ಹೊಸ ವರ್ಷದಂದು ಗಲ್ಲಾ ಪೆಟ್ಟಿಗೆಯಲ್ಲಿ ಭರಪೂರ ಬೆಳೆ ತೆಗೆದ ‘ಪುಷ್ಪ’, ‘83’; ಚಿತ್ರಗಳ ಒಟ್ಟಾರೆ ಕಲೆಕ್ಷನ್ ಎಷ್ಟು?

New Year 2022: ಹೊಸ ವರ್ಷ ಈಗಾಗಲೇ ಬಿಡುಗಡೆಯಾಗಿದ್ದ ಚಿತ್ರಗಳಿಗೆ ಹರ್ಷ ತಂದಿದೆ. ‘ಪುಷ್ಪ’ ಹಾಗೂ ‘83’ ಚಿತ್ರಗಳ ಗಳಿಕೆ ಏರಿದ್ದು, ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’ ₹ 200 ಕೋಟಿ ಕ್ಲಬ್ ಸನಿಹ ತಲುಪಿದೆ.

ಹೊಸ ವರ್ಷದಂದು ಗಲ್ಲಾ ಪೆಟ್ಟಿಗೆಯಲ್ಲಿ ಭರಪೂರ ಬೆಳೆ ತೆಗೆದ ‘ಪುಷ್ಪ’, ‘83’; ಚಿತ್ರಗಳ ಒಟ್ಟಾರೆ ಕಲೆಕ್ಷನ್ ಎಷ್ಟು?
ರಣವೀರ್ ಸಿಂಗ್, ಅಲ್ಲು ಅರ್ಜುನ್
Updated By: shivaprasad.hs

Updated on: Jan 02, 2022 | 11:43 AM

ಒಮಿಕ್ರಾನ್, ಕೊರೊನಾ ಆತಂಕದಿಂದ ಚಿತ್ರಮಂದಿರಗಳ ಮೇಲೆ ಹಲವು ನಿಯಮಗಳನ್ನು ರಾಜ್ಯಗಳು ಹೇರುತ್ತಿದ್ದರೂ, ಇತ್ತೀಚೆಗೆ ಬಿಡುಗಡೆಯಾದ ಚಿತ್ರಗಳಿಗೆ ಹೊಸ ವರ್ಷ ಲಾಭ ತಂದಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ನಟನೆಯ ‘83’, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೈಸ್’ ಹಾಗೂ ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ (Box Office Collection) ಒಳ್ಳೆಯ ಫಸಲನ್ನೇ ತೆಗೆದಿವೆ. ಮೇಲೆ ತಿಳಿಸಿದಂತೆ ಕೊರನಾತಂಕದಿಂದ ಬಿಡುಗಡೆಯಾಗಬೇಕಿದ್ದ ಚಿತ್ರಗಳು ಮುಂದೂಡಲ್ಪಡುತ್ತಿರುವುದರಿಂದ ಈ ಚಿತ್ರಗಳಿಗೆ ಸದ್ಯ ಹೊಸ ಸ್ಪರ್ಧೆ ಏರ್ಪಡುವುದೂ ಕಷ್ಟ. ಆದ್ದರಿಂದ ಚಿತ್ರಮಂದಿರಗಳ ಲಭ್ಯತೆಯೂ ಈ ಚಿತ್ರಗಳಿಗೆ ಚೆನ್ನಾಗಿಯೇ ಇದೆ. ಈ ಎಲ್ಲಾ ಕಾರಣಗಳು ಹೊಸ ವರ್ಷದ ಸಂದರ್ಭದಲ್ಲಿ ಈ ಚಿತ್ರಗಳ ಗಳಿಕೆಯಲ್ಲಿ ಭಾರಿ ಪರಿಣಾಮ ಬೀರಿದೆ.

ಬಾಕ್ಸಾಫೀಸ್ ಇಂಡಿಯಾ ವರದಿಯ ಪ್ರಕಾರ ಹೊಸ ವರ್ಷದ ಮೊದಲ ದಿನ ಮೂರೂ ಚಿತ್ರಗಳ ಗಳಿಕೆಯಲ್ಲಿ ಸುಮಾರು 70 ಪ್ರತಿಶತ ಏರಿಕೆಯಾಗಿದೆ. ವಿಶೇಷವೆಂದರೆ ಪುಷ್ಪ ಚಿತ್ರದ ಹಿಂದಿ ಅವತರಣಿಕೆ ಈ ಚಿತ್ರಗಳಿಗೆ ದೊಡ್ಡ ಪೈಪೋಟೊ ನೀಡುತ್ತಿದೆ. ಅಲ್ಲದೇ ಸಿಂಗಲ್ ಸ್ಕ್ರೀನ್​ಗಳಲ್ಲಿ ಪಾರಮ್ಯ ಮೆರೆಯುತ್ತಿದ್ದು, ಬಿಡುಗಡೆಯಾದ ಎರಡನೇ ವಾರದಲ್ಲೂ ಕಲೆಕ್ಷನ್ ಜೋರಾಗಿದೆ.

ಶನಿವಾರ ‘83’ ಚಿತ್ರವು 7 ಕೋಟಿ ರೂ ಹಾಗೂ ಸ್ಪೈಡರ್​ಮ್ಯಾನ್.. ಚಿತ್ರವು 5 ಕೋಟಿ ರೂ ಗಳಿಸಿದೆ ಎನ್ನಲಾಗಿದೆ. ಹಾಗೆಯೇ ಪುಷ್ಪದ ಹಿಂದಿ ಅವತರಣಿಕೆಯು ಸುಮಾರು 5.50 ಕೋಟಿ ರೂ ಬಾಚಿಕೊಂಡಿದೆ. ಒಟ್ಟಾರೆ ನೋಡುವುದಾದರೆ ‘83’ ಚಿತ್ರದ ಗಳಿಕೆ ನಿಧಾನವಾಗಿ ಸಾಗುತ್ತಿದೆ. ಮೊದಲ ವಾರಾಂತ್ಯಕ್ಕೆ ಚಿತ್ರ ಸುಮಾರು 68.21 ಕೋಟಿ ರೂ ಗಳಿಸಿದೆ. ಎರಡನೇ ವಾರದ ಎರಡು ದಿನದಲ್ಲಿ ಸುಮಾರು 11 ಕೋಟಿ ಗಳಿಸಿದೆ.

ಇತ್ತ ಸ್ಪೈಡರ್​ಮ್ಯಾನ್ ಚಿತ್ರವು ಭಾರತದಲ್ಲಿ ಗೆಲುವಿನ ನಗೆ ಬೀರಿದೆ. ಪ್ರಸ್ತುತ ಚಿತ್ರದ ಕಲೆಕ್ಷನ್ ₹ 190 ಕೋಟಿ ಆಸುಪಾಸಿದ್ದು, ಶೀಘ್ರದಲ್ಲೇ ₹ 200 ಕೋಟಿ ಕ್ಲಬ್ ಸೇರಲಿದೆ ಎಂದು ಅಂದಾಜಿಸಲಾಗಿದೆ. ‘ಪುಷ್ಪ’ದ ಹಿಂದಿ ಅವತರಣಿಕೆಯು ಇದುವರೆಗೆ ಸುಮಾರು ₹ 56 ಕೋಟಿ ಗಳಿಸಿದೆ.

ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಹಾಗೂ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರಗಳ ಬಿಡುಗಡೆ ಮುಂದೂಡಲ್ಪಟ್ಟಿದೆ. ಹಲವು ಅಡ್ಡಿ ಆತಂಕಗಳು ಇರುವುದರಿಂದ ಅವರು ಸದ್ಯ ಬಿಡುಗಡೆಯ ಬಗ್ಗೆ ಚಿಂತಿಸಿಲ್ಲ. ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಜನವರಿ 14ರಂದು ತೆರೆಕಾಣುತ್ತಿದ್ದು, ಮುಂದೂಡಲ್ಪಟ್ಟಿರುವುದರ ಕುರಿತು ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಕಡೆಯ ಕ್ಷಣದವರೆಗೂ ಕಾದು ನೊಡುವ ತಂತ್ರವನ್ನು ಚಿತ್ರತಂಡ ಅನುಸರಿಸಬಹುದು ಎಂದು ಬಾಕ್ಸಾಫೀಸ್ ಪಂಡಿತರು ಊಹಿಸಿದ್ದಾರೆ. ಈ ಬಿಗ್ ಬಜೆಟ್ ಚಿತ್ರಗಳು ಮುಂದೂಡಲ್ಪಟ್ಟಿರುವುದರಿಂದ ಇನ್ನೆರಡು ವಾರಗಳ ಕಾಲ ‘ಪುಷ್ಪ’, 83 ಹಾಗೂ ಸ್ಪೈಡರ್​ಮ್ಯಾನ್.. ಚಿತ್ರಗಳು ಚಿತ್ರಮಂದಿರದಲ್ಲಿ ತಮ್ಮ ಅಬ್ಬರ ಮುಂದುವರೆಸಲಿವೆ. ಚಿತ್ರಗಳ ಗಳಿಕೆ ಮತ್ತಷ್ಟು ಏರುವ ನಿರೀಕ್ಷೆ ಇದೆ.

ಇದನ್ನೂ ಓದಿ:

Vicky kaushal: ಇಂದೋರ್​ನ ಗಲ್ಲಿಗಳಲ್ಲಿ ಸಾರಾ ಜತೆ ಸುತ್ತಾಡಿದ ವಿಕ್ಕಿ ಕೌಶಲ್​ಗೆ ಎದುರಾಯ್ತು ಸಂಕಷ್ಟ! ಏನಿದು ಪ್ರಕರಣ?

ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ