
ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಎಲ್ಲರೂ ಸೆಲ್ಫಿಗೆ ಮುಗಿ ಬೀಳುತ್ತಾರೆ. ಆದರೆ, ಕೆಲವೊಮ್ಮೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾಗ ಅಲ್ಲಿ ಬೇರೆಯದೇ ರೀತಿಯ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಸಿಕ್ಕಿದ್ದೇ ಚಾನ್ಸ್ ಎಂದು ಕಂಡ ಕಂಡಲ್ಲಿ ಮುಟ್ಟುವ ಕಿಡಿಗೇಡಿಗಳೂ ಇದ್ದಾರೆ. ಈಗ ತೆಲುಗು ನಟಿ ನಿಧಿ ಅಗರ್ವಾಲ್ (Nidhi Agerwal) ಅವರಿಗೂ ಇದೇ ರೀತಿಯ ಅನುಭವ ಆಗಿದೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆ ಹುಟ್ಟುಹಾಕಿದೆ.
ನಿಧಿ ಅವರು ಹುಟ್ಟಿದ್ದು ಆಂಧ್ರದಲ್ಲಿ. ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮಾಡಿದ್ದಾರೆ. ಹೀಗಾಗಿ, ಅವರಿಗೆ ಕರ್ನಾಟಕದ ಲಿಂಕ್ ಇದೆ. 2017ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ಅವರು ಜನಪ್ರಿಯತೆ ಪಡೆದರು. ಈಗ ಪ್ರಭಾಸ್ ನಟನೆಯ ‘ರಾಜಾಸಾಬ್’ ಸಿನಿಮಾಗೆ ನಾಯಕಿ ಆಗಿದ್ದಾರೆ. ಈ ಚಿತ್ರದ ಈವೆಂಟ್ನಲ್ಲಿ ಅವರು ತೊಂದರೆ ಅನುಭವಿಸಿದ್ದಾರೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಜತೆಗಿನ ಮೊದಲ ಶಾಟ್ ನೆನೆದು ಖುಷಿಪಟ್ಟ ನಿಧಿ ಅಗರ್ವಾಲ್
‘ರಾಜಾಸಾಬ್’ ಚಿತ್ರದ ಪ್ರಮೋಷನ್ ಈವೆಂಟ್ ಹೈದರಾಬಾದ್ನ ಲೂಲು ಮಾಲ್ನಲ್ಲಿ ನಡೆದಿದೆ. ಈ ವೇಳೆ ಸಿನಿಮಾದ ನಿರ್ದೇಶಕ ಮಾರುತಿ ಹಾಗೂ ನಟಿ ನಿಧಿ ಭಾಗಿ ಆಗಿದ್ದರು. ಊಹಿಸಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅವರು ಈವೆಂಟ್ ಮುಗಿಸಿ ಬರುವಾಗ ಎಲ್ಲರೂ ಅವರನ್ನು ಮುತ್ತಿಕೊಂಡಿದ್ದಾರೆ. ಅವರ ದೇಹವನ್ನು ಟಚ್ ಮಾಡಲು ಕೆಲವರು ಪ್ರಯತ್ನಿಸಿದ್ದಾರೆ. ಇದರಿಂದ ಅವರಿಗೆ ಮುಜುಗರ ಆಗಿದೆ. ನಿಧಿಗೆ ಇದು ಕಿರುಕುಳದಂತೆ ಕಾಣಿಸಿದೆ.
Actress Nidhi Agarwal Mobbed at Hyderabad Lulu Mall during the song launch of her upcoming film ‘The Raja Saab’, co-starring Prabhas.#NidhiAgarwal #TheRajaSaab #Lulumall #Hyderabad pic.twitter.com/VPV106HCPB
— Bharat Squad (@TheBharatSquad) December 18, 2025
ಬೌನ್ಸರ್ಗಳು ಶ್ರಮ ಹಾಕಿದರೂ ಜನರು ಮುತ್ತಿಕೊಳ್ಳೋದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಕೊನೆಗೂ ಅವರು ಕಾರನ್ನು ಏರಿದ್ದಾರೆ. ಈ ವೇಳೆ ಅವರ ಡ್ರೆಸ್ ಪರಿಸ್ಥಿತಿ ಕೂಡ ಹದಗೆಟ್ಟಿತ್ತು. ಕಾರಿನಲ್ಲಿ ಬಂದು ಕುಳಿತ ಬಳಿಕ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂದರ್ಭದ ವಿಡಿಯೋನ ವೈರಲ್ ಮಾಡಲಾಗುತ್ತಿದೆ. ನಟಿಯ ಜೊತೆ ಅಲ್ಲಿ ನೆರೆದಿದ್ದವರು ನಡೆದುಕೊಂಡಿದ್ದು ಸರಿ ಅಲ್ಲ ಎಂದಿದ್ದಾರೆ. ಇನ್ನೂ ಕೆಲವರು ನಿಜವಾದ ಅಭಿಮಾನಿಗಳು ಈ ರೀತಿ ಮಾಡೋದಿಲ್ಲ ಎನ್ನುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:23 pm, Thu, 18 December 25