ನೆಟ್ಫ್ಲಿಕ್ಸ್ ತನ್ನ ಮಾಸಿಕ ಶುಲ್ಕದಲ್ಲಿ ಕಡಿತ ಮಾಡಿತ್ತಾದ್ದರಿಂದ ಈಗ ಮತ್ತೊಮ್ಮೆ ಕಡಿತ ಮಾಡುವ ಗೋಜಿಗೆ ಹೋಗಿಲ್ಲ.
Vijay Varma: ನಟಿ ತಮನ್ನಾಗೆ ಹೊಸ ಹೆಸರು ಟೊಮೆಟೊ; ಪ್ರಿಯಕರ ವಿಜಯ್ ವರ್ಮಾ ಮುದ್ದಾಗಿ ಕರೆಯೋದು ಹೀಗೆ
ಕೆಲವು ರಾಷ್ಟ್ರಗಳಲ್ಲಿ ಹಳೆಯ ದರಕ್ಕಿಂತಲೂ ಶೇ50 ರಷ್ಟು ಕಡಿತವನ್ನು ನೆಟ್ಫ್ಲಿಕ್ಸ್ ಮಾಡಿದೆ. ಆದರೆ ಕೆಲವು ಕಡೆ ಪಾಸ್ವರ್ಡ್ ಶೇರಿಂಗ್ ನಿಯಮಗಳಲ್ಲಿ ತುಸು ಬದಲಾವಣೆಯನ್ನು ಮಾಡಿದೆ. ಆದರೆ ಕೆನಡ, ಲ್ಯಾಟಿನ್ ಅಮೆರಿಕ, ಸ್ಪೇನ್, ನ್ಯೂಜಿಲೆಂಡ್, ಪೋರ್ಚುಗಲ್ಗಳಲ್ಲಿ ಪಾಸ್ವರ್ಡ್ ಶೇರಿಂಗ್ ಮಿತಿಯನ್ನು ಹೆಚ್ಚಿಸಿದೆ. ಇಲ್ಲಿ ಶುಲ್ಕವನ್ನೂ ಸಹ ತುಸು ಹೆಚ್ಚಿಸಿದೆ.
ಭಾರತದಲ್ಲಿ ಈ ಮೊದಲು ನಾಲ್ಕು ಜನ ನೋಡಬಹುದಾದ ಎಚ್ಡಿ ಪ್ರೀಮಿಯಂ ಪ್ಲ್ಯಾನ್ನ ಮಾಸಿಕ ಶುಲ್ಕ 799 ರುಪಾಯಿಗಳಿತ್ತು. ಆದರೆ ಕಳೆದ ವರ್ಷ ಈ ಮೊತ್ತವನ್ನು 649 ರುಪಾಯಿಗಳಿಗೆ ಇಳಿಸಿದೆ ನೆಟ್ಫ್ಲಿಕ್ಸ್. ಆದರೆ ಭಾರತಕ್ಕಿಂತಲೂ ಕಡಿಮೆ ದರದಲ್ಲಿ ಪಾಕಿಸ್ತಾನದಲ್ಲಿ ನೆಟ್ಫ್ಲಿಕ್ಸ್ ಲಭ್ಯವಿದೆ. ಟರ್ಕಿ ಜನರು ಸಹ ಅತ್ಯಂತ ಕಡಿಮೆ ಬೆಲೆಗೆ ನೆಟ್ಫ್ಲಿಕ್ಸ್ ವೀಕ್ಷಿಸುತ್ತಾರೆ. ಇನ್ನು ಸಿಂಗಪುರ ಹಾಗೂ ಅಮೆರಿಕದ ಚಂದಾದಾರರಿಂದ ಭಾರಿ ಶುಲ್ಕವನ್ನು ನೆಟ್ಫ್ಲಿಕ್ಸ್ ಪಡೆಯುತ್ತದೆ. ಅಮೆರಿಕದಲ್ಲಿ ನೆಟ್ಫ್ಲಿಕ್ಸ್ನ ಪ್ರೀಮಿಯಂ ಚಂದಾದಾರಿಕೆ ಪಡೆಯಲು ತಿಂಗಳಿಗೆ 19.99 ಡಾಲರ್ ಅಂದರೆ ಭಾರತದ ಲೆಕ್ಕದಲ್ಲಿ 1657 ರುಪಾಯಿ ತೆರಬೇಕಿದೆ.
ಕಳೆದ ತ್ರೈಮಾಸಿಕದಲ್ಲಿ ನೆಟ್ಫ್ಲಿಕ್ಸ್ನ ಚಂದಾದಾರರ ಸಂಖ್ಯೆ ಭಾರಿ ಕುಸಿದಿತ್ತು. ಹಲವು ದೇಶಗಳಲ್ಲಿ ಶೇ50 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಚಂದಾದಾರರನ್ನು ನೆಟ್ಫ್ಲಿಕ್ಸ್ ಕಳೆದುಕೊಂಡಿತ್ತು. ಹಾಗಾಗಿ ಹಲವು ದೇಶಗಳಲ್ಲಿ ಶುಲ್ಕ ಕಡಿತ ಮಾಡುತ್ತಾ ಬರುತ್ತಿದೆ. ಈಗ ಮೂವತ್ತು ದೇಶಗಳಲ್ಲಿ ಶುಲ್ಕ ಮಾಡಿರುವ ನೆಟ್ಫ್ಲಿಕ್ಸ್ ಇನ್ನೂ ನೂರು ದೇಶಗಳಲ್ಲಿ ಶುಲ್ಕ ಕಡಿತ ಮಾಡವ ಗುರಿ ಹೊಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ